ನಾಯಕ ಮನೀಶ್ ಪಾಂಡೆ ಸೊಗಸಾದ ಶತಕ: ಭಾರತ ಎ ತಂಡಕ್ಕೆ ಸರಣಿ ಜಯ

ಬೇ ಓವಲ್ (ನ್ಯೂಜಿಲೆಂಡ್), ಡಿಸೆಂಬರ್ 10: ನಾಯಕನ ಆಟವಾಡಿದ ಮನೀಶ್ ಪಾಂಡೆ, ನ್ಯೂಜಿಲೆಂಡ್ ಎ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಭಾರತದ ವಶವಾಗುವಂತೆ ಮಾಡಿದ್ದಾರೆ.
ನ್ಯೂಜಿಲೆಂಡ್‌ನ ಮೌಂಟ್ ಮಾಂಗನುಯಿಯಲ್ಲಿ ನಡೆದ ಎರಡನೆಯ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಎ ತಂಡವು, ಆತಿಥೇಯ ನ್ಯೂಜಿಲೆಂಡ್ ಎ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಸರಣಿಯನ್ನು ತನ್ನದಾಗಿಸಿಕೊಂಡಿತು.
ಮೊದಲ ಪಂದ್ಯದಲ್ಲಿ ಭಾರತ ಎ ತಂಡ ನಾಲ್ಕು ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ಮೂರನೇ ಹಾಗೂ ಕೊನೆಯ ಪಂದ್ಯ ಮಂಗಳವಾರ (ಡಿ 11) ನಡೆಯಲಿದೆ. ಭಾರತದ ಪಾಲಿಗೆ ಇದು ಔಪಚಾರಿಕ ಪಂದ್ಯ ಎನಿಸಲಿದೆ. ಹೀಗಾಗಿ ಇದುವರೆಗೆ ಅವಕಾಶ ಸಿಗದ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ.
ರಾಷ್ಟ್ರೀಯ ತಂಡವನ್ನು ಸೇರಲು ಬಯಸಿರುವ ಯುವ ಆಟಗಾರರಿಗೆ ಈ ಸರಣಿ ಮಹತ್ವದ್ದಾಗಿದೆ.
ಸತತ ಎರಡನೆಯ ಬಾರಿ ಟಾಸ್ ಗೆದ್ದ ಮನೀಶ್ ಪಾಂಡೆ, ಆತಿಥೇಯರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಉತ್ತಮ ಆಟವಾಡಿದ ನ್ಯೂಜಿಲೆಂಡ್ 299 ರನ್ ಕಲೆಹಾಕಿತು.
ವರ್ಕರ್-ಯಂಗ್ ಭರ್ಜರಿ ಆಟ
ಹಮೀಶ್ ರುದರ್ ಫರ್ಡ್ ಅವರ ವಿಕೆಟ್ ಬೇಗನೆ ಕಳೆದುಕೊಂಡರೂ, ಜಾರ್ಜ್ ವರ್ಕರ್ ಮತ್ತು ವಿಲ್ ಯಂಗ್ ಭರ್ಜರಿ ಆಟವಾಡಿದರು. ಇಬ್ಬರೂ ಮೂರನೇ ವಿಕೆಟ್‌ಗೆ 190 ರನ್‌ಗಳ ಬೃಹತ್ ಜೊತೆಯಾಟ ನೀಡಿದರು.
106 ಎಸೆತಗಳಲ್ಲಿ ಮೂರು ಸಿಕ್ಸರ್, ಆರು ಬೌಂಡರಿ ನೆರವಿನಿಂದ 102 ರನ್ ಗಳಿಸಿದ ಯಂಗ್, ಶತಕ ಪೂರೈಸುತ್ತಿದ್ದಂತೆಯೇ ಖಲೀಲ್ ಅಹ್ಮದ್‌ಗೆ ವಿಕೆಟ್ ಒಪ್ಪಿಸಿದರು. ಆದರೆ, ವರ್ಕರ್‌ಗೆ ಶತಕ ಗಳಿಸುವ ಅವಕಾಶ ಕೈತಪ್ಪಿತು. 106 ಎಸೆತಗಳಲ್ಲಿ 99 ರನ್ ಗಳಿಸಿದ್ದ ಅವರನ್ನು ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಬೌಲ್ಡ್ ಮಾಡಿದರು.
ಬಳಿಕ ನ್ಯೂಜಿಲೆಂಡ್ ರನ್ ವೇಗಕ್ಕೆ ಕಡಿವಾಣ ಬಿದ್ದಿತು. ಕೊನೆಯಲ್ಲಿ ಡರಿಲ್ ಮಿಚೆಲ್ ಕೇವಲ 28 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಸಿಡಿಸಿ 45 ರನ್ ಗಳಿಸುವ ಮೂಲಕ ತಂಡವನ್ನು ಮುನ್ನೂರರ ಗಡಿ ಸಮೀಪ ತಲುಪಿಸಿದರು.
ಮತ್ತೆ ಮುಗ್ಗರಿಸಿದ ಮಯಾಂಕ್
ರನ್ ಚೇಸಿಂಗ್‌ಗೆ ಇಳಿದ ಭಾರತಕ್ಕೆ ಮಯಾಂಕ್ ಅಗರವಾಲ್ ಮತ್ತು ಶುಭ್‌ಮನ್ ಗಿಲ್ ಭರವಸೆಯ ಆರಂಭ ಒದಗಿಸಿದರೂ, ಅಲ್ಪ ಮೊತ್ತದ ಅಂತರದಲ್ಲಿ ಇಬ್ಬರೂ ಔಟಾದರು.
ಹಿಂದಿನ ಪಂದ್ಯದಂತೆಯೇ ಮಯಾಂಕ್ (25) ರನ್ ವೇಗ ಹೆಚ್ಚಿಸುವ ಭರದಲ್ಲಿ ವಿಕೆಟ್ ಒಪ್ಪಿಸಿ ಮತ್ತೆ ನಿರಾಶೆ ಮೂಡಿಸಿದರು. ಗಿಲ್ ಕೂಡ 25 ರನ್ ಗಳಿಸಿ ಅವರನ್ನು ಹಿಂಬಾಲಿಸಿದರು.
ಧೋನಿಯನ್ನು ಮೀರಿಸಿ ವಿಶ್ವದಾಖಲೆ ಸರಿಗಟ್ಟಿದ ರಿಷಬ್ ಪಂಥ್
ಪಾಂಡೆ ಜತೆಗೆ ಶ್ರೇಯಸ್ ಅಬ್ಬರ
ಬಳಿಕ ಅನುಭವಿಗಳಾದ ಶ್ರೇಯಸ್ ಅಯ್ಯರ್ ಮತ್ತು ಮನೀಶ್ ಪಾಂಡೆ ನ್ಯೂಜಿಲೆಂಡ್ ಬೌಲರ್‌ಗಳ ಬೆವರಿಳಿಸಿದರು.
ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಅಯ್ಯರ್, ಅದೇ ರೀತಿಯ ಆಕ್ರಮಣಕಾರಿ ಆಟ ಮುಂದುವರಿಸಿದರು. ಪಾಂಡೆ ಜೊತೆಗೆ 90 ರನ್ ಸೇರಿಸಿದ ಅವರು 59 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು.

ಮತ್ತೆ ಮಿಂಚಿದ ಶಂಕರ್
ಮೊದಲ ಪಂದ್ಯದ ಗೆಲುವಿನ ರೂವಾರಿಯಾಗಿದ್ದ ವಿಜಯ್ ಶಂಕರ್ ಮತ್ತೆ ಅಬ್ಬರದ ಆಟವಾಡಿದರು. ನಾಲ್ಕನೆಯ ವಿಕೆಟ್‌ಗೆ ಅವರು 123 ರನ್ ಜೊತೆಯಾಟ ನೀಡಿದರು. 59 ರನ್ ಗಳಿಸಿದ ವಿಜಯ್ ಶಂಕರ್ ಔಟಾದ ನಂತರ ಬಂದ ಇಶಾನ್ ಕಿಶನ್ ಮೊದಲ ಎಸೆತದಲ್ಲಿಯೇ ಔಟಾದರು.
ಕೊನೆಯಲ್ಲಿ ಅಕ್ಷರ್ ಮತ್ತು ಪಾಂಡೆ ಯಾವುದೇ ಆತಂಕದ ಕ್ಷಣಗಳಿಗೆ ಅವಕಾಶ ನೀಡದೆ ಗೆಲುವಿಗೆ ಬಾಕಿ ಉಳಿದಿದ್ದ 29 ರನ್‌ಗಳನ್ನು ಪೂರೈಸಿದರು. ಅಕ್ಷರ್ 12 ರನ್ ಗಳಿಸಿ ಅಜೇಯರಾದರೆ, ಪಾಂಡೆ 109 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 111 ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದರು.
ಆಸೀಸ್ ವಿರುದ್ಧ ಭಾರತಕ್ಕೆ ಜಯ, ಸಚಿನ್, ಸೆಹ್ವಾಗ್ ಟ್ವೀಟ್ ವಿಶ್

ನ್ಯೂಜಿಲೆಂಡ್ ಸ್ಕೋರ್
299/9 (50) ಜಾರ್ಜ್ ವರ್ಕರ್ 99, ವಿಲ್ ಯಂಗ್ 102, ಡರಿಲ್ ಮಿಚೆಲ್ 45, ಕೋಲ್ ಮೆಕ್‌ಕೊಂಚಿ 21, ಖಲೀಲ್ ಅಹ್ಮದ್ 2/65, ನವದೀಪ್ ಸೈನಿ 2/68, ಸಿದ್ಧಾರ್ಥ್ ಕೌಲ್ 1/36
ಭಾರತದ ಸ್ಕೋರ್
300/5 (49) ಮನೀಶ್ ಪಾಂಡೆ 111*, ಶ್ರೇಯಸ್ ಅಯ್ಯರ್ 59, ವಿಜಯ್ ಶಂಕರ್ 59, ಶುಭ್‌ಮನ್ ಗಿಲ್ 25, ಮಯಾಂಕ್ ಅಗರವಾಲ್ 25, ಕೋಲ್ ಮೆಕ್‌ಕೊಂಚಿ 2/39, ಹಮೀಶ್ ಬೆನೆಟ್ 2/45
ತ್ವರಿತಗತಿಯಲ್ಲಿ 200 ವಿಕೆಟ್ ಗಳಿಸಿ 82 ವರ್ಷ ಹಳೆ ದಾಖಲೆ ಮುರಿದ ಯಾಸಿರ್ ಶಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications