Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MS ಧೋನಿಯ ವಿಶೇಷ ಕ್ಲಬ್‌ ಸೇರುವ ಕನಸಿನಲ್ಲಿ ಸೂರ್ಯ

ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ ಆರಂಭವಾಗುವ ಮುನ್ನವೇ ಭಾರತ, ಪಾಕಿಸ್ತಾನ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಅದರಂತೆ ಈ ಎರಡೂ ತಂಡಗಳು ಭಾನುವಾರ ದುಬೈನಲ್ಲಿ ಏಷ್ಯಾ ಕಪ್‌ ಟಿ20 ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಕಾದಾಟವನ್ನು ನಡೆಸಲಿವೆ. ಸೂಪರ್‌ 4 ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ 11 ರನ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿ ಫೈನಲ್‌ಗೆ ಅರ್ಹತೆ ಪಡೆದಿತ್ತು. ಇನ್ನು ಈಗಾಗಲೇ ಭಾರತ ಸೂಪರ್‌ 4 ಹಂತದಲ್ಲಿ ಆಡಿರುವ ಎರಡೂ ಪಂದ್ಯ ಗೆದ್ದು ಫೈನಲ್‌ ಪ್ರವೇಶಿಸಿತ್ತು. ಎರಡು ಬಲಿಷ್ಠ ತಂಡಗಳ ನಡುವೆ ಪ್ರಶಸ್ತಿ ಸುತ್ತಿನ ಕಾದಾಟ ರೋಚಕತೆ ಹುಟ್ಟಿಸಿದೆ.

ಟೀಮ್ ಇಂಡಿಯಾ ಪ್ರಸಕ್ತ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದೆ. ಈ ವೇಳೆ ತಂಡದ ಸ್ಟಾರ್ ಬ್ಯಾಟರ್‌ಗಳು ಹಾಗೂ ಬೌಲರ್‌ಗಳು ಸ್ಥಿರ ಪ್ರದರ್ಶನ ನೀಡಿ ಜಯದಲ್ಲಿ ಮಿಂಚಿದ್ದಾರೆ. ಭಾನುವಾರ ಸ್ಥಿರ ಪ್ರದರ್ಶನ ನೀಡಿದ್ದೇ ಆದಲ್ಲಿ ಭಾರತ, ದೊಡ್ಡ ಸಾಧನೆ ಮಾಡಲಿದೆ. ಅಲ್ಲದೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್‌ ವಿಶೇಷ ಕ್ಲಬ್‌ ಸೇರುವ ಕನಸಿನಲ್ಲಿದ್ದಾರೆ.

India vs Pakistan Asia Cup T20 Final Suryakumar Yadav Aims to Join MS Dhoni s Elite Club

ಭಾರತ ಹಾಗೂ ಪಾಕಿಸ್ತಾನ ತಂಡಗಳು 2007 ರಿಂದ ಇಲ್ಲಿಯವರೆಗೆ ಒಟ್ಟು 15 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ ಏಕಪಕ್ಷೀಯ ದಾಖಲೆಯನ್ನು ಹೊಂದಿದೆ. ಅಲ್ಲದೆ 12 ಪಂದ್ಯಗಳಲ್ಲಿ ಬ್ಲ್ಯೂ ಬಾಯ್ಸ್‌ ಜಯ ಸಾಧಿಸಿದರೆ, 3 ಪಂದ್ಯಗಳಲ್ಲಿ ಪಾಕ್‌ ಗೆಲುವು ಕಂಡಿದೆ. 2007ರಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಪಾಕ್ ತಂಡವನ್ನು 5 ರನ್‌ಗಳಿಂದ ಮಣಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಈಗ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾ ಕಪ್‌ ಟಿ20 ಟೂರ್ನಿಯ ಫೈನಲ್‌ನಲ್ಲಿ ಫೈಟ್‌ ನಡೆಸಲಿವೆ. 18 ವರ್ಷಗಳ ಬಳಿಕ ಉಭಯ ತಂಡಗಳು ಪ್ರತಿಷ್ಠಿತ ಟೂರ್ನಿಯಲ್ಲಿ ಹೋರಾಟ ನಡೆಸಲಿದ್ದು, ಮತ್ತೊಂದು ದೊಡ್ಡ ಪ್ರಶಸ್ತಿಯನ್ನು ಎತ್ತುವ ಕನಸು ಕಾಣುತ್ತಿದೆ. ಈ ಮೂಲಕ ಸೂರ್ಯ, ಎಂಎಸ್‌ ಧೋನಿ ಅವರ ಕ್ಲಬ್‌ ಸೇರುವ ಕನಸಿನಲ್ಲಿದ್ದಾರೆ.

ದುಬೈನಲ್ಲಿ ಹೇಗಿದೆ ದಾಖಲೆ?

ಭಾರತ ಹಾಗೂ ಪಾಕಿಸ್ತಾನ ನಡುವಣ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಹೋರಾಟ ನಡೆಸಲಿವೆ. ಈ ಟೂರ್ನಿಯ ಫೈನಲ್‌ ಪಂದ್ಯ ಸೆ.28 ರಂದು ನಡೆಯಲಿದೆ. ಈ ಮೈದಾನದಲ್ಲಿ ಎರಡೂ ತಂಡಗಳ ನಡುವೆ ಒಟ್ಟು 5 ಪಂದ್ಯಗಳನ್ನು ಆಡಿದದು, ಮೂರು ಪಂದ್ಯಗಳನ್ನು ಭಾರತ ಗೆದ್ದಿದ್ದು, ಪಾಕಿಸ್ತಾನ ಎರಡು ಪಂದ್ಯಗಳನ್ನು ಗೆದ್ದಿದೆ. ಭಾರತ ತಂಡವು ದುಬೈ ಕ್ರೀಡಾಂಗಣದಲ್ಲಿ ಇದುವರೆಗೆ ಒಟ್ಟು 13 ಟಿ20 ಪಂದ್ಯ ಆಡಿದ್ದು 9 ರಲ್ಲಿ ಜಯ ಸಾಧಿಸಿದೆ. ಈ ಸಾಲಿಗೆ ಮತ್ತೊಂದು ಗೆಲುವಿನ ಸಂಖ್ಯೆ ಸೇರಿಸುವ ಕನಸನ್ನು ಸೂರ್ಯ ಪಡೆ ಕಾಣುತ್ತಿದೆ. ಭಾನುವಾರ ನಡೆಯುವ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Story first published: Friday, September 26, 2025, 16:37 [IST]
Other articles published on Sep 26, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+