"ನೋಟಿನಲ್ಲಿ ಚಿಪ್ ಇದ್ದಂತೆಯೇ ನಾಣ್ಯದಲ್ಲೂ ಇದೆಯಾ?": ಭಾರತದ ವಿರಳ ಸಾಧನೆಗೆ ಜಹೀರ್ ತರಲೆ

ಟಿ20 ವಿಶ್ವಕಪ್‌ನ ನಂತರ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಆಡಿದ್ದು ಭರ್ಜರಿಯಾಗಿ ಸರಣಿ ಗೆದ್ದಿದೆ. ಇದೀಗ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಿವೀಸ್ ಪಡೆಯನ್ನು ಎದುರಿಸಲು ಟೀಮ್ ಇಂಡಿಯಾ ಸಜ್ಜಾಗಿದೆ. ಈ ಸಂದರ್ಭದಲ್ಲಿ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಅಪರೂಪದ ಸಾಧನೆಯೊಂದರ ಬಗ್ಗೆ ಜಹೀರ್ ಖಾನ್ ಟ್ವಿಟ್ಟರ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಸ್ವಾರಸ್ಯಕರ ಸಂಗತಿಯ ಬಗ್ಗೆ ಕೆಲ ಮಾಜಿ ಆಟಗಾರರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಎದುರಾಳಿ ತಂಡಕ್ಕೆ ವೈಟ್‌ವಾಶ್ ಮಾಡಿ ಗೆದ್ದುಕೊಂಡಿತ್ತು. ವಿಶ್ವಕಪ್‌ನ ಸೂಪರ್ 12 ಹಂತದಲ್ಲಿ ಸೋಲು ಅನುಭವಿಸಿದರು ಕೂಡ ಭಾರತದಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಎದುರಾಳಿಗೆ ಯಾವುದೇ ಅವಕಾಶ ನೀಡದಂತೆ ಪ್ರದರ್ಶನ ನೀಡುವ ಮೂಲಕ ಗೆದ್ದು ಬೀಗಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಮಾಡಿದ ವಿರಳ ಸಾಧನೆಯೊಂದನ್ನು ಜಹೀರ್ ಖಾನ್ ಹಂಚಿಕೊಂಡಿದ್ದಾರೆ. ಅಲ್ಲದೆ ತಮಾಷೆಯಾಗಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅಲ್ಲದೆ ನೋಟಿನಲ್ಲಿ ಚಿಪ್‌ನ ಕತೆಯನ್ನು ಕೂಡ ಈ ಟ್ವೀಟ್‌ನಲ್ಲಿ ಜಹೀರ್ ಖಾನ್ ಉಲ್ಲೇಖಿಸಿದ್ದಾರೆ.
ಹಾಗಾದರೆ ಜಹೀರ್ ಖಾನ್ ಮಾಡಿದ ಆ ಟ್ವೀಟ್ ಏನು? ಟೀಮ್ ಇಂಡಿಯಾ ಮಾಡಿದ ಆ ವಿರಳ ಸಾಧನೆ ಯಾವುದು? ಅಷ್ಟಕ್ಕೂ ನೋಟಿನಲ್ಲಿ ಚಿಪ್‌ನ ಕಥೆಯನ್ನು ಜಹೀರ್ ಪ್ರಸ್ತಾಪಿಸಿದ್ದೇಕೆ? ಮುಂದೆ ಓದಿ..

ಸತತ ಮೂರು ಪಂದ್ಯಗಳಲ್ಲಿ ಟಾಸ್ ಗೆಲುವು
ಜಹೀರ್ ಖಾನ್ ತಮ್ಮ ಟ್ವೀಟ್‌ನಲ್ಲಿ ಮುಖ್ಯವಾಗಿ ಪ್ರಸ್ತಾಪಿಸಿದ್ದು ಭಾರತ ಈ ಸರಣಿಯಲ್ಲಿ ಟಾಸ್ ಗೆದ್ದ ಬಗ್ಗೆ. ಈ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಟಾಸ್ ಗೆದ್ದಿರುವುದಕ್ಕೆ ಜಹೀರ್ ಖಾನ್ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇತ್ತೀಚಿನ ಸರಣಿಗಳಲ್ಲಿ ಭಾರತ ಸತತ ಮೂರು ಪಂದ್ಯಗಳಲ್ಲಿ ಟಾಸ್ ಗೆದ್ದಿರುವುದನ್ನು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಈ ಅಚ್ಚರಿಯಲ್ಲಿಯೇ ಜಹೀರ್ ನೀಡಿದ ಪ್ರತಿಕ್ರಿಯೆ ಹಾಗೂ ಪ್ರಸ್ತಾಪಿಸಿದ ವಿಷಯ ಕುತೂಹಲ ಮೂಡಿಸಿದೆ.
'ಆತ ಪಾಪದ ಹುಡುಗ'; ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ಗೆ ಆತನನ್ನು ಆಯ್ಕೆ ಮಾಡದಿರುವುದಕ್ಕೆ ಜಡೇಜಾ ಬೇಸರ

ನೋಟಿನಲ್ಲಿದ್ದಂತೆಯೇ ಚಿಪ್ ಇದೆಯಾ?
ಇನ್ನು ಈ ಟಾಸ್ ಗೆದ್ದ ವಿಚಾರಕ್ಕೆ ಸಂಬಂಧಿಸಿದಂತೆ ಜಹೀರ್ ಖಾನ್ ಟಾಸ್ ಹಾಕುವ ನಾಣ್ಯದಲ್ಲೇನಾದರೂ ಚಿಪ್ ಇದೆಯಾ ಎಂದು ತಮಾಷೆಯಾಗಿ ಪ್ರಸ್ತಾಪಿಸಿದ್ದಾರೆ. "ಕಾಯಿನ್‌ನಲ್ಲೇನಾದರೂ ಕರೆನ್ಸಿ ನೋಟಿನಲ್ಲಿ ಇದ್ದಂತೆಯೇ ಚಿಪ್ ಏನಾದರೂ ಇಟ್ಟಿದ್ದಾರೆಯೇ?" ಎಂದು ಜಹೀರ್ ಖಾನ್ ಕಾಲೆಳೆದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ನೋಟ್ ಬ್ಯಾನ್ ಆದ ಸಂದರ್ಭದಲ್ಲಿ ಕೆಲ ಆರ್ಥಿಕ ತಜ್ಞರ ವಿಶ್ಲೇಷಣೆಯ ಕಾರಣದಿಂದಾಗಿ ದೇಶಾದ್ಯಂತ ಹರಿದಾಡಿ ಬಳಿಕ ನಗೆಪಾಟಲಿಗೀಡಾದ 'ನೋಟಿನಲ್ಲಿ ಚಿಪ್' ವಿಚಾರವನ್ನು ಜಹೀರ್ ಖಾನ್ ಪ್ರಸ್ತಾಪಿಸಿದ್ದಾರೆ. ಮುಂದುವರಿದು ಅವರು, ನಾನು ತಮಾಷೆ ಮಾಡಿದ್ದೇನೆ, ನೀವೇನಾದರೂ ಭಾರತ ಸತತ ಮೂರು ಪಂದ್ಯಗಳಲ್ಲಿ ಟಾಸ್ ಗೆದ್ದಂತಾ ಬೇರೆ ಯಾವುದಾದರೂ ಅಪರೂಪದ ಕ್ಷಣಗಳನ್ನು ನೆನಪಿಸಿಕೊಳ್ಳಬಹುದಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇದಕ್ಕೆ ವಿಶೇಷ ಸೂಚನೆಯೊಂದು ಕೂಡ ಜಹೀರ್ ಖಾನ್ ಹಾಕಿದ್ದು ಕ್ರಿಕೆಟರ್‌ಗಳು ಮಾತ್ರವೇ ರಿಪ್ಲೈ ಪ್ರತಿಕ್ರಿಯಿಸಿಬಹುದು ಎಂದಿದ್ದಾರೆ.

ಜಹೀರ್ ಖಾನ್ ಟ್ವೀಟ್‌ಗೆ ವಾಸಿಂ ಜಾಫರ್ ಪ್ರತಿಕ್ರಿಯೆ
ಇನ್ನು ಜಹೀರ್ ಖಾನ್ ಮಾಡಿದ ಈ ಟ್ವೀಟ್‌ಗೆ ವಾಸಿಂ ಜಾಫರ್ ಪ್ರತಿಕ್ರಿಯಿಸಿದ್ದಾರೆ. "ಹೌದು, ಸತತ ಮೂರು ಪಂದ್ಯಗಳಲ್ಲಿ ಟಾಸ್ ಗೆದ್ದಿರುವುದು ಅಪರೂಪದ ಸಾಧನೆ ನಿಜ. ಆದರೆ ಇದು ಜಹೀರ್ ಖಾನ್ ಅವರ ಬೌಲಿಂಗ್ ಫಿಗರ್‌ಗಿಂತ ಉತ್ತಮವಾಗಿ ವಾಸಿಂ ಜಾಫರ್ ಬೌಲಿಂಗ್ ಫಿಗರ್ ಮಾಡಿದಷ್ಟು ಅಪರೂಪವಲ್ಲ" ಎಂದು ತಮ್ಮನ್ನು ತಾವೇ ಗೇಲಿ ಮಾಡಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications