ಭಾರತ vs ನ್ಯೂಜಿಲೆಂಡ್ 2ನೇ ಟಿ20 ಪಂದ್ಯದಲ್ಲಿ ದಾಖಲಾದ ಪ್ರಮುಖ ದಾಖಲೆಗಳಿವು

ನವೆಂಬರ್ 20ರಂದು ಬೇ ಓವಲ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಭಾರತ 65 ರನ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ ಅಜೇಯ 111 ರನ್ ಗಳಿಸುವ ಮೂಲಕ ಭಾರತ 191 ರನ್‌ಗಳ ಬೃಹತ್ ಮೊತ್ತ ಪೇರಿಸಲು ಕಾರಣವಾಯಿತು. ಟಿಮ್ ಸೌಥಿ ಹ್ಯಾಟ್ರಿಕ್ ಸಾಧನೆ ಮಾಡಿದರು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್ 126 ರನ್‌ಗಳಿಗೆ ಆಲೌಟ್ ಆಗುವ ಮೂಲಕ 65 ರನ್‌ಗಳ ಸೋಲನುಭವಿಸಿತು. ನಾಯಕ ಕೇನ್ ವಿಲಿಯಮ್ಸನ್ 52 ಎಸೆತಗಳಲ್ಲಿ 61 ರನ್ ಗಳಿಸಿದರು. ಉಳಿದ ಬ್ಯಾಟರ್ ರನ್ ಗಳಿಸಲು ಪರದಾಡಿದರು.
ಭಾರತ ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯಗಳಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ನಿರ್ಮಾಣವಾದ ದಾಖಲೆಗಳ ಬಗ್ಗೆ ತಿಳಿಯೋಣ.

ಲಾಕಿ ಫರ್ಗುಸನ್ ವಿಶಿಷ್ಟ ದಾಖಲೆ
ನ್ಯೂಜಿಲೆಂಡ್ ತಂಡದ ವೇಗಿ ಲಾಕಿ ಫರ್ಗುಸನ್ ಸದ್ಯಕ್ಕೆ ಟಿ20 ಮಾದರಿಯಲ್ಲಿ ಅಪಾಯಕಾರಿ ಬೌಲರ್ ಆಗಿದ್ದಾರೆ. ಭಾರತದ ವಿರುದ್ಧ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಒಬ್ಬ ಬೌಲರ್ ಎರಡು ಹಿಟ್ ವಿಕೆಟ್‌ಗೆ ಕಾರಣವಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಲಾಕಿ ಬೌಲಿಂಗ್‌ನಲ್ಲಿ ಹಿಟ್ ವಿಕೆಟ್ ಆದರು.
ಕಳೆದ ವರ್ಷ ನ್ಯೂಜಿಲೆಂಡ್ ಭಾರತದ ಪ್ರವಾಸದಲ್ಲಿ ಲಾಕಿ ಫರ್ಗುಸನ್ ಬೌಲಿಂಗ್‌ನಲ್ಲಿ ಹರ್ಷಲ್ ಪಟೇಲ್ ಹಿಟ್ ವಿಕೆಟ್ ಆಗಿದ್ದರು. ಇದು ಬೌಲರ್ ಒಬ್ಬ ಎರಡು ಬಾರಿ ಹಿಟ್ ವಿಕೆಟ್ ಪಡೆದ ದಾಖಲೆ ಹೊಂದಲು ಕಾರಣವಾಗಿದೆ.
NZ vs IND: ಚುಟುಕು ಕ್ರಿಕೆಟ್‌ನಲ್ಲಿ ಶತಕ ಬಾರಿಸಿ ಸರಣಿ ದಾಖಲೆ ಮುರಿದ ಸೂರ್ಯಕುಮಾರ್

ಭಾರತದ ಸ್ಪಿನ್ನರ್‌ಗಳಿಂದ ದಾಖಲೆ
ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ (SENA) ಪಿಚ್‌ಗಳಲ್ಲಿ ಸಾಮಾನ್ಯವಾಗಿ ವೇಗದ ಬೌಲರ್‌ಗಳು ವಿಕೆಟ್ ಪಡೆಯುತ್ತಾರೆ. ಇಲ್ಲಿನ ಪಿಚ್‌ಗಳು ಸ್ಪಿನ್ನರ್‌ಗಳಿಗೆ ಅಷ್ಟೇನೂ ಅನುಕೂಲಕರವಾಗಿಲ್ಲ. ಆದರೆ, ಬೇ ಓವಲ್‌ನಲ್ಲಿ ಭಾರತದ ಸ್ಪಿನ್ನರ್ ಗಳು ನ್ಯೂಜಿಲೆಂಡ್ ಬ್ಯಾಟಿಂಗ್ ಬಲವನ್ನೇ ಮುರಿದರು.
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸ್ಪಿನ್ನರ್‌ಗಳು SENA ದೇಶಗಳಲ್ಲಿ ಐದು ವಿಕೆಟ್‌ಗಳಿಗಿಂತ ಹೆಚ್ಚು ವಿಕೆಟ್ ಪಡೆದರು. ಆಫ್ ಸ್ಪಿನ್ನರ್ ದೀಪಕ್ ಹೂಡಾ ನಾಲ್ಕು ವಿಕೆಟ್ ಪಡೆದರೆ, ಚಹಾಲ್ 2 ವಿಕೆಟ್ ಮತ್ತು ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.

ಹೊಸ ದಾಖಲೆ ನಿರ್ಮಿಸಿದ ದೀಪಕ್ ಹೂಡಾ
ದೀಪಕ್ ಹೂಡಾ ಬ್ಯಾಟಿಂಗ್‌ನಲ್ಲಿ ವಿಫಲರಾದರು ಬೌಲಿಂಗ್‌ನಲ್ಲಿ ಮಿಂಚಿದರು. 2.5 ಓವರ್ ಗಳಲ್ಲಿ 10 ರನ್ ನೀಡಿ 4 ವಿಕೆಟ್ ಪಡೆದರು. ಆಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಮತ್ತು ಡೈರಿಲ್ ಮಿಚೆಲ್‌ರನ್ನು ಔಟ್ ಮಾಡಿದರು.
ಈ ಮೊದಲು ಜಸ್ಪ್ರೀತ್ ಬುಮ್ರಾ ನ್ಯೂಜಿಲೆಂಡ್‌ನಲ್ಲಿ 12 ರನ್ ನೀಡಿ 3 ವಿಕೆಟ್ ಪಡೆದಿದ್ದು ದಾಖಲೆಯಾಗಿತ್ತು. ಆದರೆ, ದೀಪಕ್ ಹೂಡಾ 10 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಬುಮ್ರಾ ದಾಖಲೆಯನ್ನು ಅಳಿಸಿಹಾಕಿದರು.

ಹಲವು ದಾಖಲೆಗಳನ್ನು ಮುರಿದ ಸೂರ್ಯ
ಸೂರ್ಯಕುಮಾರ್ ಯಾದವ್ 111 ರನ್ ಗಳಿಸುವ ಮೂಲಕ ನ್ಯೂಜಿಲೆಂಡ್ ವಿರುದ್ಧ ಭಾರತದ ಪರವಾಗಿ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಈ ಹಿಂದೆ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ 2017ರಲ್ಲಿ 80 ರನ್ ಗಳಿಸಿದ್ದು ದಾಖಲೆಯಾಗಿತ್ತು.
ಸೂರ್ಯಕುಮಾರ್ ಇದುವರೆಗೂ ಎರಡು ಟಿ20 ಶತಕಗಳನ್ನು ಸಿಡಿಸಿದ್ದಾರೆ. ಎರಡೂ ಶತಕಗಳು 200ಕ್ಕಿಂತ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಗಳಿಸಿರುವ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಒಂದೇ ವರ್ಷದಲ್ಲಿ ಎರಡು ಶತಕ ಗಳಿಸಿದ ದಾಖಲೆ ಹೊಂದಿದ್ದು, ಸೂರ್ಯಕುಮಾರ್ ಯಾದವ್ ಈಗ ಆ ದಾಖಲೆಯನ್ನ ಸಮಗೊಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications