ವಿಡಿಯೋ: ಜಿಂಬಾಬ್ವೆ ವಿರುದ್ಧ ಏಕದಿನ ಸರಣಿ ಗೆದ್ದ ಬಳಿಕ ಭರ್ಜರಿ ಡ್ಯಾನ್ಸ್ ಮಾಡಿದ ಟೀಂ ಇಂಡಿಯಾ

ಕೆಎಲ್ ರಾಹುಲ್ ನಾಯಕತ್ವದ ಟೀಂ ಇಂಡಿಯಾ ಸೋಮವಾರ (ಆಗಸ್ಟ್ 22) ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆಯನ್ನು 13 ರನ್‌ಗಳಿಂದ ಸೋಲಿಸಿ 3-0 ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದರೆ, ತವರಿನಲ್ಲಿಯೇ ಜಿಂಬಾಬ್ವೆಗೆ ಮುಖಭಂಗವಾಗಿದೆ.
ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ತನ್ನ ಚೊಚ್ಚಲ ಏಕದಿನ ಶತಕವನ್ನು ಗಳಿಸಿ ಭಾರತವನ್ನು 8 ವಿಕೆಟ್‌ಗೆ 289 ರನ್ ಗಳಿಸಲು ಸಹಾಯ ಮಾಡಿದರು ಮತ್ತು ಜಿಂಬಾಬ್ವೆಯ ಸಿಕಂದರ್ ರಜಾ ಅವರ ಆರನೇ ಏಕದಿನ ಶತಕವನ್ನು ಗಳಿಸಿದರೂ, ಆತಿಥೇಯ ತಂಡ ಗುರಿ ಬೆನ್ನತ್ತಲಾಗಲಿಲ್ಲ. ಇದರಿಂದಾಗಿ ಭಾರತೀಯ ಬೌಲರ್‌ಗಳು ನಿಟ್ಟುಸಿರು ಬಿಟ್ಟರು.
ಸರಣಿ ವಿಜಯದ ನಂತರ ಭಾರತೀಯ ಆಟಗಾರರಾದ ಶಿಖರ್ ಧವನ್, ಶುಭ್‌ಮನ್ ಗಿಲ್, ಇಶಾನ್ ಕಿಶನ್, ಅವೇಶ್ ಖಾನ್, ಕಲದೀಪ್ ಯಾದವ್ ಮತ್ತು ಇತರರು ತಮ್ಮ ಸ್ಮರಣೀಯ ವಿಜಯವನ್ನು ಆಚರಿಸಲು ಹರಾರೆ ಡ್ರೆಸ್ಸಿಂಗ್ ಕೊಠಡಿಯೊಳಗೆ ವಿಶಿಷ್ಟ ನೃತ್ಯ ಮಾಡಿದರು. ಅವರೆಲ್ಲ 'ಕಾಲಾ ಚಷ್ಮಾ' ರಾಗಕ್ಕೆ ಕುಣಿದಾಡಿದರು. ವಿಡಿಯೋ ವೈರಲ್ ಆಗಿದ್ದು, ನೆಟಿಜನ್‌ಗಳು ನೋಡಿ ಫುಲ್ ಖುಷಿ ಆಗಿದ್ದಾರೆ.
ಬಿದ್ದು ಬಿದ್ದು ನಗುವಂತೆ ಸ್ಟೆಪ್ ಹಾಕಿದ್ದಾರೆ
ಇಶಾನ್ ಕಿಶನ್, ಶಿಖರ್ ಧವನ್, ಅವೇಶ್ ಖಾನ್ ಮತ್ತು ಕುಲದೀಪ್ ಯಾದವ್ ನೋಡುಗರು ಬಿದ್ದು ಬಿದ್ದು ನಗುವಂತೆ ಸ್ಟೆಪ್ ಹಾಕಿದ್ದಾರೆ. ಭಾರತ ತಂಡದ ಆಟಗಾರರೆಲ್ಲರೂ ಕುಣಿದು, ಕುಪ್ಪಳಿಸಿ ಸಂಭ್ರಮಪಟ್ಟಿದ್ದಾರೆ.
ಶುಭ್‌ಮನ್ ಗಿಲ್ ಗಿಲ್ 97 ಎಸೆತಗಳಲ್ಲಿ 15 ಬೌಂಡರಿಗಳು ಮತ್ತು ಒಂದು ಸಿಕ್ಸರ್‌ನೊಂದಿಗೆ 130 ರನ್ ಗಳಿಸಿದ ನಂತರ ಭಾರತವನ್ನು 289 ರನ್‌ಗಳಿಗೆ ಕೊಂಡೊಯ್ದ ನಂತರ, ಜಿಂಬಾಬ್ವೆ 276 ರನ್ ಗಳಿಸಿ ಆಲೌಟ್ ಆದ ಬಳಿಕ ಸೋಲಪ್ಪಿಕೊಂಡರು. ಆತಿಥೇಯರ ಪರವಾಗಿ ಸಿಕಂದರ್ ರಝಾ ಅವರು 95 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ 115 ರನ್ ಗಳಿಸಿ ಜಿಂಬಾಬ್ವೆಯನ್ನು ಬೃಹತ್ ಗೆಲುವಿನ ಅಂಚಿನಲ್ಲಿ ತಂದು ನಿಲ್ಲಿಸಿದರು.

ಶುಭ್‌ಮನ್ ಗಿಲ್ ಚೆನ್ನಾಗಿ ಶತಕ ಬಾರಿಸಿದ್ದಾರೆ
ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಸೋಮವಾರ ಶುಭ್‌ಮನ್ ಗಿಲ್ ಅವರ ಚೊಚ್ಚಲ ಏಕದಿನ ಶತಕವನ್ನು ಟ್ವಿಟರ್‌ನಲ್ಲಿ ಅಭಿನಂದಿಸಿದ್ದಾರೆ. ಹರಾರೆಯಲ್ಲಿ ನಡೆದ ಏಕದಿನ ಸರಣಿಯಲ್ಲಿ ಜಿಂಬಾಬ್ವೆ ವಿರುದ್ಧ ಅದ್ಭುತ ಚೊಚ್ಚಲ ಶತಕ ಸಿಡಿಸಿದ ಯುವ ಆಟಗಾರನಿಗೆ ಇರ್ಫಾನ್ ಪಠಾಣ್ ತಮ್ಮ ಶುಭ ಹಾರೈಕೆಗಳನ್ನು ನೀಡಿದರು. ಇರ್ಫಾನ್ ತಮ್ಮ ಟ್ವೀಟ್‌ನಲ್ಲಿ, "ಈ ಯುವ ಆಟಗಾರ ಶುಭ್‌ಮನ್ ಗಿಲ್ ಚೆನ್ನಾಗಿ ಶತಕ ಬಾರಿಸಿದ್ದಾರೆ' ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಜಿಂಬಾಬ್ವೆ ವಿರುದ್ಧ ಗರಿಷ್ಠ ಸ್ಕೋರ್ ಗಳಿಸಿದ ಶುಭ್‌ಮನ್ ಗಿಲ್
ಶುಭ್‌ಮನ್ ಗಿಲ್ ಮುಂದೆ ಗಳಿಸಲಿರುವ ಹಲವು ಶತಕಗಳಲ್ಲಿ ಇದೂ ಒಂದು ಎಂದು ಭಾರತದ ಮಾಜಿ ಆಲ್‌ರೌಂಡರ್ ಆಶಿಸಿದ್ದಾರೆ. ಲೆಜೆಂಡರಿ ಕ್ರಿಕೆಟಿಗ ಇಯಾನ್ ಬಿಷಪ್ ಅವರು ಏಕದಿನ ಮಾದರಿಯಲ್ಲಿ ಚೊಚ್ಚಲ ಶತಕ ಸಿಡಿಸಿದ್ದಕ್ಕಾಗಿ ಬಲಗೈ ಬ್ಯಾಟರ್‌ನನ್ನು ಶ್ಲಾಘಿಸಿದ್ದಾರೆ. ಭಾರತದ ಆಟಗಾರ ಜಿಂಬಾಬ್ವೆ ವಿರುದ್ಧ ಗರಿಷ್ಠ ಸ್ಕೋರ್ ಗಳಿಸಿದ ದಂತಕಥೆ ಸಚಿನ ತೆಂಡೂಲ್ಕರ್ ದಾಖಲೆಯನ್ನೂ ಭಾರತೀಯ ಯುವ ಬ್ಯಾಟರ್ ಶುಭ್‌ಮನ್ ಗಿಲ್ ಮುರಿದರು.
ಶುಭ್‌ಮನ್ ಗಿಲ್ 97 ಎಸೆತಗಳಲ್ಲಿ 15 ಬೌಂಡರಿ ಮತ್ತು ಬೃಹತ್ ಸಿಕ್ಸರ್ ಒಳಗೊಂಡ 130 ರನ್ ಗಳಿಸಿದರು. ಹಿಂದಿನ ದಾಖಲೆ ಸಚಿನ್ ತೆಂಡೂಲ್ಕರ್ ಜಿಂಬಾಬ್ವೆ ವಿರುದ್ಧ 1998ರಲ್ಲಿ ಬುಲವಾಯೊದಲ್ಲಿ ಅಜೇಯ 127 ರನ್ ಗಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications