Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup T20: ಭಾರತ, ಪಾಕ್‌ ಹೈವೋಲ್ಟೇಜ್‌ ಫೈಟ್‌: ಪ್ರೋಮೋ ಬಿಡುಗಡೆ ಮಾಡಿದ ವಾಹಿನಿ

ಇನ್ನೇನು ಕೆಲವೇ ದಿನಗಳಲ್ಲಿ ಏಷ್ಯಾ ಕಪ್‌ ಆರಂಭವಾಗಲಿದೆ. ಈ ವೇಳೆ ಏಷ್ಯಾ ಕಪ್‌ ಟಿ20 ಟೂರ್ನಿಯ ಬ್ರಾಡ್‌ ಕಾಸ್ಟರ್‌ ಜಾಹೀರಾತನ್ನು ಬಿಡುಗಡೆ ಮಾಡಿದೆ. ಈ ಜಾಹೀರಾತು ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಪ್ರೋಮೋದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕಾಣಿಸಿಕೊಂಡಿದ್ದಾರೆ. ಸೆಪ್ಟಂಬರ್ 14ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈ ವೋಲ್ಟೇಜ್‌ ಪಂದ್ಯಕ್ಕೆ ಸಂಬಂಧಿಸಿದಂತೆ ಜಾಹೀರಾತು ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಈ ಜಾಹಿರಾತು ವಿಡಿಯೋದಲ್ಲಿ ವೀರೇಂದ್ರ ಸೆಹ್ವಾಗ್‌ ಏಷ್ಯಾ ಕಪ್‌ ಟಿ20 ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ತಿಳಿಸಿದ್ದಾರೆ. ಸದ್ಯ ಟಿ20 ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ ಅತ್ಯುತ್ತಮ ತಂಡವಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಭಾರತ ಈ ಬಾರಿ ಏಷ್ಯಾ ಕಪ್‌ ಉಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಬಾರಿಯ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ ಸೆ.9 ರಿಂದ ಯುಎಇಯಲ್ಲಿ ಆರಂಭವಾಗಲಿದೆ. ಭಾರತ, ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.

India-Pakistan high-voltage Asia Cup showdown promo launched feat Virender Sehwag

ವಿಡಿಯೋ ಆರಂಭದಲ್ಲಿ ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಹೀನ್ ಆಫ್ರಿದಿ ಅವರ ಬೌಲಿಂಗ್‌ ಮಾಡುವ ವಿಡಿಯೋ ಕಾಣುತ್ತಿದೆ. ಈ ವೇಳೆ ಹಿಂಭಾಗದಲ್ಲಿ ರವಿ ಶಾಸ್ತ್ರಿ ಅವರ ವೀಕ್ಷಕ ವಿವರಣೆ ಕೇಳಿ ಬರುತ್ತಿದೆ. ಮಿಸ್ಟರ್‌ 360 ಡಿಗ್ರಿ ಖ್ಯಾತಿಯ ಸೂರ್ಯಕುಮಾರ್ ಬ್ಯಾಟಿಂಗ್‌ ಮಾಡುವುದನ್ನು ಕಾಣಬಹುದಾಗಿದೆ. ಕೊನೆಯ ಎಸೆತದಲ್ಲಿ ಮೂರು ರನ್‌ಗಳ ಅವಶ್ಯಕತೆ ಇತ್ತು. ಆಗ ಸೂರ್ಯ ಆಗಸೆದೆತ್ತರಕ್ಕೆ ಚೆಂಡನ್ನು ಅಟ್ಟುತ್ತಾರೆ. ಟಿವಿಯಲ್ಲಿ ಈ ದೃಶ್ಯ ನೋಡ್ತಾ ಇದ್ದ ಅಭಿಮಾನಿಗಳ ಹೃದಯ ಬಡಿತ ಹೆಚ್ಚಾಗುತ್ತಲೇ ಇತ್ತು. ಆಗ ರವಿ ಶಾಸ್ತ್ರಿ ಇದು ಸಿಕ್ಸರ್‌ ಆಗುತ್ತದೋ ಕ್ಯಾಚ್‌ ಆಗುತ್ತದೋ ಎಂಬ ಬಗ್ಗೆ ರೋಚಕತೆ ಮನೆ ಮಾಡಿತ್ತು. ಅತ್ತ ವೀಕ್ಷಕ ವಿವರಣೆಗಾರರು ಸಿಕ್ಸರ್ ಹೋಗುತ್ತಿದನ್ನು ಖಚಿತ ಪಡಿಸುತ್ತಿದ್ದಂತೆ ಇತ್ತ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿತ್ತು.

ಸಖತ್ ವಿಡಿಯೋ

ಟಿವಿಯನ್ನು ನೋಡ್ತಾ ಇದ್ದ ಪುಟ್ಟು ಬಾಲಕಿ ಹೋಗಿ ತನ್ನ ತಾತಾನನ್ನು ತಬ್ಬಿ ಅಪ್ಪಿಕೊಂಡಳು. ಆಗಲೇ ವೀರೇಂದ್ರ ಸೆಹ್ವಾಗ್‌ ಅವರ ಎಂಟ್ರಿ ಆಗುತ್ತದೆ. ಆಗಲೇ ನೋಡಿ ವೀರೂ ತಾತನ ಹೆಗಲ ಮೇಲೆ ಕೈ ಹಾಕುತ್ತಾ ಮಾತನಾಡಲು ಆರಂಭಿಸುತ್ತಾರೆ.

ಇತ್ತೀಚಿಗೆ ನಾವು ವಿಶ್ವ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ್ದೇವೆ. ಮತ್ತೆ ಏಷ್ಯಾ ಕಪ್ ಗೆಲ್ಲುತ್ತೇವೆ ಎಂದು ನನಗೆ ಖಚಿತವಾಗಿದೆ ಎಂದು ಏಷ್ಯಾ ಕಪ್‌ನ ಅಧಿಕೃತ ಪ್ರಸಾರಕ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಪ್ರೋಮೋದಲ್ಲಿ ಸೆಹ್ವಾಗ್ ಹೇಳಿದ್ದಾರೆ. ನಮ್ಮ ತಂಡ ಬಲಿಷ್ಠವಾಗಿದೆ. ಸೂರ್ಯಕುಮಾರ್‌ ಸಮರ್ಥವಾಗಿ ಮುನ್ನಡೆಸಲಿದ್ದಾರೆ. ಸೂರ್ಯ ಟಿ20 ಸ್ವರೂಪದ ಅತ್ಯುತ್ತಮ ಆಟಗಾರ ಎಂದು ಬಣ್ಣಿಸಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ ಹಲವು ಟಿ20 ಪಂದ್ಯಗಳನ್ನು ಗೆದ್ದಿದೆ. ನಾವು ಏಷ್ಯಾ ಕಪ್ ಅನ್ನು ಸಹ ಗೆಲ್ಲುತ್ತೇವೆ ಎಂದು ನನಗೆ ಆತ್ಮವಿಶ್ವಾಸವಿದೆ ಎಂದು ಸೆಹ್ವಾಗ್‌ ವಿಡಿಯೋದಲ್ಲಿ ಹೇಳಿದ್ದಾರೆ.

ಏಷ್ಯಾ ಕಪ್‌ ಟಿ 20 ಗೆಲ್ಲುವ ಮೂಲಕ ಟಿ 20 ವಿಶ್ವಕಪ್‌ಗೆ ತಯಾರಿ ಆಗಿದೆ. ಯಾವ ಆಟಗಾರರಿಗೆ ಅವಕಾಶ ನೀಡಬೇಕು. ಯಾರಿಗೆ ಚಾನ್ಸ್‌ ನೀಡಬೇಕು ಎಂಬುದಕ್ಕೆ ಇದು ಬೆಸ್ಟ್‌ ಚಾನ್ಸ್‌. ಈ ಮೂಲಕ ಭಾರತ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಕ್ಷಮತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಲು ಒಳ್ಳೆಯ ಅವಕಾಶ ಇದಾಗಿದೆ ಎಂದು ಕಾಣುತ್ತಿದೆ.

Story first published: Wednesday, August 27, 2025, 15:53 [IST]
Other articles published on Aug 27, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+