ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ವೃದ್ಧಿಮಾನ್ ಸಹಾ ಡೌಟ್?

ಬೆಂಗಳೂರು, ಮೇ 29: ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯ ಸಿದ್ಧತೆ ನಡೆದಿರುವ ಬೆನ್ನಲ್ಲೇ, ಟೀಂ ಇಂಡಿಯಾ ತನ್ನ ವಿಕೆಟ್ ಕೀಪರ್ ಕಳೆದುಕೊಳ್ಳುವ ಭೀತಿಯಲ್ಲಿದೆ.
ಐಪಿಎಲ್ 2018ರ ವೇಳೆಯಲ್ಲಿ ಗಾಯಗೊಂಡಿದ್ದ ವೃದ್ಧಿಮಾನ್ ಸಹಾ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಟೆಸ್ಟ್ ಪಂದ್ಯದ ವೇಳೆಗೆ ಗುಣಮುಖರಾಗುವುದು ಅನುಮಾನವೆನಿಸಿದೆ.
ಐಪಿಎಲ್ 2018ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮೇ 25ರಂದು ಈಡೆನ್ ಗಾರ್ಡನ್ಸ್ ನಲ್ಲಿ ಹೆಬ್ಬೆಟ್ಟಿಗೆ ಗಾಯ ಮಾಡಿಕೊಂಡ ಸಹಾ ಅವರು ಇನ್ನೂ ಗಾಯದ ನೋವಿನಿಂದ ಬಳಲುತ್ತಿದ್ದಾರೆ.
ಸಹಾ ಅವರ ಗಾಯ ಮಾಗಿ, ಚೇತರಿಸಿಕೊಂಡರೆ ನಂತರ ತಂಡದ ವೈದ್ಯರು ಹಾಗೂ ನುರಿತ ತಜ್ಞರ ಸಲಹೆ ಮೇರೆಗೆ ಟೆಸ್ಟ್ ಪಂದ್ಯಕ್ಕೆ ಆಡಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಐಪಿಎಲ್ ನಲ್ಲಿ 10 ಇನ್ನಿಂಗ್ಸ್ ಗಳಲ್ಲಿ ಕೇವಲ 122ರನ್ ಗಳಿಸಿದ 33 ವರ್ಷ ವಯಸ್ಸಿನ ಸಹಾ ಅವರು ವಿಕೆಟ್ ಕೀಪಿಂಗ್ ನಲ್ಲೂ ಉತ್ತಮ ನಿರ್ವಹಣೆ ತೋರಿರಲಿಲ್ಲ. ಅಫ್ಘಾನಿಸ್ತಾನದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಜೂನ್ 14ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇದಾದ ಬಳಿಕ ಭಾರತ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಸಹಾ ಅವರ ಅನುಪಸ್ಥಿತಿ ಕಾಡಲಿದೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಬದಲಿ ವಿಕೆಟ್ ಕೀಪರ್ ಯಾರು ಎಂಬುದನ್ನು ಇನ್ನೂ ಬಿಸಿಸಿಐ ನಿರ್ಧರಿಸಿಲ್ಲ. ಬಹುಶಃ ದಿನೇಶ್ ಕಾರ್ತಿಕ್ ಅಥವಾ ಪಾರ್ಥೀವ್ ಪಟೇಲ್ ಅವರಿಗೆ ಅವಕಾಶ ಸಿಗುವ ಎಲ್ಲಾ ಲಕ್ಷಣಗಳಿವೆ.ಸಹಾ ಅವರು ದಕ್ಷಿಣ ಆಫ್ರಿಕಾದ ಪ್ರವಾಸದ ವೇಳೆ ಕೂಡಾ ಗಾಯಗೊಂಡು ಭಾರತಕ್ಕೆ ಹಿಂತಿರುಗಿದ್ದನ್ನು ಇಲ್ಲಿ ಸ್ಮರಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications