For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನದ ಲೆಕ್ಕಾಚಾರ ಉಲ್ಟಾ ಮಾಡಲು ಇವರೇ ಸಾಕು: ರಾತ್ರೋರಾತ್ರಿ ಹೀರೋಗಳಾಗೋದು ಇವರೇನಾ!

ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯದ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಲೆಕ್ಕಾಚಾರಗಳು ನಡೆಯುತ್ತಿದೆ. ಯಾವ ತಮಡ ಮೇಲುಗೈ ಸಾಧಿಸಲುದೆ? ಯಾವ ಆಟಗಾರರು ಈ ಪಂದ್ಯದಲ್ಲಿ ಮಿಂಚಲಿದ್ದಾರೆ? ಹೀಗೆ ನಾನಾ ರೀತಿಯ ಕುತೂಹಲಗಳು ಅಭಿಮಾನಿಗಳನ್ನು ಸಹಜವಾಗುಯೇ ಕಾಡುತ್ತಿದೆ. ಅದಕ್ಕಾಗಿ ಈ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಕಾತರದಿಮದ ಕಾಯುತ್ತಿದ್ದಾರೆ.

ಇನ್ನು ಭಾರತ ತಂಡದ ಕ್ರಿಕೆಟ್ ಆಟಗಾರರ ದೃಷ್ಟಿಯಿಂದ ನೋಡುವುದಾದರೆ ಪಾಕಿಸ್ತಾನದ ವಿರುದ್ಧದ ಈ ಸೆಣೆಸಾಟಕ್ಕಾಗಿ ಭಾರೀ ಸಿದ್ಧತೆಗಳನ್ನು ಈಗಾಗಲೇ ಆಟಗಾರರು ನಡೆಸಿದ್ದಾರೆ. ಪಾಕ್ ಪಡೆಯ ಬೌಲರ್‌ಗಳನ್ನು ಹೇಗೆ ಎದುರಿಸಬೇಕು ಎನ್ನುವ ಬಗ್ಗೆ ಬ್ಯಾಟರ್‌ಗಳು ರಣತಂತ್ರವನ್ನು ಹೆಣೆಯುತ್ತಿದ್ದರೆ ಬೌಲರ್‌ಗಳು ತಮ್ಮಲ್ಲಿನ ಅತ್ಯುತ್ತಮ ಅಸ್ತ್ರಗಳನ್ನು ಪಾಕ್ ದಾಂಡಿಗರಿಗೆ ಎಸೆಯಲು ಸಿದ್ಧತೆ ನಡೆಸಿದ್ದಾರೆ. ಅಂತಿಮವಾಗಿ ಆಟದ ಸಂದರ್ಭದಲ್ಲಿ ಯಾರು ಪರಿಣಾಮಕಾರಿಯಾಗಿ ತಮ್ಮ ಪೂರ್ವಸಿದ್ಧತೆಯನ್ನು ಯೋಜನೆಯನ್ನು ಕಾರ್ಯಗತಗೊಳಿಸಲಿದ್ದಾರೆ ಎನ್ನುವುದೇ ಕುತೂಹಲ.

India vs Pakistan: 3 Youngsters who may become heroes overnight for India

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಗೆಲುವಿಗೆ ಎಲ್ಲಾ 11 ಆಟಗಾರರು ಕೂಡ ಸರ್ವ ಪ್ರಯತ್ನ ನಡೆಸುವುದರ ಬಗ್ಗೆ ಅನುಮಾನಗಳಿಲ್ಲ. ಆದರೆ ತಂಡದ ಯುವ ಆಟಗಾರರು ಈ ಹೈವೋಲ್ಟೇಜ್ ಪಂದ್ಯದಲ್ಲಿ ತಾವು ಮುಂದೆ ನಿಂತು ಪಂದ್ಯವನ್ನು ಗೆಲ್ಲಿಸಿಕೊಡುವ ಆತ್ಮವಿಶ್ವಾಸದಲ್ಲಿದ್ದಾರೆ. ಹಾಗಾದರೆ ಆ ಆಟಗಾರರು ಯಾರು? ಮುಂದೆ ಓದಿ..

ಆರಂಭಿಕ ಶುಬ್ಮನ್ ಗಿಲ್

ಪಾಕಿಸ್ತಾನದ ವಿರಿದ್ಧ ಭಾರತ ಮೇಲುಗೈ ಸಾಧಿಸಬೇಕಿದ್ದರೆ ಪಾಕ್ ವೇಗದ ಬೌಲರ್‌ಗಳ ವಿರುದ್ಧ ಹಿಡಿತ ಸಾಧಿಸಬೇಕಿದೆ. ಅದರಲ್ಲೂ ಪವರ್‌ಪ್ಲೇ ಅವಧಿಯಲ್ಲಿ ಟೀಮ್ ಇಂಡಿಯಾ ಹೇಗೆ ಪಾಕ್ ಬೌಲಿಂಗ್ ಎದುರಿಸಲಿದೆ ಎನ್ನುವುದು ನಿರ್ಣಾಯಕ ಎನ್ನಲಾಗುತ್ತಿದೆ. ಹಾಗಾಗಿ ಆರಂಭಿಕನಾಗಿ ರೋಹಿತ್ ಶರ್ಮಾಗೆ ಸಾಥ್ ನೀಡಲಿರುವ ಶುಬ್ಮನ್ ಗಿಲ್ ಈ ಪಂದ್ಯದಲ್ಲಿ ಪಾಕ್ ಮಾರಕ ವೇಗಿಗಳಿಗೆ ಭರ್ಜರಿ ಪ್ರತ್ಯುತ್ತರ ನೀಡುವ ಆತ್ಮವಿಶ್ವಾಸದಲ್ಲಿದ್ದಾರೆ. ಉತ್ತಮ ಲಯದಲ್ಲಿರುವ ಗಿಲ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಪಾತ್ರವಹಿಸುವ ಎಲ್ಲಾ ಸಾಮರ್ಥ್ಯವನ್ನು ಕೂಡ ಹೊಂದಿದ್ದಾರೆ.

ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್

ಕೆಎಲ್ ರಾಹುಲ್ ಮೊದಲ ಎರಡು ಪಂದ್ಯಗಳಿಗೆ ಅಲಭ್ಯವಾಗಿರುವ ಹಿನ್ನೆಲೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಇಶಾನ್ ಕಿಶನ್ ಸ್ಥಾನ ಪಡೆಯುವುದು ಖಚಿತ. ವೈಟ್‌ಬಾಲ್ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿರುವ ಇಶಾನ್ ಕಿಶನ್ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಅನುಮಾನವಿಲ್ಲ. ಹಾಗಾಗಿಯೇ ಪಾಕಿಸ್ತಾನದ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಆಡುವ ಅವಕಾಶ ದೊರೆತಾದ ಅದನ್ನು ಎರಡೂ ಕೈಯ್ಯಲ್ಲಿ ಬಾಚಿಕೊಳ್ಳುವ ಸಾಮರ್ಥ್ಯ ಈ ಯುವ ಅಟಗಾರನಲ್ಲಿ ನಿಸ್ಸಂಶಯವಾಗಿ ಇದೆ. ಭಾರತದ ಸ್ಟಾರ್ ಆಟಗಾರರ ವಿರುದ್ಧ ಪಾಕ್ ಬೌಲರ್‌ಗಳು ವಿಶೇಷ ರಣತಂತ್ರ ಹೆಣೆದಿರುವಾಗ ಆ ಅವುಗಳಿಗೆ ಟಕ್ಕರ್ ಕೊಟ್ಟು ನಿದ್ದೆಗೆಡಿಸುವ ಎಲ್ಲಾ ಸಾಮರ್ಥ್ಯ ಕೂಡ ಇಶಾನ್ ಕಿಶನ್‌ಗೆ ಇದೆ. ಹಾಗಾಗಿಯೇ ಈ ಪಂದ್ಯದಲ್ಲಿ ಇಶಾನ್ ಕಿಶನ್ ಮೇಲೆ ಕೂಡ ಕ್ರಿಕೆಟ್ ಅಭಿಮಾನಿಗಳು ಕಣ್ಣಿಡಬೇಕಿದೆ.

ಸ್ಪಿನ್ನರ್ ಕುಲ್‌ದೀಪ್ ಯಾದವ್

ಪಾಕಿಸ್ತಾನ ತಂಡ ಪ್ರಸ್ತುತ ಬೌಲಿಂಗ್‌ನಲ್ಲಿ ಎಷ್ಟು ಬಲಿಷ್ಠವಾಗಿದೆಯೋ ಬ್ಯಾಟಿಂಗ್ ವಿಭಾಗ ಕೂಡ ಅಷ್ಟೇ ಸಮತೋಲಿತವಾಗಿದೆ. ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುವ ಸಾಮರ್ಥ್ಯವಿರುವ ಹಲವು ಆಟಗಾರರ ದಂಡೇ ಇದೆ. ಪಾಕ್ ಲೆಕ್ಕಾಚಾರ ತಲೆಕೆಳಗಾಗಿಸುವ ಸಾಮರ್ಥ್ಯವಿರುವ ಬೌಲರ್‌ಗಳ ಪಡೆಯೇ ಇದ್ದರೂ ಸದ್ದಿಲ್ಲದೆ ಆಘಾತ ನೀಡುವ ಸಾಮರ್ಥ್ಯವಿರವ ಆಟಗಾರನೆಂದರೆ ಅದು ಕುಲ್‌ದೀಪ್ ಯಾದವ್. ಈ ಚೈನಾಮನ್ ಬೌಲರ್ ಇತ್ತೀಚಿನ ದಿನಗಳಲ್ಲಿ ಅಮೋಘ ಬೌಲಿಂಗ್ ಪ್ರದರ್ಶನದ ಮೂಲಕ ಗಮನಸೆಳೆದಿದ್ದು ಪಾಕ್‌ಗೆ ದೊಡ್ಡ ಆಘಾತ ನೀಡಿದರೆ ಅಚ್ಚರಿಯಿಲ್ಲ. ಪಲ್ಲೆಕೆಲೆಯ ನಿಧಾನಗತಿಯ ಪಿಚ್‌ನ ಲಾಭವನ್ನು ಬಳಸಿಕೊಂಡು ಮ್ಯಾಚ್ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ ಕುಲ್‌ದೀಪ್ ಯಾದವ್.

Story first published: Friday, September 1, 2023, 10:42 [IST]
Other articles published on Sep 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+