ಭಾರತಕ್ಕೆ MS ಧೋನಿ ತರಹದ ಫಿನಿಷರ್ ಬೇಕು, ಚಿಂತೆ ಬೇಡ DK ಇದ್ದಾನೆ: ರವಿಶಾಸ್ತ್ರಿ

ಎಂಎಸ್ ಧೋನಿ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ, ಟೀಮ್ ಇಂಡಿಯಾಕ್ಕೆ ಇನ್ನೂ ಅವರ ಸ್ಥಾನಕ್ಕೆ ಸೂಕ್ತವಾದ ಫಿನಿಶರ್ ಅನ್ನು ಹುಡುಕಲಾಗಲಿಲ್ಲ. ಆದರೆ, ಇತ್ತೀಚೆಗಷ್ಟೇ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿರುವ ದಿನೇಶ್ ಕಾರ್ತಿಕ್ ಐಪಿಎಲ್ ನಲ್ಲಿ ಮಿಂಚು ಹರಿಸಿದ್ದು, ಟೀಂ ಇಂಡಿಯಾಕ್ಕೆ ಉತ್ತಮ ಫಿನಿಶರ್ ಆಗುವ ಭರವಸೆ ಹುಟ್ಟಿಸಿದ್ದಾರೆ.
ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಧೋನಿ ಬದಲಿಗೆ ದಿನೇಶ್ ಕಾರ್ತಿಕ್ ಫಿನಿಶರ್ ಆಗಬಹುದು ಎಂದು ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. 2004ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ದಿನೇಶ್ ಕಾರ್ತಿಕ್, 2006ರಲ್ಲಿ ಟೀಂ ಇಂಡಿಯಾ ತನ್ನ ಮೊದಲ ಟಿ20 ಪಂದ್ಯವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಬಳಿಕ ಎಂಎಸ್ ಧೋನಿ ಪ್ರಾಬಲ್ಯ ನಡೆಯುತ್ತಿದ್ದಂತೆ ದಿನೇಶ್ ಕಾರ್ತಿಕ್ ಹಿಂದೆ ಸರಿದರು. ಹಲವು ಸಂದರ್ಭಗಳಲ್ಲಿ ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾದರೂ ಸಹ, ದಿನೇಶ್ ಕಾರ್ತಿಕ್ ಇನ್ನು ಟೀಮ್ ಇಂಡಿಯಾದ ಸ್ಥಿರ ಆಟಗಾರನಲ್ಲ.

ಆರ್‌ಸಿಬಿ ಪರ ಫಿನಿಷರ್ ಆಗಿ ಮಿಂಚಿದ ಡಿಕೆ
36 ವರ್ಷದ ದಿನೇಶ್ ಕಾರ್ತಿಕ್ ಐಪಿಎಲ್ 2022ರಲ್ಲಿ ಆರ್‌ಸಿಬಿ ಪರ ಮಿಂಚಿದ್ದಾರೆ. ಅವರು ತನ್ನಲ್ಲಿರುವ ಫಿನಿಶರ್ ಅನ್ನು ಹೊರತಂದರು. ಧೋನಿ ತರಹದ ಫಿನಿಶರ್ ಪಾತ್ರದಲ್ಲಿ ದಿನೇಶ್ ಕಾರ್ತಿಕ್ ಇಂಪ್ರೆಸ್ ಮಾಡಿದ್ದಾರೆ. ದಿನೇಶ್ ಕಾರ್ತಿಕ್ 16 ಪಂದ್ಯಗಳಲ್ಲಿ 183.33 ಸ್ಟ್ರೈಕ್ ರೇಟ್‌ನೊಂದಿಗೆ 330 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಅವರನ್ನು ಬಿಸಿಸಿಐ ಆಯ್ಕೆ ಸಮಿತಿಯು ದಕ್ಷಿಣ ಆಫ್ರಿಕಾ ಪ್ರವಾಸ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ದಿನೇಶ್ ಕಾರ್ತಿಕ್‌ಗೆ ಸಿಕ್ಕ ಅವಕಾಶದಲ್ಲಿ ಮಿಂಚಿ ತೋರಿಸಬೇಕಿದೆ.
ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್: ಕರ್ನಾಟಕ vs ಉತ್ತರ ಪ್ರದೇಶ ಪಂದ್ಯದ ಪ್ರಿವ್ಯೂ, ಸ್ಕ್ವಾಡ್, ಹವಾಮಾನ

ದಕ್ಷಿಣ ಆಫ್ರಿಕಾ ವಿರುದ್ಧ ಡಿಕೆ ಮಿಂಚಬೇಕು!
ಈ ಸಂದರ್ಭದಲ್ಲಿ ಮಾತನಾಡಿದ ರವಿಶಾಸ್ತ್ರಿ, ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ದಿನೇಶ್ ಕಾರ್ತಿಕ್ ಆಯ್ಕೆಯಾಗಬೇಕಾದರೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಮಿಂಚುವ ಅಗತ್ಯವಿದೆ ಎಂದರು. ಇದು ಅವರಿಗೆ ಉತ್ತಮ ಅವಕಾಶ. ಈ ಸರಣಿಯಲ್ಲಿ ಅವರಿಗೆ ಸರಿಯಾದ ಅವಕಾಶ ಸಿಕ್ಕರೆ.. ಅವರು ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ತೋರಿಸಬೇಕು. ಮತ್ತು ಅವರು ಅನುಭವಿ ಆಟಗಾರ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ ದಿನೇಶ್ ಕಾರ್ತಿಕ್ ಈ ಅವಕಾಶವನ್ನು ಅತ್ಯಂತ ಪ್ರಮುಖವಾಗಿ ಪರಿಗಣಿಸಬೇಕು "ಎಂದು ರವಿಶಾಸ್ತ್ರಿ ಸ್ಟಾರ್‌ಸ್ಪೋರ್ಟ್ಸ್‌ಗೆ ತಿಳಿಸಿದರು.

ಟೀಂ ಇಂಡಿಯಾದಲ್ಲಿ ಫಿನಿಷರ್ ಜವಾಬ್ದಾರಿ ನಿಭಾಯಿಸಬೇಕು
ಇದೀಗ ಟೀಂ ಇಂಡಿಯಾ ರಿಷಬ್ ಪಂತ್ ರೂಪದಲ್ಲಿ ಗುಣಮಟ್ಟದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಹೊಂದಿದೆ. ಆದರೆ ರವಿಶಾಸ್ತ್ರಿ ಈ ಎಡಗೈ ಬ್ಯಾಟರ್ ಅನ್ನು ಫಿನಿಶರ್ ಎಂದು ಪರಿಗಣಿಸಲಿಲ್ಲ. ಪಂತ್ ಅವರು ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ವಲ್ಪ ಮುಂಚಿತವಾಗಿಯೇ ಬ್ಯಾಟ್ ಮಾಡಿದ್ದರೆ ಉತ್ತಮ ಎಂದು ಅಭಿಪ್ರಾಯಪಟ್ಟರು. ಆದರೆ ದಿನೇಶ್ ಕಾರ್ತಿಕ್ ಫಿನಿಶರ್ ಆಗಿ ಸರಿಯಾಗಿದ್ದಾರೆ ಎಂದು ರವಿಶಾಸ್ತ್ರಿ ಹೇಳಿದರು.
''ನಾವು ಅದನ್ನು ತಂಡದ ದೃಷ್ಟಿಕೋನದಿಂದ ನೋಡಬೇಕು. ಬ್ಯಾಟಿಂಗ್ ಕ್ರಮಾಂಕದಲ್ಲಿ ಮೊದಲು ಬ್ಯಾಟ್ ಮಾಡುವ ಕೀಪರ್ ಬೇಕೇ? ಅಥವಾ ಫಿನಿಶರ್ ಆಗಿ ಬ್ಯಾಟ್ ಮಾಡುವ ಕೀಪರ್ ಬೇಕೇ? ನಾನು ನನ್ನ ಮಟ್ಟಿಗೆ, ಫಿನಿಶರ್ ಪಾತ್ರದಲ್ಲಿ ಬ್ಯಾಟ್ ಮಾಡುವ ಕೀಪರ್ ಅನ್ನು ಆಯ್ಕೆ ಮಾಡುತ್ತೇನೆ'' ಎಂದು ಟೀಂ ಇಂಡಿಯಾ ಮಾಜಿ ಕೋಚ್ ಹೇಳಿದ್ದಾರೆ.
IND vs SA: ಮೊದಲ ಟಿ20 ಪಂದ್ಯಕ್ಕೆ ಭಾರತದ ಆಡುವ 11ರ ಬಳಗ ಆಯ್ಕೆ ಮಾಡಿದ ರವಿಶಾಸ್ತ್ರಿ

ಕಾರ್ತಿಕ್‌ಗೆ ಹೆಚ್ಚಿನ ಅವಕಾಶಗಳಿವೆ
ಏಕೆಂದರೆ ತಂಡದಲ್ಲಿ ಎಂಎಸ್ ಧೋನಿ ಪಾತ್ರವನ್ನು ನಿರ್ವಹಿಸಲು ನಮಗೆ ಕೀಪರ್ ಅಗತ್ಯವಿದೆ. ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್‌ನಲ್ಲಿ ರಿಷಬ್ ಪಂತ್ ಅಗ್ರ ನಾಲ್ಕು ಅಥವಾ ಐದರಲ್ಲಿ ಬ್ಯಾಟಿಂಗ್ ಮಾಡಬಹುದು. ಹಾಗೆಂದು ಅವರನ್ನು ಆ ಬ್ಯಾಟಿಂಗ್ ಕ್ರಮಾಂಕದಲ್ಲಿ ಇರಿಸಿಕೊಳ್ಳಲು ಹೋಗುವುದಿಲ್ಲ. ಆದರೆ ಎಂಎಸ್ ಧೋನಿ ನಿವೃತ್ತಿ ಬಳಿಕ ತಂಡದಲ್ಲಿ ಹೆಚ್ಚಿನ ಫಿನಿಶರ್‌ಗಳು ನಮಗೆ ಸಿಗುವುದಿಲ್ಲ. ಆದ್ದರಿಂದ ನಮಗೆ ಪಂದ್ಯವನ್ನು ಮುಗಿಸುವ ಆಟಗಾರನ ಅಗತ್ಯವಿದೆ. ಹಾಗಾಗಿ ಟಿ20 ವಿಶ್ವಕಪ್‌ನಲ್ಲಿ ದಿನೇಶ್ ಕಾರ್ತಿಕ್‌ಗೆ ಫಿನಿಶರ್ ಪಾತ್ರವನ್ನು ವಹಿಸಲು ಹೆಚ್ಚಿನ ಅವಕಾಶಗಳಿವೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications