India Vs Pakistan: ಆರಂಭದಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ಕೊಹ್ಲಿಗೆ ಸ್ಪೂರ್ತಿ ನೀಡಿದ್ದು ಈ ಆಟಗಾರ

ಭಾನುವಾರ ನಡೆದ ಟಿ20 ವಿಶ್ವಕಪ್‌ನ ಸೂಪರ್ 12 ಮುಖಾಮುಖಿಯಲ್ಲಿ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಆಡಿದರು. 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸುವ ಮೂಲಕ, ಟೀಂ ಇಂಡಿಯಾ 160 ರನ್‌ಗಳ ಗುರಿಯನ್ನು ರೋಚಕವಾಗಿ ಮುಟ್ಟಿತು.
ಒಂದು ಹಂತದಲ್ಲಿ 31 ರನ್ ಗಳಿಸಿ 4 ವಿಕೆಟ್ ಕಳೆದಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಆಸರೆಯಾದರು. ಕೆಎಲ್ ರಾಹುಲ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಅಕ್ಷರ್ ಪಟೇಲ್ ಬೇಗನೆ ಔಟಾದರು. ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತವಾಗಿ ಆಟವಾಡಿದರು. ಆರಂಭದಲ್ಲಿ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ರನ್ ಗಳಿಸಿದರು. ಮೊದಲ 21 ಎಸೆತಗಳಲ್ಲಿ ಕೇವಲ 12 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಆದರೆ ಅಂತಿಮ ಹಂತದಲ್ಲಿ ಸ್ಫೋಟಕ ಆಟವಾಡುವ ಮೂಲಕ ತಮ್ಮ ಸ್ಟ್ರೈಕ್ ರೇಟ್ ಅನ್ನು ಉತ್ತಮ ಪಡಿಸಿಕೊಂಡರು. ಚೇಸಿಂಗ್‌ನಲ್ಲಿ ಕೊಹ್ಲಿ ಎಂದಿಗೂ ಕಿಂಗ್ ಆಗಿದ್ದಾರೆ. ಪಾಕಿಸ್ತಾನದ ವಿರುದ್ಧ ಅಸಾಧಾರಣ ದಾಖಲೆಯನ್ನು ಹೊಂದಿದ್ದಾರೆ. ಪಾಕ್ ವಿರುದ್ಧ ಆರಂಭದಲ್ಲಿ ನಿಧಾನಗತಿಯ ರನ್ ಗಳಿಕೆ ಬಗ್ಗೆ ಅವರು ಮಾತನಾಡಿದ್ದಾರೆ.

ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಕೊಹ್ಲಿ ಮಾತು
ತಮ್ಮ ನಿಧಾನಗತಿಯ ಆರಂಭದ ಬಗ್ಗೆ ವಿರಾಟ್ ಕೊಹ್ಲಿ ಮೌನ ಮುರಿದ್ದಾರೆ, "21 ಎಸೆತಗಳಲ್ಲಿ 12 ರನ್ ಗಳಿಸಿದ್ದಾಗ ನಾನು ಆಟವನ್ನು ಗೊಂದಲಗೊಳಿಸುತ್ತಿದ್ದೇನೆ ಎನ್ನಿಸಿತ್ತು. ನಾನು ಗ್ಯಾಪ್‌ನಲ್ಲಿ ಬಾಲ್‌ಗಳನ್ನು ಹೊಡೆಯಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದ್ದಾರೆ.
ಆದರೆ ನಿಮ್ಮ ಜವಾಬ್ದಾರಿ ಮತ್ತು ಸ್ಥಾನವನ್ನು ಅರ್ಥ ಮಾಡಿಕೊಂಡಾಗ, ನಾನು ಕೊನೆಯವರೆಗೂ ಬ್ಯಾಟ್ ಮಾಡಿದರೆ ಉತ್ತಮವಾಗಿ ರನ್ ಗಳಿಸಬಲ್ಲೇ ಎಂದು ನನಗೆ ತಿಳಿದಿತ್ತು. ನನ್ನ ಪಾತ್ರವನ್ನು ನಾನು ನಿರ್ವಹಿಸಬೇಕಿತ್ತು. ಇನ್ನಿಂಗ್ಸ್ ಅಂತ್ಯದಲ್ಲಿ ಪವರ್ ಹಿಟ್ಟಿಂಗ್ ಮಾಡಬಲ್ಲೇ ಎನ್ನುವ ನಂಬಿಕೆ ಇತ್ತು ಎಂದು ಕೊಹ್ಲಿ ಹೇಳಿದ್ದಾರೆ.
SA Vs Zim: ವಿಚಿತ್ರ ಕಾರಣಕ್ಕೆ 5 ರನ್ ದಂಡ ತೆತ್ತ ದಕ್ಷಿಣ ಆಫ್ರಿಕಾ, ಮಾಡಿದ ತಪ್ಪಾದರೂ ಏನು?

ಹಾರ್ದಿಕ್ ಪಾಂಡ್ಯ ಬಗ್ಗೆ ಮೆಚ್ಚುಗೆ
ಭಾರತದ ಮಾಜಿ ನಾಯಕ ಸಹ ಆಟಗಾರ ಹಾರ್ದಿಕ್ ಪಾಂಡ್ಯ ಬಗ್ಗೆ ವಿರಾಟ್ ಕೊಹ್ಲಿ ಹೊಗಳಿದರು, ಪಾಂಡ್ಯ ಜೊತೆಗೂಡಿ 100+ ರನ್‌ಗಳ ಜೊತೆಯಾಟ ಆಡಿದರು. ಭಾರತವನ್ನು ಕಠಿಣ ಪರಿಸ್ಥಿತಿಯಿಂದ ರಕ್ಷಣೆ ಮಾಡಿದರು.
"ಪ್ರಾಮಾಣಿಕವಾಗಿ, ಆ ಹಂತದಲ್ಲಿ ನಾನು ಸಾಕಷ್ಟು ಒತ್ತಡವನ್ನು ಅನುಭವಿಸುತ್ತಿದ್ದೆ. ಆದರೆ ನಂತರ ಹಾರ್ದಿಕ್ ಪಾಂಡ್ಯ ಬಂದಾಗ ಮತ್ತು ಆತ ಕೆಲವು ಬೌಂಡರಿಗಳನ್ನು ಹೊಡೆದಾಗ, ನನ್ನ ಮೇಲಿನ ಒತ್ತಡ ಕಡಿಮೆಯಾಯಿತು. ಜೊತೆಯಾಟ 100 ರನ್ ತಲುಪಿದ್ದು ನಮಗೆ ತಿಳಿದರಲಿಲ್ಲ. ಇಬ್ಬರೂ ಮಾತನಾಡುತ್ತಲೇ ಇದ್ದೆವು, ಜೋರಾಗಿ ಓಡುತ್ತಿದ್ದೆವು. ಪಾಕಿಸ್ತಾನ ಆಟಗಾರರ ದೇಹಭಾಷೆಯನ್ನು ನೋಡುತ್ತಿದ್ದೆವು. ಆಟ ನಮ್ಮ ಕಡೆಗೆ ತಿರುಗುತ್ತದೆ ಎಂದು ನಮಗೆ ತಿಳಿದಿತ್ತು" ಎಂದು ಕೊಹ್ಲಿ ಹೇಳಿದ್ದಾರೆ.

ಟೀಕೆಗಳಿಗೆ ಉತ್ತರ ಕೊಟ್ಟ ವಿರಾಟ್ ಕೊಹ್ಲಿ
ಮೂರು ವರ್ಷಗಳಿಂದ ರನ್ ಗಳಿಸಲು ವಿರಾಟ್ ಕೊಹ್ಲಿ ಸಾಕಷ್ಟು ಕಷ್ಟ ಪಟ್ಟಿದ್ದರು. ಅವರ ಕ್ರಿಕೆಟ್ ವೃತ್ತಿಜೀವನವೇ ಅಂತ್ಯವಾಯಿತು, ಕೊಹ್ಲಿ ಕ್ರಿಕೆಟ್‌ಗೆ ವಿದಾಯ ಹೇಳಬೇಕು ಎಂದು ಹಲವರು ಟೀಕಿಸಿದ್ದರು. ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಬೇರೆ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಹಲವರು ಹೇಳಿದ್ದರು. ಆದರೆ, ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಕೊಹ್ಲಿ ತಮ್ಮ ಕಠಿಣ ಅಭ್ಯಾಸವನ್ನು ಮುಂದುವರೆಸಿದರು.
ಏಷ್ಯಾಕಪ್‌ನಲ್ಲಿ ತಮ್ಮ ಫಾರ್ಮ್‌ಗೆ ಮರಳಿದ ಅವರು, ಅಫ್ಘಾನಿಸ್ತಾನದ ವಿರುದ್ಧ ಶತಕ ಸಿಡಿಸುವ ಮೂಲಕ ಮಿಂಚಿದ್ದರು. ನಂತರ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಕೂಡ ಮಿಂಚಿದ್ದರು. ಈಗ ಪಾಕಿಸ್ತಾನದ ವಿರುದ್ಧ ತಮ್ಮ ಶ್ರೇಷ್ಠ ಇನ್ನಿಂಗ್ಸ್ ಆಡುವ ಮೂಲಕ ಎಲ್ಲಾ ಟೀಕೆಗಳಿಗೆ ಉತ್ತರ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications