For Quick Alerts
ALLOW NOTIFICATIONS  
For Daily Alerts
 

IND vs ZIM: ಜಿಂಬಾಬ್ವೆಯಲ್ಲಿ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಶುಭ್‌ಮನ್ ಗಿಲ್

IND vs ZIM: Shubman Gill Breaks Sachin Tendulkars Big Record After Hits Century In Zimbabwe

ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ 3ನೇ ಮತ್ತು ಅಂತಿಮ ಪಂದ್ಯದಲ್ಲಿ ಸೋಮವಾರ (ಆಗಸ್ಟ್ 22)ದಂದು ಶುಭಮನ್ ಗಿಲ್ ಅವರು ತಮ್ಮ ಚೊಚ್ಚಲ ಏಕದಿನ ಶತಕವನ್ನು ಗಳಿಸಿ, ವೃತ್ತಿಜೀವನದ ಪ್ರಮುಖ ದಾಖಲೆಯನ್ನು ಸಾಧಿಸಿದರು.

ಶುಬ್ಮನ್ ಗಿಲ್ ಈ ಕ್ಯಾಚ್ ಹಿಡಿಯದೆ ಇದ್ದಿದ್ರೆ ಭಾರತ ಸೋಲಬೇಕಾಗಿತ್ತು | Oneindia Kannada

ಶುಭ್‌ಮನ್ ಗಿಲ್ 15 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದಾಗ ಭಾರತದ ಯುವ ತಾರೆ ಶುಭಮನ್ ಗಿಲ್, ತಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿಯಲು ಇಲ್ಲಿದ್ದೇನೆ ಎಂದು ಮತ್ತೊಮ್ಮೆ ಜಗತ್ತಿಗೆ ಸಾಬೀತುಪಡಿಸಿದರು.

ಶುಭಮನ್ ಗಿಲ್ 97 ಎಸೆತಗಳಲ್ಲಿ 130 ರನ್ ಗಳಿಸಿ ಭಾರತಕ್ಕೆ 8 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಲು ನೆರವಾದರು. ಕೇವಲ 82 ಎಸೆತಗಳಲ್ಲಿ ಶತಕ ಗಳಿಸಿದ ಶುಭ್‌ಮನ್ ಗಿಲ್, ಉಳಿದ ಬ್ಯಾಟರ್‌ಗಳಿಗಿಂತ ಹೆಚ್ಚು ವೇಗದಲ್ಲಿ ಆಡುತ್ತಿದ್ದರು.

16ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಶುಭ್‌ಮನ್ ಗಿಲ್

16ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಶುಭ್‌ಮನ್ ಗಿಲ್

ಶುಭ್‌ಮನ್ ಗಿಲ್ 16ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದರು, ಮೈದಾನದ ತುಂಬೆಲ್ಲಾ ಬಾಲ್ ಕಳಿಸುವ ಮೂಲಕ ಸುಲಭವಾಗಿ ಮೂರು ಅಂಕಿಗಳ ಮಾರ್ಕ್‌ ಅನ್ನು ದಾಟಿದರು.

ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಆಡುವ ಶುಭಮನ್ ಗಿಲ್ ಜಿಂಬಾಬ್ವೆಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ನಿಂದ ಗರಿಷ್ಠ ವೈಯಕ್ತಿಕ ಏಕದಿನ ರನ್ ಗಳಿಸಿದವರಾಗಿ 24 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಶುಭಮನ್ ಗಿಲ್ ಅವರು 130 ರನ್‌ ಗಳಿಸುತ್ತಿದ್ದಂತೆಯೇ 1998ರಲ್ಲಿ ಸಚಿನ್ ತೆಂಡೂಲ್ಕರ್ ಅವರ ಔಟಾಗದೆ 127 ರನ್ ಗಳಿಸಿದ್ದ ದಾಖಲೆಯನ್ನು ಮುರಿದರು.

ಜಿಂಬಾಬ್ವೆಯಲ್ಲಿ ಭಾರತೀಯರ ಗರಿಷ್ಠ ರನ್

ಜಿಂಬಾಬ್ವೆಯಲ್ಲಿ ಭಾರತೀಯರ ಗರಿಷ್ಠ ರನ್

ಶುಭ್‌ಮನ್ ಗಿಲ್- 2022ರಲ್ಲಿ ಹರಾರೆಯಲ್ಲಿ 97 ಎಸೆತಗಳಲ್ಲಿ 130 ರನ್

ಸಚಿನ್ ತೆಂಡೂಲ್ಕರ್- 1998ರಲ್ಲಿ ಬುಲವಾಯೊದಲ್ಲಿ 130 ಎಸೆತಗಳಲ್ಲಿ 127 ರನ್

ಅಂಬಟಿ ರಾಯುಡು- 2015ರಲ್ಲಿ ಹರಾರೆಯಲ್ಲಿ 133 ಎಸೆತಗಳಲ್ಲಿ ಔಟಾಗದೆ 124 ರನ್

ಯುವರಾಜ್ ಸಿಂಗ್- 2005ರಲ್ಲಿ ಹರಾರೆಯಲ್ಲಿ 124 ಎಸೆತಗಳಲ್ಲಿ 120 ರನ್

ಶಿಖರ್ ಧವನ್- 2013ರಲ್ಲಿ ಹರಾರೆಯಲ್ಲಿ 127 ಎಸೆತಗಳಲ್ಲಿ 116 ರನ್

ವಿರಾಟ್ ಕೊಹ್ಲಿ 2013ರಲ್ಲಿ ಹರಾರೆಯಲ್ಲಿ 108 ಎಸೆತಗಳಲ್ಲಿ 115 ರನ್

3ನೇ ವಿಕೆಟ್‌ಗೆ 140 ರನ್‌ಗಳ ಜೊತೆಯಾಟ

3ನೇ ವಿಕೆಟ್‌ಗೆ 140 ರನ್‌ಗಳ ಜೊತೆಯಾಟ

3ನೇ ಏಕದಿನ ಪಂದ್ಯದಲ್ಲಿ ಉತ್ತಮ ಆರಂಭದ ನಂತರ ಭಾರತವು ನಾಯಕ ಕೆಎಲ್ ರಾಹುಲ್ ಮತ್ತು ಉಪನಾಯಕ ಶಿಖರ್ ಧವನ್ ಅವರ ವಿಕೆಟ್ ಅನ್ನು ಶೀಘ್ರವಾಗಿ ಕಳೆದುಕೊಂಡ ನಂತರ ಶುಭ್‌ಮನ್ ಗಿಲ್ ಸ್ವತಃ ಸ್ಕೋರ್ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡರು. ಶುಭ್‌ಮನ್ ಗಿಲ್ ಅವರು ಇಶಾನ್ ಕಿಶನ್ ಅವರೊಂದಿಗೆ 3ನೇ ವಿಕೆಟ್‌ಗೆ 140 ರನ್‌ಗಳ ಜೊತೆಯಾಟ ನೀಡಿದರು. ಶುಭ್‌ಮನ್ ಗಿಲ್ ಮೈಲಿಗಲ್ಲಿನತ್ತ ಸಾಗುತ್ತಿರುವಾಗ ಜೊತೆಯಾಟದಲ್ಲಿ ಪ್ರಾಬಲ್ಯ ಸಾಧಿಸಿದರು.

2022ರಲ್ಲಿ ಆಡಿದ 6 ಏಕದಿನ ಪಂದ್ಯಗಳಲ್ಲಿ 450 ರನ್

2022ರಲ್ಲಿ ಆಡಿದ 6 ಏಕದಿನ ಪಂದ್ಯಗಳಲ್ಲಿ 450 ರನ್

43ನೇ ಓವರ್‌ನಲ್ಲಿ ಇಶಾನ್ ಕಿಶನ್ ರನೌಟ್ ಆದ ನಂತರ ಶುಭ್‌ಮನ್ ಗಿಲ್‌ಗೆ ಇತರರಿಂದ ಹೆಚ್ಚಿನ ಬೆಂಬಲ ಸಿಗಲಿಲ್ಲ. ಆದರೆ ಅವರು ಮತ್ತೊಂದು ಬದಿ ರನ್ ಗಳಿಸುತ್ತಲೇ ಇದ್ದರು. ಸಣ್ಣ ತಪ್ಪುಗಳಿಗೂ ಜಿಂಬಾಬ್ವೆ ಬೌಲರ್‌ಗಳನ್ನು ದಂಡಿಸಿದರು. ಶುಭ್‌ಮನ್ ಗಿಲ್ ಅವರ ಸಮಯ ಮತ್ತು ಶಾಟ್‌ಗಳ ಆಯ್ಕೆಯು ಸುಂದರವಾಗಿತ್ತು.

ಗಮನಾರ್ಹವಾದ ಅಂಶವೆಂದರೆ, ಶುಭ್‌ಮನ್ ಗಿಲ್ 2022ರಲ್ಲಿ ಆಡಿದ 6 ಏಕದಿನ ಪಂದ್ಯಗಳಲ್ಲಿ 450 ರನ್ ಗಳಿಸಿದ್ದಾರೆ. ಉತ್ತಮ ಋತುವಿನಲ್ಲಿ ಶತಕ ಮತ್ತು ಅರ್ಧಶತಕಗಳನ್ನು ಬಾರಿಸಿದ್ದಾರೆ. ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಮಳೆ-ಬಾಧಿತ ಏಕದಿನ ಪಂದ್ಯದಲ್ಲಿ 98 ರನ್ ಗಳಿಸಿ ಅಜೇಯರಾಗಿ ಉಳಿದಾಗ, ಶುಭ್‌ಮನ್ ಗಿಲ್ ತಮ್ಮ ಚೊಚ್ಚಲ ಶತಕವನ್ನು ಕಳೆದುಕೊಂಡರು. ಆದರೆ ಜಿಂಬಾಬ್ವೆಯಲ್ಲಿ ಆ ಹೆಗ್ಗುರುತನ್ನು ಪಡೆಯುವ ಮೂಲಕ ಯುವ ಆಟಗಾರ ತಮ್ಮ ಕನಸನ್ನು ನನಸು ಮಾಡಿಕೊಂಡರು.

Story first published: Tuesday, August 23, 2022, 9:10 [IST]
Other articles published on Aug 23, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+