India vs Pakistan: ಎಂಸಿಜಿ ಪಿಚ್ ಹೇಗಿರುತ್ತದೆ ಎಂದು ಗುಟ್ಟು ಬಿಟ್ಟುಕೊಟ್ಟ ಕ್ಯುರೇಟರ್

ಅಕ್ಟೋಬರ್ 23 ರ ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಇನ್ನು, ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಪಿಚ್ ಆಟದ ಉದ್ದಕ್ಕೂ ಸ್ಥಿರವಾಗಿರುತ್ತದೆ ಎಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ಪಿಚ್ ಕ್ಯುರೇಟರ್ ಮೈಕೆಲ್ ಸಾಲ್ವಟೋರ್ ಹೇಳಿದ್ದಾರೆ.
90,000 ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯವನ್ನು ಹೊಂದಿರುವ ಐಕಾನಿಕ್ ಎಂಸಿಜಿ ನಲ್ಲಿ ಬಹು ನಿರೀಕ್ಷಿತ ಬ್ಲಾಕ್‌ಬಸ್ಟರ್ ಘರ್ಷಣೆಯ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಸೋಲ್ಡ್ ಔಟ್ ಆಗಿವೆ. ಎಲ್ಲಾ ಟಿಕೆಟ್ ಮಾರಾಟವಾದ ಕೆಲವೇ ನಿಮಿಷಗಳಲ್ಲಿ ಹೆಚ್ಚುವರಿ ಸ್ಟ್ಯಾಂಡಿಂಗ್-ರೂಮ್ ಟಿಕೆಟ್‌ಗಳನ್ನು ಸಹ ಮಾರಾಟ ಮಾಡಲಾಗಿದೆ.
ಆರಂಭಿಕ ಓವರ್‌ಗಳಲ್ಲಿ ವೇಗದ ಬೌಲರ್‌ಗಳಿಗೆ ಎಂಸಿಜಿ ಪಿಚ್ ನೆರವಾಗುವ ಮೂಲಕ ಬ್ಯಾಟ್ ಮತ್ತು ಬಾಲ್ ನಡುವೆ ಸಮಬಲದ ಪೈಪೋಟಿ ನಡೆಯುವ ಸಾಧ್ಯತೆಯಿದೆ. ಕೆಲ ಓವರ್ ಗಳ ನಂತರ, ಬ್ಯಾಟರ್‌ಗಳು ತಮ್ಮ ಸ್ಟ್ರೋಕ್‌ಗಳನ್ನು ಮುಕ್ತವಾಗಿ ಆಡಬಹುದು.
ಭಾರತ-ಪಾಕಿಸ್ತಾನದ ಪಂದ್ಯದ ಪಿಚ್ ಹೇಗೆ ವರ್ತಿಸುತ್ತದೆ ಎನ್ನುವುದರ ಕುರಿತು ಕ್ಯುರೇಟರ್ ಮೈಕೆಲ್ ಸಾಲ್ವಟೋರ್ ಮಾತನಾಡಿದ್ದಾರೆ.

ಪಿಚ್‌ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ
"ಟಿ20 ವಿಕೆಟ್‌ಗಳು ಸಾಮಾನ್ಯವಾಗಿ ಇಡೀ ಪಂದ್ಯಕ್ಕೆ ನಿಜವಾಗಿಯೂ ಸ್ಥಿರವಾಗಿರುತ್ತವೆ. ನಿಜವಾಗಿಯೂ ಉತ್ತಮ ಆಟವನ್ನು ನಾವು ನಿರೀಕ್ಷಿಸಬಹುದು" ಎಂದು ಅವರು ಹೇಳಿದ್ದಾರೆ.
ವಿಕೆಟ್ ನರ್ಸರಿಯಲ್ಲಿ ವರ್ಷವಿಡೀ ಪಿಚ್‌ಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ ಮತ್ತು ಮೂರು ವಾರಗಳ ಹಿಂದೆ ಪಂದ್ಯವನ್ನು ಆಯೋಜಿಸಲಾಗಿದೆ ಎಂದು ಸಾಲ್ವಟೋರ್ ಹೇಳಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ನಾಲ್ವರ ಮೇಲೆ ಭಾರತೀಯ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ

ಡ್ರಾಪ್-ಇನ್ ಪಿಚ್‌ನ ಪರಿಕಲ್ಪನೆ
ಎಂಸಿಜಿ, ಅಡಿಲೇಡ್ ಓವಲ್ ಮತ್ತು ಪರ್ತ್‌ನಲ್ಲಿರುವ ಆಪ್ಟಸ್ ಸ್ಟೇಡಿಯಂನಂತಹ ಅನೇಕ ಆಸ್ಟ್ರೇಲಿಯಾದ ಕ್ರೀಡಾಂಗಣಗಳು ಡ್ರಾಪ್-ಇನ್ ಪಿಚ್‌ನ ಪರಿಕಲ್ಪನೆಯನ್ನು ಬಳಸುತ್ತವೆ.
ಡ್ರಾಪ್-ಇನ್ ಪಿಚ್ ಅನ್ನು ಕ್ರೀಡಾಂಗಣದ ಹೊರಗೆ ತಯಾರಿಸಲಾಗುತ್ತದೆ ಮತ್ತು ಕ್ರಿಕೆಟ್ ಋತುವಿನ ಆರಂಭದಲ್ಲಿ ಅದನ್ನು ಸ್ಥಳಾಂತರಿಸಲಾಗುತ್ತದೆ. ಒಂದು ನಿರ್ದಿಷ್ಟ ಋತುವಿಗಾಗಿ ಪಂದ್ಯಗಳು ಮುಕ್ತಾಯಗೊಂಡ ನಂತರ, ಪಿಚ್‌ಗಳನ್ನು ಇತರ ಕ್ರೀಡಾ ಸ್ಥಳಗಳಿಗೆ ಕೊಂಡೊಯ್ಯಲಾಗುತ್ತದೆ.

ಡ್ರಾಪ್ ಇನ್ ಪಿಚ್ ಬಳಕೆ
ಎಂಸಿಜಿಯಲ್ಲಿ ಡ್ರಾಪ್-ಇನ್ ಪಿಚ್ ಕುರಿತು ಮಾತನಾಡುತ್ತಾ, ಸಾಲ್ವಟೋರ್ ಹೇಳಿದರು, "ನಾವು ಮೆಲ್ಬೋರ್ನ್ ಅಂಗಳದಲ್ಲಿ ಡ್ರಾಪ್-ಇನ್ ವಿಕೆಟ್‌ಗಳನ್ನು ಹೊಂದಿದ್ದೇವೆ. ಹಾಗಾಗಿ ಕ್ರಿಕೆಟ್ ಋತುವಿಗಾಗಿ ನಾವು ವಿಕೆಟ್‌ಳನ್ನು ತರುತ್ತೇವೆ ಮತ್ತು ಸ್ವಲ್ಪ ಮರಳು ಹಾಸಿಗೆಯಂತ ಪಿಚ್ ಸಿದ್ಧಪಡಿಸಲಾಗಿದೆ. ಕ್ರಿಕೆಟ್ ಮುಗಿದ ನಂತರ, ಫುಟ್ಬಾಲ್ ಕ್ರೀಡಾಂಗಣವನ್ನಾಗಿ ಬದಲಾಯಿಸಲಾಗುತ್ತದೆ. ಪಿಚ್‌ಗಳನ್ನು ನರ್ಸರಿಯಲ್ಲಿ ಇಡಲಾಗುತ್ತದೆ, ಅವುಗಳನ್ನು ಅಲ್ಲಿಯೇ ನಿರ್ವಹಣೆ ಮಾಡಲಾಗುತ್ತದೆ" ಎಂದು ಹೇಳಿದರು.

ಬಹು ನಿರೀಕ್ಷತ ಪಂದ್ಯಕ್ಕೆ ಕ್ಷಣಗಣನೆ
ಭಾರತ ಮತ್ತು ಪಾಕಿಸ್ತಾನವು 2022 ರ ಟಿ 20 ವಿಶ್ವಕಪ್‌ಗೆ ಮುನ್ನ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಎರಡು ಪಂದ್ಯಗಳಲ್ಲಿ ಆಡಿದೆ. ಗುಂಪು ಹಂತದ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳಿಂದ ಜಯ ಗಳಿಸಿತ್ತು. ಆದರೆ, ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿತ್ತು.
ಕಳೆದ ವರ್ಷ ದುಬೈನಲ್ಲಿ 10 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಬಾಬರ್ ಅಜಮ್ ಮತ್ತು ತಂಡ ಟಿ 20 ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊದಲಬಾರಿಗೆ ಸೋಲಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications