ಭಾರತದ ಮಾನ ಕಾಪಾಡಿದ ಅಜಿಂಕ್ಯಾ, ಕುಮಾರ್
ಸಿಡ್ನಿ, ಜ.10 : ಸಿಡ್ನಿಯಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ 4ನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. 2-0 ಅಂತರದಿಂದ ಆಸ್ಟ್ರೇಲಿಯಾ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ದ್ವಿತೀಯ ಇನ್ಸಿಂಗ್ಸ್‌ನಲ್ಲಿ 251 ರನ್‌ಗಳಿಸಿದ್ದ ಆಸ್ಟ್ರೇಲಿಯಾ ಭಾರತಕ್ಕೆ 349 ರನ್‌ಗಳ ಗೆಲುವಿನ ಗುರಿ ನೀಡಿತ್ತು. ಪಂದ್ಯದ ಕೊನೆಯ ದಿನವಾದ ಶನಿವಾರ ಭಾರತ ಎರಡನೇ ಇನ್ನಿಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 252 ರನ್‌ಗಳಿಸಿತು. [ಟೆಸ್ಟ್ 4ನೇ ದಿನ : ಆಸೀಸ್ ಗೆ 348ರನ್ ಲೀಡ್]

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 572 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 475 ರನ್‌ಗಳಿಗೆ ಆಔಟ್ ಆಗಿತ್ತು. ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್‌ನ 97 ರನ್ ಮುನ್ನಡೆಯೊಂದಿಗೆ, 2ನೇ ಇನ್ನಿಂಗ್ಸ್‌ನಲ್ಲಿ 251 ರನ್ ಗಳಿಸಿ ಭಾರತಕ್ಕೆ 349 ರನ್ ಗೆಲುವಿನ ಗುರಿಯನ್ನು ನೀಡಿತ್ತು. [ಸ್ಕೋರ್ ಕಾರ್ಡ್ ನೋಡಿ]
ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಮುರಳಿ ವಿಜಯ್ ಭರ್ಜರಿ 80 ರನ್‌ಗಳಿಸಿದರು. ಮೊದಲ ಇನ್ಸಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಕನ್ನಡಿಗ ರಾಹುಲ್ 16 ರನ್‌ಗಳಿಸಿ ಔಟಾದರು. ರೋಹಿತ್ ಶರ್ಮಾ 39 ರನ್‌ಗಳಿಸಿದರೆ, ನಾಯಕ ಕೊಹ್ಲಿ 46 ರನ್ ಬಾರಿಸಿದರು. ಸುರೇಶ್ ರೈನಾ ಶೂನ್ಯಕ್ಕೆ ಔಟಾದರೆ, ಆರ್. ಅಶ್ವಿನ್ 1 ರನ್‌ಗಳಿಸಿದರು.

ಒಂದು ಹಂತದಲ್ಲಿ 217 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿದ್ದ ಪಂದ್ಯವನ್ನು ರೆಹಾನೆ ಮತ್ತು ಭುವನೇಶ್ವರ್ ಕುಮಾರ್ ಡ್ರಾ ದತ್ತ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. ರೆಹಾನೆ 38 ರನ್‌ಗಳಿಸಿ ಅಜೇಯರಾಗಿ ಉಳಿದರು.
ಸ್ಕೋರ್ ಕಾರ್ಡ್
ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್ - 572/7 ಡಿಕ್ಲೇರ್
ಭಾರತ ಮೊದಲ ಇನ್ನಿಂಗ್ಸ್ - 475 ಆಲೌಟ್
ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್ - 251 /6 ಡಿಕ್ಲೇರ್
ಭಾರತ ದ್ವಿತೀಯ ಇನ್ನಿಂಗ್ಸ್ - 252/7
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications