ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ 2026: ಸೂರ್ಯಕುಮಾರ್ ಯಾದವ್ ನಾವು ಅವರಿಗೆ ಶರಣಾಗುವ ಮಾತಿಲ್ಲ ಎಂದಿದ್ದೇಕೆ?
India Vs Pakistan Match: ಭಾರತ ತಂಡವು ಇಂದು ಟಿ20 ವಿಶ್ವಕಪ್ 2026ರ ಗುಂಪು ಹಂತದ ಬಹುನಿರೀಕ್ಷಿತ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಸಾಂಪ್ರದಾಯಿಕ ಎದುರಾಳಿ ತಂಡಗಳ ನಡುವಿನ ಹೈವೋಲ್ಟೇಜ್ ಮಹಾಸಮರ ಕೊಲಂಬೊದಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ನಡುವೆಯೇ ಇದೀಗ ಉಸ್ಮಾನ್ ತಾರಿಕ್ ವಿಭಿನ್ನ ಬೌಲಿಂಗ್ ಶೈಲಿ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ ಸೂರ್ಯಕುಮಾರ್ ಯಾದವ್ ಅವರು ಅಚ್ಚರಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಪಾಕಿಸ್ತಾನ ತಮಡ ಉಸ್ಮಾನ್ ತಾರಿಕ್ ವಿಚಿತ್ರ ಸ್ಪಿನ್ ಬೌಲಿಂಗ್‌ನಿಂದ ಎದುರಾಗುವ ಸವಾಲಿನ ಬಗ್ಗೆ ಕೇಳಿದ ಪ್ರಶ್ನೆಗೆ ಟೀಂ ಇಂಡಿಯಾ ನಾಯಕ ಸ್ಪಷ್ಟ ಮತ್ತು ಧೈರ್ಯದ ಉತ್ತರ ನೀಡಿದ್ದಾರೆ. "ಅವರು ವಿಭಿನ್ನ ಸ್ವಭಾವದ ಬೌಲರ್ ಆಗಿರಬಹುದು. ಆದರೆ, ನಾವು ಅವರ ಮುಂದೆ ಶರಣಾಗುವುದಿಲ್ಲ," ಎಂದು ಸೂರ್ಯಕುಮಾರ್ ಯಾದವ್ ಅವರು ಹೇಳಿದ್ದಾರೆ.

ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ ಸೂರ್ಯ ಹೇಳಿಕೆ
ಸೂರ್ಯಕುಮಾರ್ ಅವರು ನೀಡಿದ ಈ ಹೇಳಿಕೆ ಭಾರತ ತಂಡದ ಆತ್ಮವಿಶ್ವಾಸವನ್ನು ತೋರಿಸುವುದರ ಜೊತೆಗೆ, ಅಭಿಮಾನಿಗಳಲ್ಲೂ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ಎಲ್ಲರ ಚಿತ್ತ ಭಾರತ ಹಾಗೂ ಪಾಲಿಸ್ತಾನ ನಡುವೆ ನಡೆಯುವ ಮಹಾಸಮರದತ್ತ ನೆಟ್ಟಿದೆ. ಈ ಹೈವೋಲ್ಟೇಜ್ ಪಂದ್ಯ ವೀಕ್ಷಣೆಗಾಗಿ ಬರೀ ಎರಡು ರಾಷ್ಟ್ರಗಳು ಅಷ್ಟೇ ಅಲ್ಲದೆ, ಇಡೀ ವಿಶ್ವವೇ ಕಾರತರದಿಂದ ಕಾಯುತ್ತಿದೆ.
ಉಸ್ಮಾನ್ ತಾರಿಕ್ ಯಾರು?
ಪಾಕಿಸ್ತಾನ ತಂಡದ ಯುವ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರು ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ 2026 ಪಂದ್ಯಕ್ಕೂ ಮುನ್ನ ಅತ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಬಲಗೈ ಆಫ್ ಸ್ಪಿನ್ನರ್ ಆಗಿರುವ ಉಸ್ಮಾನ್ ತಾರಿಕ್, 7 ಜೂನ್ 1995ರಂದು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ನೌಶೇರಾದಲ್ಲಿ ಜನಿಸಿದ್ದಾರೆ. ಅವರು 2025ರ ಅಂತ್ಯದ ವೇಳೆಗೆ ಪಾಕಿಸ್ತಾನ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ, ತಮ್ಮ ವಿಭಿನ್ನ ಬೌಲಿಂಗ್ ಶೈಲಿಯಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ.
ಉಸ್ಮಾನ್ ತಾರಿಕ್ ಅವರ ವಿಭಿನ್ನ ಆಕ್ಷನ್ ಬೌಲಿಂಗ್ ಇದೀಗ ಚರ್ಚೆಗೆ ಕಾರಣವಾಗಿದೆ. ನಿಂತುಕೊಂಡು ಬೌಲ್ ಮಾಡುವ ಶೈಲಿ ಹಾಗೂ ಗೂಗ್ಲಿ ಸೇರಿದಂತೆ ಹಲವು ರೀತಿಯಲ್ಲಿ ಕಾಣಿಸುತ್ತಿದೆ. ಈ ಗುಣಲಕ್ಷಣಗಳು ಕೆಲವು ಬ್ಯಾಟ್ಸ್‌ಮನ್‌ಗಳನ್ನು ಅಚ್ಚರಿಗೊಳಿಸಿದೆ. ಇನ್ನೂ ಉಸ್ಮಾನ್ ತಾರಿಕ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದ್ದೇ ಒಂದು ರೋಚಕ ಸಂಗತಿಯಾಗಿದೆ.
ತಾರಿಕ್ ಕ್ರಿಕೆಟ್‌ಗೆ ಮರಳಲು ಪ್ರೇರಣೆ ಏನು?
ಕೆಲಕಾಲ ಕ್ರಿಕೆಟ್‌ನಿಂದ ದೂರವಿದ್ದ ಅವರು, ಯುಎಇಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡಿದರು. ಈ ಅವಧಿಯಲ್ಲಿ, ಎಂಎಸ್ ಧೋನಿ ಜೀವನ ಕುರಿತ 'The Untold Story' ಚಿತ್ರವನ್ನು ವೀಕ್ಷಿಸಿದ ಬಳಿಕ ಮತ್ತೆ ಕ್ರಿಕೆಟ್‌ಗೆ ಮರಳಬೇಕೆಂಬ ಪ್ರೇರಣೆ ಪಡೆದಿದ್ದಾರೆ ಎನ್ನಲಾಗುತ್ತದೆ. ಈ ಪ್ರೇರಣೆಯೇ ಅವರೊಳಗಿನ ಕ್ರಿಕೆಟ್ ಪ್ರೀತಿಯನ್ನು ಮತ್ತೆ ಜೀವಂತಗೊಳಿಸಿ, ಪಾಕಿಸ್ತಾನದಲ್ಲಿ ವೃತ್ತಿಪರ ಕ್ರಿಕೆಟ್‌ಗೆ ಪುನಃ ಪ್ರವೇಶಿಸಲು ಕಾರಣವಾಯಿತು ಎನ್ನುವ ಮಾಹಿತಿ ಲಭ್ಯವಾಗಿದೆ.
ಅವರ ಬೌಲಿಂಗ್ ಶೈಲಿ ಚರ್ಚೆ ಹಾಗೂ ಪರಿಶೀಲನೆಗೂ ಕಾರಣವಾಗಿದೆ. ದೇಶೀಯ ಟಿ20 ಲೀಗ್‌ಗಳಲ್ಲಿ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಆಕ್ಷನ್ ಬಗ್ಗೆ ಸಂಶಯ ವ್ಯಕ್ತವಾದ ಬಗ್ಗೆ ವರದಿಯಾಗಿತ್ತು. ಆದರೆ, ಪಾಕಿಸ್ತಾನದಲ್ಲಿ ನಡೆಸಿದ ಬಯೋಮೆಕ್ಯಾನಿಕಲ್ ಪರೀಕ್ಷೆಗಳ ಬಳಿಕ ಅವರ ಆಕ್ಷನ್ ಮಾನ್ಯವಾಗಿದೆ ಎಂದು ಸ್ಪಷ್ಟಪಡಿಸಲಾಯಿತು.
ಅಭಿಮಾನಿಗಳು ಹಾಗೂ ಬೆಂಬಲಿಗರ ಪ್ರಕಾರ, ಅವರು ನಿಧಾನಗತಿಯಲ್ಲಿ ಮಾಡುವ ಬೌಲಿಂಗ್ ಶೈಲಿ ಹಾಗೂ ವೈವಿಧ್ಯತೆಗಳು ಅವರನ್ನು ಪರಿಣಾಮಕಾರಿ ಬೌಲರ್ ಆಗಿ ರೂಪಿಸುತ್ತವೆ. ವಿಶೇಷವಾಗಿ ಸೀಮಿತ ಓವರ್‌ಗಳ ಫಾರ್ಮಾಟ್ ಕ್ರಿಕೆಟ್‌ನಲ್ಲಿ. ಮತ್ತೊಂದೆಡೆ ಇನ್ನೂ ಕೆಲವರು ಅವರ ಬೌಲಿಂಗ್ ಶೈಲಿ ಕುರಿತು ಅನುಮಾನ ವ್ಯಕ್ತಪಡಿಸಿದ್ದು, ಇದು ಯಾವ ರೀತಿಯ ಬೌಲಿಂಗ್? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಇಂದು ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿ ಮತ್ತೆ ಮುನ್ನೆಲೆಗೆ ಬಂದಿದೆ. ಇದರಿಂದಾಗಿ ಅವರು ಈ ಟೂರ್ನಿಯ ಅತ್ಯಂತ ಕುತೂಹಲಕಾರಿ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications