Ind vs Zim 1st ODI: 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ, ಟ್ವಿಟ್ಟರ್ ಪ್ರತಿಕ್ರಿಯೆ

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದ್ದು, ತನ್ನ ಗೆಲುವಿನ ಓಟ ಮುಂದುವರಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಕೆ.ಎಲ್ ರಾಹುಲ್ ನಾಯಕತ್ವದ ಟೀಂ ಇಂಡಿಯಾ ಆತಿಥೇಯ ಜಿಂಬಾಬ್ವೆ ತಂಡವನ್ನು 189ರನ್‌ಗಳಿಗೆ ಕಟ್ಟಿಹಾಕಿತು. ದೀಪಕ್ ಚಹಾರ್ ಬೊಂಬಾಟ್ ಕಂಬ್ಯಾಕ್ ಬೌಲಿಂಗ್ ಜೊತೆಗೆ ಪ್ರಸಿದ್ಧ ಕೃಷ್ಣ ಹಾಗೂ ಅಕ್ಷರ್ ಪಟೇಲ್ ದಾಳಿಗೆ ನೆಲಕಚ್ಚಿದ ಜಿಂಬಾಬ್ವೆ ಕಡಿಮೆ ಮೊತ್ತಕ್ಕೆ ಸರ್ವಪತನಗೊಂಡಿತು.
190 ರನ್‌ಗಳ ಗುರಿ ಬೆನ್ನತ್ತಿದ ಭಾರತವು ಯಾವುದೇ ವಿಕೆಟ್ ಕಳೆದುಕೊಳ್ಳದೆ ಗುರಿ ತಲುಪುವ ಮೂಲಕ ಅಮೋಘ ಗೆಲುವು ಸಂಪಾದಿಸಿದೆ. ಓಪನರ್‌ಗಳಾದ ಶಿಖರ್ ಧವನ್ ಅಜೇಯ 81 ಹಾಗೂ ಶುಭಮನ್ ಗಿಲ್ ಅಜೇಯ 82ರನ್ ಕಲೆಹಾಕಿ ತಂಡಕ್ಕೆ 10 ವಿಕೆಟ್ ಜಯ ತಂದುಕೊಟ್ಟರು. ವೆಸ್ಟ್ ಇಂಡೀಸ್‌ನ ಭರ್ಜರಿ ಫಾರ್ಮ್ ಅನ್ನು ಜಿಂಬಾಬ್ವೆಯಲ್ಲೂ ಮುಂದುವರಿಸಿದ್ದಾರೆ.

ಜಿಂಬಾಬ್ವೆ ವಿರುದ್ಧ ಸತತ 13 ಗೆಲುವು
ಈ ಗೆಲುವಿನ ಮೂಲಕ ಭಾರತವು ಜಿಂಬಾಬ್ವೆ ವಿರುದ್ಧ ಸತತ 13 ಗೆಲುವನ್ನ ಸಂಪಾದಿಸಿದೆ. 2013ರಿಂದ ಜಿಂಬಾಬ್ವೆ ವಿರುದ್ಧ ಒಂದು ಸೋಲನ್ನ ಕಾಣದ ಟೀಂ ಇಂಡಿಯಾ ಎದುರಾಳಿ ವಿರುದ್ಧ ಅತಿ ಹೆಚ್ಚು ಗೆಲುವು ಸಂಪಾದಿಸಿದ ಸಾಧನೆ ಮಾಡಿದೆ. ಇದಕ್ಕೂ ಮೊದಲು 1998ರಿಂದ 2004ರವರೆಗೆ 12 ಗೆಲುವನ್ನ ಪಡೆದಿತ್ತು.
IND vs ZIM 1st ODI: ಧವನ್-ಗಿಲ್ 192 ರನ್ ಜತೆಯಾಟ; 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ

10 ವಿಕೆಟ್‌ಗಳ ಗೆಲುವಿನಲ್ಲಿ ಅತಿ ದೊಡ್ಡ ಓಪನಿಂಗ್ ಜೊತೆಯಾಟ
ಇನ್ನು ಟೀಂ ಇಂಡಿಯಾ ಏಕದಿನ ಕ್ರಿಕೆಟ್‌ನಲ್ಲಿ ಇದುವರೆಗೂ ಸಂಪಾದಿಸಿರುವ 10 ವಿಕೆಟ್‌ಗಳ ಗೆಲುವಿನಲ್ಲಿ ಇದು ಎರಡನೇ ಬೃಹತ್ ಓಪನಿಂಗ್ ಜೊತೆಯಾಟವಾಗಿದೆ. ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಜೋಡಿ ಮೊದಲ ವಿಕೆಟ್‌ಗೆ 192ರನ್‌ಗಳ ಕೂಡಿಹಾಕಿದೆ. ಇದಕ್ಕೂ ಮೊದಲು ಜಿಂಬಾಬ್ವೆ ವಿರುದ್ಧವೇ ಶಾರ್ಜಾದಲ್ಲಿ 1998ರಲ್ಲಿ ಭಾರತ 197ರನ್‌ಗಳ ಜೊತೆಯಾಟವಾಡಿತ್ತು. ಮೊದಲ ಮೂರು ಅತಿ ದೊಡ್ಡ ಓಪನಿಂಗ್ ಜೊತೆಯಾಟ ಜಿಂಬಾಬ್ವೆ ವಿರುದ್ಧವೇ ಆಗಿದೆ.
ಪತ್ನಿ ಧನಶ್ರೀ ಜೊತೆಗಿನ ವಿಚ್ಛೇದನ ವದಂತಿ: ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಪ್ರತಿಕ್ರಿಯೆ ಏನು?
ಭಾರತದ ಬೃಹತ್ ಗೆಲುವಿಗೆ ಟ್ವಿಟ್ಟರ್‌ನಲ್ಲಿ ಭಾರೀ ಪ್ರಶಂಸೆ
ಟೀಂ ಇಂಡಿಯಾದ ಭರ್ಜರಿ ಗೆಲುವಿಗೆ ಟ್ವಿಟ್ಟರ್‌ನಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಕಂಬ್ಯಾಕ್ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿದ ದೀಪಕ್ ಚಹಾರ್ ಜೊತೆಗೆ, ಶಿಖರ್ ಧವನ್ ಹಾಗೂ ಶುಭಮನ್ ಗಿಲ್ ಬೊಂಬಾಟ್ ಜೊತೆಯಾಟದ ಕುರಿತಾಗಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
7 ಓವರ್‌ಗಳಲ್ಲಿ 23ರನ್ ನೀಡಿದ ಟಾಪ್ ಆರ್ಡರ್ ವಿಕೆಟ್ ಪಡೆದ ದೀಪಕ್ ಚಹಾರ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಒಲಿದುಬಂದಿದೆ. ಹರಾರೆಯಲ್ಲಿ ಭಾರತದ ಪ್ರದರ್ಶನದ ಕುರಿತು ನೆಟ್ಟಿಗರು ಭೇಷ್ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications