ಕೆಎಲ್ ರಾಹುಲ್ ರನ್ನು ಭಾರತದ ಜೋ ರೂಟ್ ಎಂದು ಕರೆದಿದ್ದೇಕೆ?


ಬೆಂಗಳೂರು, ಜೂನ್ 14: ಟೀಂ ಇಂಡಿಯಾದ ಪ್ರತಿಭಾವಂತ ಯುವ ಆಟಗಾರ ಕೆಎಲ್ ರಾಹುಲ್ ರನ್ನು ಇಂಗ್ಲೆಂಡಿನ ಜೋ ರೂಟ್ ಗೆ ಹೋಲಿಸಲಾಗುತ್ತಿದೆ. ಇದಕ್ಕೆ ಏನು ಕಾರಣ? ಮುಂದೆ ಓದಿ..
ಅಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕ ಅಜಿಂಕ್ಯ ರಹಾನೆ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಾಗ, ಆರಂಭಿಕ ಆಟಗಾರರಾಗಿ ಶಿಖರ್ ಧವನ್ ಜತೆಗೆ ಮುರಳಿ ವಿಜಯ್ ಕಣಕ್ಕಿಳಿದರು. ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರಾ, ನಾಲ್ಕನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಆಡಲು ಕಣಕ್ಕಿಳಿಯುವುದು ನಿಗದಿಯಾಗಿತ್ತು.
ಆರಂಭಿಕ ಆಟಗಾರರ ಶತಕ ಸಂಭ್ರಮ
ಶಿಖರ್ ಧವನ್ ಭರ್ಜರಿಯಾಗಿ ಶತಕ ಬಾರಿಸಿದರೆ, ಮುರಳಿ ವಿಜಯ್ ನಿಧಾನಗತಿಯಲ್ಲಿ ಆಡಿ ಶತಕ ಗಳಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬಂದ ಕೆಎಲ್ ರಾಹುಲ್ ಅವರು ಅರ್ಧ ಶತಕ ಗಳಿಸಿದರೂ, ಅಭಿಮಾನಿಗಳಿಗೆ ಏನೋ ಕೊರತೆ ಕಾಣುತ್ತಿತ್ತು.
ಒಂದಲ್ಲ ಎರಡಲ್ಲ ಹತ್ತಾರು ಬಾರಿ ಅರ್ಧ ಶತಕವನ್ನು ಶತಕವನ್ನಾಗಿ ಪರಿವರ್ತಿಸಲಾಗದೆ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದ್ದರ ಬಗ್ಗೆ ಅಭಿಮಾನಿಗಳಿಗೆ ಸಾತ್ವಿಕ ಸಿಟ್ಟಿದೆ.
ಇದೇ ರೀತಿ ಇಂಗ್ಲೆಂಡಿನ ಜೋ ರೂಟ್ ಕೂಡಾ 50ರನ್ ಹೊಡೆದು ತೃಪ್ತಿ ಪಡುತ್ತಿದ್ದಾರೆ. ಇಬ್ಬರೂ ಕ್ಲಾಸಿಕ್ ಆಟಗಾರರಾಗಿದ್ದು, ಇಬ್ಬರೂ ಕೂಡಾ 100ರನ್ ಗಡಿ ದಾಟುವ ಸಾಮರ್ಥ್ಯ ಹೊಂದಿದ್ದರೂ 50 ರನ್ ಗಳ ಸುತ್ತಾ ಸುತ್ತುವುದು ಹೆಚ್ಚಾಗಿದೆ. ಹೀಗಾಗಿ, ರಾಹುಲ್ ರನ್ನು ಭಾರತದ ಜೋ ರೂಟ್ ಎಂದು ಹಲವಾರು ಮಂದಿ ಕರೆದು ಟ್ವೀಟ್ ಮಾಡಿದರು.
ಇಂದಿನ ಪಂದ್ಯದಲ್ಲಿ ಧವನ್ 107, ಮುರಳಿ ವಿಜಯ್ 105 ಗಳಿಸಿದರೆ, ರಾಹುಲ್ 64 ಎಸೆತಗಳಲ್ಲಿ 8 ಬೌಂಡರಿಯಿದ್ದ 54ರನ್ ಗಳಿಸಿ ಯಮಿನ್ ಅಹ್ಮದ್ಜಾಯಿ ಎಸೆತದಲ್ಲಿ ಬೋಲ್ಡ್ ಆದರು. ಮೊದಲ ದಿನದ ಅಂತ್ಯಕ್ಕೆ ಭಾರತ 347/6 ಸ್ಕೋರ್ ಮಾಡಿದೆ.
ರಾಹುಲ್ ಶತಕ ಗಳಿಸದೆ ಔಟಾದ ಇನ್ನಿಂಗ್ಸ್ ಗಳು:
* 2017ರಲ್ಲಿ
* ಕೋಲ್ಕತ್ತಾ ಟೆಸ್ಟ್ ಶ್ರೀಲಂಕಾ ವಿರುದ್ಧ 79ರನ್
* ಪಲ್ಲೆಕೆಲೆ ಶ್ರೀಲಂಕಾ ವಿರುದ್ಧ 85ರನ್,
* ಕೊಲಂಬೋದಲ್ಲಿ ಶ್ರೀಲಂಕಾ ವಿರುದ್ಧ 57,
* ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾದಲ್ಲಿ 60,
* ರಾಂಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 67,
* ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಲ್ಲಿ 90 ಹಾಗೂ 51,
* ಆಸ್ಟ್ರೇಲಿಯಾ ವಿರುದ್ಧ ಪುಣೆಯಲ್ಲಿ 64,
* 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 50
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications