IML T20 Final: ಇಂಡಿಯಾ ಮಸ್ಟಾರ್ಸ್ ಚಾಂಪಿಯನ್: ಫೈನಲ್‌ನಲ್ಲಿ ಕನ್ನಡಿಗರ ಅಬ್ಬರ
ಮುಂಬೈನಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20, 2025 ಫೈನಲ್ ಪಂದ್ಯದಲ್ಲಿ ಭಾರತ ಮಾಸ್ಟರ್ಸ್ ತಂಡ 6 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಕನ್ನಡಿಗ ವಿನಯ್ ಕುಮಾರ್ ಅಮೋಘ ದಾಳಿಯನ್ನು ನಡೆಸಿ ಮೂರು ವಿಕೆಟ್ ಪಡೆದರು. ಇನ್ನು ಆರಂಭಿಕ ಅಂಬಟಿ ರಾಯುಡು ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಮಿಂಚಿದರು.
ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 148 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ ತಂಡ 17.1 ಓವರ್‌ಗಳಲ್ಲಿ 4 ವಿಕೆಟ್‌ಗೆ 149 ರನ್ ಸಿಡಿಸಿ ಜಯ ಸಾಧಿಸಿತು. ಈ ಮೂಲಕ ಭಾರತ ಮಾಸ್ಟರ್ಸ್ ಮೊದಲ ಆವೃತ್ತಿಯ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20 ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಭಾರತ ಮಾಸ್ಟರ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಸಚಿನ್ ತೆಂಡೂಲ್ಕರ್ ಹಾಗೂ ಅಂಬಟಿ ರಾಯುಡು ಸೊಗಸಾದ ಆಟದ ಪ್ರದರ್ಶನ ನೀಡಿದರು. ಈ ಜೋಡಿ ವೆಸ್ಟ್ ಇಂಡೀಸ್ ತಂಡದಿಂದ ಗೆಲುವನ್ನು ಆರಂಭದಲ್ಲೇ ದೂರ ಕೊಂಡೊಯ್ದರು. ಈ ಜೋಡಿ 7.5 ಓವರ್‌ಗಳಲ್ಲಿ 67 ರನ್ ಸೇರಿಸಿತು. ಸಚಿನ್ ತೆಂಡೂಲ್ಕರ್ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 25 ರನ್ ಸಿಡಿಸಿ ಟಿನೋ ಬೆಸ್ಟ್‌ಗೆ ಔಟ್ ಆದರು.
ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಗುರುಕೀರ್ತ್ ಸಿಂಗ್ ಮನನ್ (14 ರನ್), ಯೂಸುಫ್ ಪಠಾಣ್ ನಿರಾಸೆ ಅನುಭವಿಸಿದರು. ಟೀಮ್ ಇಂಡಿಯಾ ಪರ ಯುವರಾಜ್ ಸಿಂಗ್ ಅಜೇಯ 13 ರನ್ ಬಾರಿಸಿ ಗೆಲುವಿನಲ್ಲಿ ಅಗತ್ಯ ಕಾಣಿಕೆ ನೀಡಿದರು. ಕನ್ನಡಿಗ ಸ್ಟುವರ್ಟ್ ಬಿನ್ನಿ 2 ಸಿಕ್ಸರ್ ಸಹಾಯದಿಂದ ಅಜೇಯ 16 ರನ್ ಬಾರಿಸಿ ಆರ್ಭಟಿಸಿದರು.

ಕಳಪೆ ಆರಂಭ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡದ ಪರ ಸ್ಟಾರ್ ಆಟಗಾರರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ವಿಂಡೀಸ್ ತಂಡದ ಸ್ಟಾರ್ ಆಟಗಾರರಾದ ಬ್ರಿಯೆನ್ ಲಾರಾ (6), ವಿಲಿಯಂ ಪರ್ಕಿನ್ಸ್ (6) ತಂಡಕ್ಕೆ ಆಧಾರವಾಗಲಿಲ್ಲ. ಆರಂಭಿಕರಾಗಿ ಕಾಣಿಸಿಕೊಂಡಿದ್ದ ಡ್ವೇನ್ ಸ್ಮಿತ್ 35 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 45 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಉಳಿದಂತೆ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಟಗಾರ ಲೆಂಡ್ಲ್ ಸಿಮ್ಮನ್ಸ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 41 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 57 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಕನ್ನಡಿಗ ಅಬ್ಬರ
ಬೌಲಿಂಗ್‌ನಲ್ಲಿ ಕರ್ನಾಟದ ಸ್ಟಾರ್ ಆಟಗಾರ ವಿನಯ್ ಕುಮಾರ್ ಅಬ್ಬರಿಸಿದರು. ಇವರು 3 ಓವರ್ ಬೌಲ್ ಮಾಡಿ 26 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಇನ್ನು ಶಹಬಾಜ್ ನದೀಮ್ 2 ವಿಕೆಟ್ ಕಿತ್ತು ವಿಂಡೀಸ್ ತಂಡವನ್ನು ಕಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications