ಭಾರತ vs ಆಸ್ಟ್ರೇಲಿಯಾ: ಅನಗತ್ಯ ದಾಖಲೆ ಬರೆದ ಕುಲದೀಪ್ ಯಾದವ್

ನವದೆಹಲಿ, ಮಾರ್ಚ್ 14: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆಯಲ್ಲಿದ್ದ ಭಾರತ, ಸರಣಿಯನ್ನು 2-3ರಿಂದ ಕಳೆದುಕೊಂಡಿದೆ. ಈ ನಡುವೆ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅನಗತ್ಯ ದಾಖಲೆಯೊಂದನ್ನೂ ಬರೆದಿದ್ದಾರೆ.
ದೆಹಲಿಯಲ್ಲಿ ಬುಧವಾರ (ಮಾರ್ಚ್ 13) ನಡೆದ ಭಾರತ-ಆಸ್ಟ್ರೇಲಿಯಾ 5ನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭಾರತ 35 ರನ್ ಸೋಲಿನೊಂದಿಗೆ ಏಕದಿನ ಸರಣಿಯನ್ನು ಕಳೆದುಕೊಂಡಿತು. 2015ರ ನಂತರ ತವರಿನಲ್ಲಿ ನಡೆದ ಏಕದಿನ ಸರಣಿಯನ್ನು ಭಾರತ ಕೈಬಿಟ್ಟಿದ್ದು ಇದೇ ಮೊದಲ ಸಾರಿ.
ಸರಣಿ ಸೋಲಿಗೆ ಒಬ್ಬರನ್ನೇ ಗುರಿ ಮಾಡುವಂತಿಲ್ಲ. ಪಂದ್ಯವೊಂದರ ಸೋಲಿಗೆ ತಂಡದಲ್ಲಿರುವ ಎಲ್ಲರೂ ಹೊಣೆಗಾರರೆ. ಆದರೆ ಅಂತಿಮ ಏಕದಿನ ಪಂದ್ಯದ ಬಳಿಕ ಕುಲದೀಪ್ ಯಾದವ್ ಕೆಟ್ಟ ಬೌಲಿಂಗ್‌ಗಾಗಿ ದಾಖಲೆ ಬರೆದಿದ್ದನ್ನು ಮರೆಮಾಚುವಂತಿಲ್ಲ.
ದೆಹಲಿ ಪಂದ್ಯದಲ್ಲಿ ಕುಲದೀಪ್ 10 ಓವರ್‌ಗಳಲ್ಲಿ 74 ರನ್ ನೀಡಿ ಕೇವಲ 1 ವಿಕೆಟ್ ಕೆಡವಿದ್ದರು. ಅಂತೂ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಕುಲದೀಪ್ 50 ಓವರ್‌ಗೆ 302 ರನ್ ನೀಡಿ ಕೇವಲ 10 ವಿಕೆಟ್ ಸಾಧನೆ ಹೊಂದಿದ್ದಾರೆ. 30.20ಯ ಬೌಲಿಂಗ್ ಸರಾಸರಿಯಿದು. ಅತೀ ಕೆಟ್ಟ ಸರಾಸರಿಯೂ ಹೌದಿದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications