ಈತ ಶತಕ ಬಾರಿಸಿದ ಯಾವುದೇ ಪಂದ್ಯದಲ್ಲಿಯೂ ಭಾರತ ಸೋತಿಲ್ಲ! ಇಲ್ಲಿದೆ ಆ ಎಲ್ಲಾ ಪಂದ್ಯಗಳ ಪಟ್ಟಿ

ಓರ್ವ ಆಟಗಾರ ಶತಕ ಬಾರಿಸಿ ತಂಡಕ್ಕೆ ಉತ್ತಮ ಕೊಡುಗೆಯನ್ನು ನೀಡಿದರೆ, ಆ ಆಟದ ನೆರವಿನಿಂದ ತಂಡ ಗೆದ್ದಿರುವ ಹಲವಾರು ಉದಾಹರಣೆಗಳು ಸಾಕಷ್ಟಿವೆ. ಅದೇ ರೀತಿ ಈ ಹಿಂದೆ ಆಟಗಾರನೋರ್ವ ಶತಕ ಬಾರಿಸಿದರೆ ಆ ತಂಡ ಗೆಲ್ಲುವುದಿಲ್ಲ ಎಂಬ ಹಣೆಪಟ್ಟಿ ಕೆಲ ಆಟಗಾರರಿಗೆ ಅಂಟಿಕೊಂಡಿತ್ತು. ಆದರೆ, ಇನ್ನೂ ಕೆಲ ಆಟಗಾರರು ಶತಕ ಬಾರಿಸಿದರೆ ಆತ ಪ್ರತಿನಿಧಿಸುವ ತಂಡ ಗೆಲ್ಲುವುದು ಖಚಿತ ಎಂಬ ನಂಬಿಕೆಯೂ ಸಹ ಇದೆ. ಇನ್ನು ಈ ನಂಬಿಕೆಗಳು ಕಾಕತಾಳೀಯವಾಗಿರಬಹುದು, ಆದರೆ ಈ ಆಟಗಾರನ ವಿಷಯದಲ್ಲಿ ಮಾತ್ರ ಇದು ಪಕ್ಕಾ ಸತ್ಯ. ಈತ ಶತಕ ಬಾರಿಸಿರುವ ಯಾವುದೇ ಪಂದ್ಯದಲ್ಲಿಯೂ ಸಹ ಟೀಮ್ ಇಂಡಿಯಾ ಸೋತಿಲ್ಲ.
ಹೌದು, ಟೀಮ್ ಇಂಡಿಯಾದ ಈ ಆಟಗಾರ ಇಲ್ಲಿಯವರೆಗೂ ಒಟ್ಟು 3 ಏಕದಿನ ಶತಕಗಳು ಹಾಗೂ 12 ಟೆಸ್ಟ್ ಶತಕಗಳನ್ನು ಬಾರಿಸಿದ್ದು, ಈ ಯಾವುದೇ ಪಂದ್ಯದಲ್ಲಿಯೂ ಸಹ ಟೀಮ್ ಇಂಡಿಯಾ ಸೋತಿಲ್ಲ. ಈ ಪೈಕಿ ಕೆಲ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದರೆ, ಇನ್ನುಳಿದ ಬಹುತೇಕ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ಕುರಿತಾದ ವಿವರ ಮತ್ತು ಆ ಶತಕಗಳು ಮತ್ತು ಪಂದ್ಯಗಳ ಫಲಿತಾಂಶದ ಪಟ್ಟಿ ಈ ಕೆಳಕಂಡಂತಿದೆ ಓದಿ..

ಈತ ಶತಕ ಬಾರಿಸಿದ ಪಂದ್ಯಗಳಲ್ಲಿ ಭಾರತಕ್ಕೆ ಸೋಲೇ ಇಲ್ಲ
ಅಂದಹಾಗೆ ಟೀಮ್ ಇಂಡಿಯಾ ಈ ರೀತಿಯ ಗೆಲುವನ್ನು ಕಂಡಿರುವುದು ಅಜಿಂಕ್ಯಾ ರಹಾನೆ ಶತಕ ಬಾರಿಸಿರುವ ಪಂದ್ಯಗಳಲ್ಲಿ. ಈ ಬಲಗೈ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾವನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿಯೂ ಹಲವು ಬಾರಿ ನಾಯಕನಾಗಿ ಮುನ್ನಡೆಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರನಾಗಿ ಕಣಕ್ಕಿಳಿಯುವ ರಹಾನೆ, ಸೀಮಿತ ಓವರ್‌ಗಳ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದಾರೆ. ಇನ್ನು ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಟೆಸ್ಟ್ ಸರಣಿಯಲ್ಲಿ ನಾಯಕನಾಗಿ ಮುನ್ನಡೆಸಿದ್ದ ರಹಾನೆ ಸರಣಿ ಗೆಲುವಿನ ಸಾಧನೆ ಮಾಡಿದ್ದರು. ಹೀಗೆ ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿರುವ ರಹಾನೆ ಶತಕ ಬಾರಿಸಿರುವ ಯಾವುದೇ ಪಂದ್ಯದಲ್ಲಿಯೂ ಭಾರತ ತಂಡ ಸೋಲದೇ ಇರುವುದು ವಿಶೇಷ ಹಾಗೂ ವಿಶಿಷ್ಟ ಅಂಕಿಅಂಶವಾಗಿದೆ.

ರಹಾನೆ ಶತಕ ಬಾರಿಸಿದ ಏಕದಿನ ಪಂದ್ಯಗಳು ಹಾಗೂ ಅವುಗಳ ಫಲಿತಾಂಶದ ವಿವರ
1. ಇಂಗ್ಲೆಂಡ್ ವಿರುದ್ಧ - 2014ರಲ್ಲಿ ರಹಾನೆ 106 ರನ್ ಗಳಿಸಿದ್ದರು ಹಾಗೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದಿತ್ತು.
2. ಶ್ರೀಲಂಕಾ ವಿರುದ್ಧ - 2014ರಲ್ಲಿ ರಹಾನೆ 111 ರನ್ ಗಳಿಸಿದ್ದರು ಹಾಗೂ ಈ ಪಂದ್ಯದಲ್ಲಿ ಭಾರತ ಜಯ ಸಾಧಿಸಿತ್ತು.
3. ವೆಸ್ಟ್ ಇಂಡೀಸ್ ವಿರುದ್ಧ - 2017ರಲ್ಲಿ ಅಜಿಂಕ್ಯಾರಹಾನೆ 103 ಕಲೆಹಾಕಿದ್ದರು ಹಾಗೂ ಇಲ್ಲಿಯೂ ಟೀಮ್ ಇಂಡಿಯಾ ಗೆದ್ದಿತ್ತು.

ರಹಾನೆ ಶತಕ ಬಾರಿಸಿದ ಟೆಸ್ಟ್ ಪಂದ್ಯಗಳು ಹಾಗೂ ಅವುಗಳ ಫಲಿತಾಂಶದ ವಿವರ
1. ನ್ಯೂಜಿಲೆಂಡ್ ವಿರುದ್ಧ - 2014ರಲ್ಲಿ ರಹಾನೆ 118 ರನ್ ಬಾರಿಸಿದ್ದರು ಹಾಗೂ ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.
2. ಇಂಗ್ಲೆಂಡ್ ವಿರುದ್ಧ - 2014ರಲ್ಲಿ ರಹಾನೆ 104 ರನ್ ಬಾರಿಸಿದ್ದರು ಹಾಗೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿತ್ತು.
3. ಆಸ್ಟ್ರೇಲಿಯಾ ವಿರುದ್ಧ - 2014ರಲ್ಲಿ ರಹಾನೆ 147 ರನ್ ಕಲೆಹಾಕಿದ್ದರು ಹಾಗೂ ಈ ಪಂದ್ಯ ಡ್ರಾಗೊಂಡಿತ್ತು.
4. ಶ್ರೀಲಂಕಾ ವಿರುದ್ಧ - 2015ರಲ್ಲಿ ರಹಾನೆ 126 ರನ್ ಗಳಿಸಿದ್ದರು ಹಾಗೂ ಈ ಪಂದ್ಯದಲ್ಲಿ ಭಾರತ ಗೆದ್ದಿತ್ತು.
5. ದಕ್ಷಿಣ ಆಫ್ರಿಕಾ ವಿರುದ್ಧ - 2015ರಲ್ಲಿ ರಹಾನೆ 127 ರನ್ ಗಳಿಸಿದ್ದರು ಹಾಗೂ ಈ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿತ್ತು.
6. ದಕ್ಷಿಣ ಆಫ್ರಿಕಾ ವಿರುದ್ಧ- 2015ರಲ್ಲಿ ರಹಾನೆ ಅಜೇಯ 100 ರನ್ ಕಲೆಹಾಕಿದ್ದರು ಹಾಗೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದಿತ್ತು.
7. ವೆಸ್ಟ್ ಇಂಡೀಸ್ ವಿರುದ್ಧ 2016ರಲ್ಲಿ ರಹಾನೆ ಅಜೇಯ 108 ರನ್ ಗಳಿಸಿದ್ದರು ಹಾಗೂ ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.
8. ನ್ಯೂಜಿಲೆಂಡ್ ವಿರುದ್ಧ 2016ರಲ್ಲಿ ರಹಾನೆ 188 ರನ್ ಚಚ್ಚಿದ್ದರು ಹಾಗೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿತ್ತು.
9. ಶ್ರೀಲಂಕಾ ವಿರುದ್ಧ 2017ರಲ್ಲಿ ರಹಾನೆ 132 ರನ್ ಗಳಿಸಿದ್ದರು ಹಾಗೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದಿತ್ತು.
10. ವೆಸ್ಟ್ ಇಂಡೀಸ್ ವಿರುದ್ಧ 2019ರಲ್ಲಿ ರಹಾನೆ 102 ರನ್ ಗಳಿಸಿದ್ದರು ಹಾಗೂ ಈ ಪಂದ್ಯದಲ್ಲಿ ಭಾರತ ಗೆದ್ದಿತ್ತು.
11. ದಕ್ಷಿಣ ಆಫ್ರಿಕಾ ವಿರುದ್ಧ 2019ರಲ್ಲಿ ರಹಾನೆ 115 ರನ್ ಕಲೆಹಾಕಿದ್ದರು ಹಾಗೂ ಈ ಪಂದ್ಯದಲ್ಲಿಯೂ ಸಹ ಟೀಮ್ ಇಂಡಿಯಾ ಗೆದ್ದು ಬೀಗಿತ್ತು.
12. ಆಸ್ಟ್ರೇಲಿಯಾ ವಿರುದ್ಧ 2020ರಲ್ಲಿ ರಹಾನೆ 112 ರನ್ ಗಳಿಸಿದ್ದರು ಹಾಗೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಲಿಗೆ ವಿಜಯಲಕ್ಷ್ಮಿ ಒಲಿದಿದ್ದಳು.
ಹೀಗೆ ಅಜಿಂಕ್ಯಾ ರಹಾನೆ ಶತಕ ಬಾರಿಸಿದ ಯಾವುದೇ ಪಂದ್ಯದಲ್ಲಿಯೂ ಸಹ ಟೀಮ್ ಇಂಡಿಯಾ ಸೋಲದೇ ಉಳಿದುಕೊಂಡಿರುವುದು ಬಹಳ ವಿಶಿಷ್ಟ ಅಂಕಿಅಂಶವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications