Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ವಿರುದ್ಧ ಅಫ್ಘಾನಿಸ್ತಾನ ತಂಡ 109ರನ್ನಿಗೆ ಅಲೌಟ್

india afghanistan test match 2nd day report

ಬೆಂಗಳೂರು, ಜೂನ್ 15: ಅಫ್ಘಾನಿಸ್ತಾನದ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್‌ಗಳಿಗೆ ತನ್ನ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ

ಗುರುವಾರ ದಿನದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 347 ರನ್ ಗಳಿಸಿದ್ದ ಭಾರತ, ಎರಡನೆಯ ದಿನ ಆಟದಲ್ಲಿ ಆರ್. ಅಶ್ವಿನ್ ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು.

18 ರನ್ ಗಳಿಸಿದ್ದ ಅಶ್ವಿನ್ ವೇಗದ ಬೌಲರ್ ಯಾಮಿನ್ ಅಹ್ಮದ್‌ಜೈ ಅವರಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಎಡಗೈ ಬ್ಯಾಟ್ಸ್‌ಮನ್‌ ರವೀಂದ್ರ ಜಡೇಜಾ ಅವರು ಖಾತೆ ತೆರೆಯುವ ಮೊದಲೇ ವಿಕೆಟ್ ಕೀಪರ್ ಅಫ್ಸರ್ ಜಜೈ ಅವರಿಂದ ಜೀವದಾನ ಪಡೆದರು.

ಗುರುವಾರ 10 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಹಾರ್ದಿಕ್ ಪಾಂಡ್ಯ ಶುಕ್ರವಾರ ಬೌಲರ್‌ಗಳ ಮೇಲೆ ದಂಡೆತ್ತಿದರು. ಅವರಿಗೆ ಜಡೇಜಾ ಸ್ವಲ್ಪ ಕಾಲ ಸಾಥ್ ನೀಡಿದರು.

ಜಡೇಜಾ 20 ರನ್ ಗಳಿಸಿ ಮೊಹಮದ್ ನಬಿ ಬೌಲಿಂಗ್‌ನಲ್ಲಿ ಔಟಾದರೆ, ಮುಂದಿನ ಓವರ್‌ನಲ್ಲಿಯೇ ಹಾರ್ದಿಕ್ ಪಾಂಡ್ಯ 71 ರನ್‌ ಗಳಿಸಿದ್ದಾಗ ವಫಾದಾರ್‌ ಅವರಿಗೆ ವಿಕೆಟ್ ಒಪ್ಪಿಸಿದರು. ಇಬ್ಬರೂ 8ನೇ ವಿಕೆಟ್‌ಗೆ 67 ರನ್ ಕಲೆಹಾಕಿದರು.

ಕೊನೆಯ ಬ್ಯಾಟ್ಸ್‌ಮನ್ ಉಮೇಶ್ ಯಾದವ್ ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸಿ 26 ರನ್‌ ಬಾರಿಸಿ ರಂಜಿಸಿದರು. ಭೋಜನ ವಿರಾಮಕ್ಕೆ ಮುನ್ನವೇ ಕೊನೆಯ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.

ಅಫ್ಘಾನಿಸ್ತಾನದ ಪರ ಯಾಮಿನ್ ಅಹ್ಮದ್‌ಜೈ 3, ವಫಾದಾರ್ ಮತ್ತು ರಶೀದ್ ಖಾನ್ ತಲಾ 2, ಮಹಮದ್ ನಬಿ ಹಾಗೂ ಮುಜೀಬ್ ಉರ್ ರಹಮಾನ್ ತಲಾ 1 ವಿಕೆಟ್ ಕಬಳಿಸಿದರು.

Story first published: Friday, June 15, 2018, 14:59 [IST]
Other articles published on Jun 15, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+