For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾಗೆ 7 ವಿಕೆಟ್‌ಗಳ ಭರ್ಜರಿ ಗೆಲುವು: ನ್ಯೂಜಿಲೆಂಡ್ ವಿರುದ್ಧ T20 ಸರಣಿ ಮುಡಿಗೇರಿಸಿಕೊಂಡ ಭಾರತ

India won series

ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಚುಟುಕು ಕ್ರಿಕೆಟ್ ಸರಣಿಯನ್ನ ಮುಡಿಗೇರಿಸಿಕೊಂಡಿದೆ. ಹೊಸ ನಾಯಕ ರೋಹಿತ್ ಶರ್ಮಾ ಮತ್ತು ಹೊಸ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ಮೊದಲ ಸರಣಿಯನ್ನ ಗೆದ್ದು ಬೀಗಿದೆ.

ರಾಂಚಿಯ ಜೆಎಸ್‌ಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 164 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ನಾಯಕ ಮತ್ತು ಉಪನಾಯಕ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್‌ ಅದ್ಭುತ ಆರಂಭವನ್ನ ನೀಡಿದ್ರು. ಟಿ20 ಕ್ರಿಕೆಟ್‌ನಲ್ಲಿ 4ನೇ ಶತಕದ ಜೊತೆಯಾಟವಾಡಿದ ಈ ಜೋಡಿ ನ್ಯೂಜಿಲೆಂಡ್ ಬೌಲರ್‌ಗಳನ್ನ ಮನಬಂದಂತೆ ದಂಡಿಸಿದ್ರು.

ಓಪನರ್‌ಗಳಿಬ್ಬರು ಅರ್ಧಶತಕ ಸಿಡಿಸುವ ಮೂಲಕ ಭಾರತದ ಗೆಲುವನ್ನು ಸುಲಭವಾಗಿಸಿದ್ರು. 49 ಎಸೆತಗಳಲ್ಲಿ 65 ರನ್ ಸಿಡಿಸಿದ ಕೆ.ಎಲ್ ರಾಹುಲ್ 2 ಸಿಕ್ಸರ್ ಮತ್ತು 6 ಬೌಂಡರಿ ಸಿಡಿಸಿ ಸೌಥಿಗೆ ವಿಕೆಟ್ ಒಪ್ಪಿಸಿದ್ರು, ಅತ್ತ ನಾಯಕ ರೋಹಿತ್ ಶರ್ಮಾ 36 ಎಸೆತಗಳಲ್ಲಿ 55 ರನ್‌ಸಿಡಿಸಿ 25 ನೇ ಅರ್ಧಶತಕ ದಾಖಲಿಸಿದ್ರು.

ಓಪನರ್‌ಗಳಿಬ್ಬರು ವಿಕೆಟ್ ಒಪ್ಪಿಸಿದ ಬಳಿಕ ಜೈಪುರದ ಪಂದ್ಯದ ಹೀರೋ ಸೂರ್ಯಕುಮಾರ್ ಕೇವಲ 1ರನ್‌ ಗೆ ಔಟಾದ್ರು. ಆದ್ರೆ ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದ ಯುವ ಆಲ್‌ರೌಂಡರ್ ವೆಂಕಟೇರ್ಶ ಅಯ್ಯರ್ 12 ರನ್‌ಗಳಿಸಿದ್ರೆ, ಎರಡು ಸತತ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ರಿಷಭ್ ಪಂತ್ ಅಜೇಯ 12ರನ್‌ಗಳಿಸಿದ್ರು. ಈ ಮೂಲಕ ಭಾರತ 16 ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲೆಂಡ್ ಪರ ಓಪನರ್ ಮಾರ್ಟಿನ್ ಗಪ್ಟಿಲ್ ಮತ್ತು ಡೇರಿಲ್ ಮಿಚೆಲ್ ಸ್ಫೋಟಕ ಆರಂಭವನ್ನೇ ನೀಡಿದ್ರು. ಮೊದಲ ಓವರ್‌ನಲ್ಲೇ ಭುವನೇಶ್ವರ್ ಕುಮಾರ್ 14ರನ್‌ಗಳನ್ನ ನೀಡಿ ದುಬಾರಿಯಾದ್ರು.

ಭರ್ಜರಿ ಆರಂಭ ನೀಡಿದ್ದ ಈ ಜೋಡಿಗೆ ಬ್ರೇಕ್ ನೀಡಿದ್ದು, ದೀಪಕ್ ಚಹಾರ್. 15 ಎಸೆತಗಳಲ್ಲಿ 31 ರನ್‌ ಸಿಡಿಸಿ ಟೀಂ ಇಂಡಿಯಾಗೆ ಕಂಟಕವಾಗಿದ್ದ ಗಪ್ಟಿಲ್ ರಿಷಭ್ ಪಂತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.

ಮೊದಲ ವಿಕೆಟ್ ಉರುಳುತ್ತಿದ್ದಂತೆ ಟೀಂ ಇಂಡಿಯಾ ಬೌಲರ್‌ಗಳು ಕಿವೀಸ್ ಬ್ಯಾಟ್ಸ್‌ಮನ್‌ಗಳನ್ನ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. 21 ರನ್‌ಗಳಿಸಿದ್ದ ಮಾರ್ಕ್ ಚಾಪ್ಮನ್ ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದ್ರೆ, 31 ರನ್‌ಗಳಿಸಿ ಉತ್ತಮವಾಗಿ ಆಡ್ತಿದ್ದ ಡೇರಿಲ್ ಮಿಚೆಲ್, ಭಾರತದ ಪರ ಚೊಚ್ಚಲ ಟಿ20 ಪಂದ್ಯವನ್ನಾಡುತ್ತಿರುವ ಹರ್ಷಲ್ ಪಟೇಲ್‌ರ ಮೊದಲ ವಿಕೆಟ್ ಬಲಿಯಾದ್ರು.

ಇನ್ನು ಮಿಡಲ್ ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದ ರವಿಚಂದ್ರನ್ ಅಶ್ವಿನ್ 13ರನ್‌ಗಳಿಸಿದ್ದ ಟಿಮ್ ಸೀಫರ್ಟ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ್ರು. ಇದರ ಜೊತೆಗೆ ಉತ್ತಮ ಆಟವಾಡ್ತಿದ್ದ ಗ್ಲೆನ್ ಫಿಲಿಪ್ಸ್‌, ಚೊಚ್ಚಲ ಪಂದ್ಯವನ್ನಾಡಿದ ಹರ್ಷಲ್ ಪಟೇಲ್‌ರ 2 ವಿಕೆಟ್‌ ತನ್ನದಾಗಿಸಿಕೊಂಡ್ರು.

ಭಾರತದ ಪ್ರಬಲ ಬೌಲಿಂಗ್ ದಾಳಿಗೆ ಸಾಕ್ಷಿಯೆಂಬಂತೆ ಕಿವೀಸ್‌ನ ಸ್ಫೋಟಕ ಆಟಗಾರ ಜೇಮ್ಸ್ ನೀಶಮ್ 12 ಎಸೆತಗಳಲ್ಲಿ ಗಳಿಸಿದ್ದು ಕೇವಲ 3 ರನ್‌ಗಳು. ಭುವನೇಶ್ವರ್‌ ಕುಮಾರ್ 18ನೇ ಓವರ್‌ನಲ್ಲಿ ನೀಶಮ್ ವಿಕೆಟ್ ಪಡೆದುಕೊಂಡ್ರು.

ಕೊನೆಯ ಎರಡು ಓವರ್‌ಗಳಲ್ಲಿ ಮಿಚೆಲ್ ಸ್ಯಾಂಟ್ನರ್ ಮತ್ತು ಆ್ಯಡಮ್ ಮಿಲ್ನೆ ರನ್‌ಗಳಿಸಲು ಪರದಾಡಿದ್ರು. ಸ್ಯಾಂಟ್ನರ್ 8ರನ್‌ಗಳಿಸಿದ್ರೆ, ಆ್ಯಡಮ್ ಮಿಲ್ನೆ ಐದು ರನ್‌ಗಳಿಸಿದ್ರು. ಮೂರು ಓವರ್‌ಗಳಲ್ಲಿ ದುಬಾರಿಯಾಗಿದ್ದ ದೀಪಕ್ ಚಹಾರ್ ಕೊನೆಯ ಓವರ್‌ನಲ್ಲಿ ಕೇವಲ ಏಳು ರನ್‌ ನೀಡಿ ಕಿವೀಸ್ ತಂಡಕ್ಕೆ ಕಡಿವಾಣ ಹಾಕಿದ್ರು.

ನ್ಯೂಜಿಲೆಂಡ್ ಅಂತಿಮವಾಗಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153ರನ್ ಕಲೆಹಾಕಿ ಟೀಂ ಇಂಡಿಯಾಗೆ 154ರನ್‌ಗಳ ಗುರಿ ನೀಡಿತು. ಭಾರತದ ಪರ ಹರ್ಷಲ್ ಪಟೇಲ್ ಎರಡು ವಿಕೆಟ್ ಕಬಳಿಸಿದ್ರೆ, ಭುವಿ, ದೀಪಕ್, ಅಕ್ಷರ್ ಪಟೇಲ್, ಅಶ್ವಿನ್ ತಲಾ ಒಂದು ವಿಕೆಟ್ ಪಡೆದ್ರು.

ಸತತ ಎರಡು ಟಿ20 ಪಂದ್ಯ ಗೆದ್ದ ಭಾರತವು ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿದೆ. ಚೊಚ್ಚಲ ಪಂದ್ಯದಲ್ಲೇ ನಾಲ್ಕು ಓವರ್‌ಗಳಿಗೆ 25 ರನ್‌ ನೀಡಿ 2 ವಿಕೆಟ್ ಕಬಳಿಸಿದ ಹರ್ಷಲ್ ಪಟೇಲ್, ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆಯುವ ಮೂಲಕ ಮಿಂಚಿದ್ದಾರೆ.

Story first published: Saturday, November 20, 2021, 9:42 [IST]
Other articles published on Nov 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+