Ind vs Eng 2nd T20: ಪಾರ್ಥೀವ್ ಪಟೇಲ್ ಪ್ಲೇಯಿಂಗ್ 11 ಪ್ರೆಡಿಕ್ಷನ್, ಹೂಡಾ ಬದಲು ಕೊಹ್ಲಿ?

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರಿಕೆಟ್ ಗ್ರೌಂಡ್ ಎರಡನೇ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಮೊದಲ ಟಿ20ಯಲ್ಲಿ ಭರ್ಜರಿ ಜಯಗಳಿಸಿರುವ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಆತಿಥೇಯರ ಸವಾಲನ್ನ ಎದುರಿಸಲಿದೆ. ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿ ಗುರುತಿಸಿಕೊಂಡಿರುವ ಎಡ್ಜ್‌ಬಾಸ್ಟನ್‌ನಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆಯಿದೆ.
ಮೊದಲ ಪಂದ್ಯದಲ್ಲಿ ಜಯಗಳಿಸಿರುವ ರೋಹಿತ್ ಶರ್ಮಾ ಪಡೆ ಇಂಗ್ಲೆಂಡ್ ವಿರುದ್ಧ ಎರಡನೇ ಟಿ20ಯಲ್ಲಿ ಅಂತಹದ್ದೇ ಪ್ರದರ್ಶನ ಮುಂದುವರಿಸುವ ಯೋಜನೆ ಹೊಂದಿದೆ. ಬ್ಯಾಟ್ ಮತ್ತು ಬಾಲ್‌ನಲ್ಲಿ ಉತ್ತಮವಾಗಿ ಆಡಿದ್ದರೂ ಸಹ, ಫೀಲ್ಡಿಂಗ್‌ನಲ್ಲಿ ಆರು ಕ್ಯಾಚ್‌ಗಳನ್ನು ಕೈ ಚೆಲ್ಲಿದ್ದು ತಂಡವನ್ನ ಚಿಂತೆಗೀಡುಮಾಡಿದೆ.

ಹಿರಿಯ ಆಟಗಾರರು ತಂಡಕ್ಕೆ ಕಂಬ್ಯಾಕ್
ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಿದ್ದ ಹಿರಿಯ ಆಟಗಾರರು ಮೊದಲ ಟಿ20 ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಎರಡನೇ ಟಿ20 ಫೈಟ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆಯಲಿದ್ದು, ಯಾರ ಬದಲು ಎಂಬುದು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿ ಪರಿಣಮಿಸಿದೆ.
Ind vs Eng 2nd T20I: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಮ್, ಪ್ಲೇಯಿಂಗ್ 11, ಫ್ಯಾಂಟೆಸಿ ಕ್ರಿಕೆಟ್ ಟಿಪ್ಸ್

ಟೀಂ ಇಂಡಿಯಾ ಸಂಭಾವ್ಯ ಆಟಗಾರರನ್ನ ತಿಳಿಸಿದ ಪಾರ್ಥಿವ್ ಪಟೇಲ್
ಟೀಂ ಇಂಡಿಯಾ ಮಾಜಿ ಆಟಗಾರ ಪಾರ್ಥೀವ್ ಪಟೇಲ್ ಎರಡನೇ ಟಿ20 ಪಂದ್ಯದಲ್ಲಿ ಹಿರಿಯ ಆಟಗಾರರು ಕಂಬ್ಯಾಕ್ ಆಗಿರುವುದರಿಂದ ಯಾರ ಬದಲು ಸ್ಥಾನ ಪಡೆಯಬಹುದು ಎಂಬುದನ್ನ ಅಂದಾಜಿಸಿದ್ದಾರೆ.
"ಒಂದು ಬದಲಾವಣೆ ಖಚಿತವಾಗಿದೆ ಮತ್ತು ಅದು ಅಕ್ಷರ್ ಪಟೇಲ್ ಬದಲಿಗೆ ರವೀಂದ್ರ ಜಡೇಜಾ ಸ್ಥಾನ ಪಡೆಯಲಿದ್ದಾರೆ. ಅರ್ಷದೀಪ್ ಸಿಂಗ್ ಬದಲಿಗೆ ಜಸ್ಪ್ರೀತ್ ಬುಮ್ರಾ ಅವಕಾಶ ಪಡೆಯಲಿದ್ದಾರೆ. ವಿರಾಟ್ ಕೊಹ್ಲಿ ಕೂಡ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆಯಲಿದ್ದು, ಆದರೆ ಯಾರ ಬದಲು ಸ್ಥಾನ ಎಂದು ನಮಗೆ ತಿಳಿದಿಲ್ಲ. ಆದ್ರೆ ದೀಪಕ್ ಹೂಡಾ ಅವರ ಬದಲು ಮೂರನೇ ಕ್ರಮಾಂಕದಲ್ಲಿ ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ, "ಎಂದು ಪಾರ್ಥಿವ್ ಕ್ರಿಕ್‌ಬಜ್‌ಗೆ ತಿಳಿಸಿದರು.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೂ ಕೊಹ್ಲಿಗೆ ವಿಶ್ರಾಂತಿ? ಅಶ್ವಿನ್ ಟಿ20 ಕಂಬ್ಯಾಕ್ ಸಾಧ್ಯತೆ!

ಶ್ರೇಯಸ್ ಅಯ್ಯರ್ ಬೆಂಚ್ ಗ್ಯಾರೆಂಟಿ
ಪಾರ್ಥೀವ್ ಪಟೇಲ್ ಪ್ರಕಾರ ಫಾರ್ಮ್‌ನಲ್ಲಿರದ ಶ್ರೇಯಸ್ ಅಯ್ಯರ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯನ್ನ ತಳ್ಳಿ ಹಾಕಿದ್ದಾರೆ. ರಿಷಬ್ ಪಂತ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುವುದು ಖಚಿತ, ಆದರೆ ಅವರು ಯಾರ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ ಎಂಬುದು ನಮಗೆ ತಿಳಿದಿಲ್ಲ ಎಂದು ಅವರು ಹೇಳಿದರು.
ಇವರ ಜೊತೆಗೆ ಆಲ್‌ರೌಂಡರ್ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಬದಲು ಸ್ಥಾನ ಪಡೆಯುವುದು ಕೂಡ ಖಚಿತವಾಗಿದೆ. ಜಡ್ಡು ಕಳೆದ ಟೆಸ್ಟ್ ಪಂದ್ಯದಲ್ಲಿ ಅತ್ಯಮೋಘ ಶತಕ ಸಿಡಿಸಿದ್ದರು.

ಭರ್ಜರಿ ಫಾರ್ಮ್‌ನಲ್ಲಿದ್ದರೂ ದೀಪಕ್ ಹೂಡ ಬದಲು ಕೊಹ್ಲಿ ಆಡಲಿದ್ದಾರೆ: ಆರ್.ಪಿ ಸಿಂಗ್
ಇನ್ನು ಭಾರತದ ಮಾಜಿ ಎಡಗೈ ಬೌಲರ್ ಆರ್.ಪಿ ಸಿಂಗ್ ದೀಪಕ್ ಹೂಡಾ ಬದಲು ವಿರಾಟ್ ಕೊಹ್ಲಿ ಖಂಡಿತವಾಗಿಯೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
''ವಿರಾಟ್ ತುಂಬಾ ಉತ್ತಮ ಆಟಗಾರ ಮತ್ತು ಅವರನ್ನು ಆಡುವ ಹನ್ನೊಂದರಲ್ಲಿ ಸೇರಿಸಲಾಗುತ್ತದೆ. ಕೆಲವೊಮ್ಮೆ ನೀವು ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸುತ್ತೀರಿ ಮತ್ತು ರಾಷ್ಟ್ರೀಯ ತಂಡದಲ್ಲಿರುವ ವ್ಯಕ್ತಿ ತುಂಬಾ ಉತ್ತಮವಾಗಿರುವುದರಿಂದ ನಿಮಗೆ ಸ್ಥಾನ ಸಿಗುವುದಿಲ್ಲ. ರಿಷಭ್ ಪಂತ್ ಯಾರನ್ನು ಬದಲಿಸುತ್ತಾರೆ ಎಂಬುದು ಪ್ರಶ್ನೆ. ಇಶಾನ್ ಕಿಶನ್ ಅಥವಾ ದಿನೇಶ್ ಕಾರ್ತಿಕ್?'' ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ಈಗಾಗಲೇ ಮೊದಲ ಪಂದ್ಯ ಗೆದ್ದಿರುವುದರಿಂದ ಎರಡನೇ ಟಿ20 ಗೆಲ್ಲುವುದರ ಜೊತೆಗೆ ಸರಣಿಯನ್ನು ವಶಪಡಿಸಿಕೊಳ್ಳುವ ಯೋಜನೆ ಹಾಕಿಕೊಂಡಿದೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11
ಭಾರತ:
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ಯುಜವೇಂದ್ರ ಚಹಾಲ್
ಇಂಗ್ಲೆಂಡ್:
ಜೋಸ್ ಬಟ್ಲರ್ (ನಾಯಕ), ಜೇಸನ್ ರಾಯ್, ಡೇವಿಡ್ ಮಲನ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ, ಟೈಮಲ್ ಮಿಲ್ಸ್, ಮ್ಯಾಥ್ಯೂ ಪಾರ್ಕಿನ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications