SA Vs Zim: ವಿಚಿತ್ರ ಕಾರಣಕ್ಕೆ 5 ರನ್ ದಂಡ ತೆತ್ತ ದಕ್ಷಿಣ ಆಫ್ರಿಕಾ, ಮಾಡಿದ ತಪ್ಪಾದರೂ ಏನು?

ಸೋಮವಾರ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ದಕ್ಷಿಣ ಆಫ್ರಿಕಾ ನಿಜಕ್ಕೂ ನತದೃಷ್ಟ ತಂಡ ಎನ್ನುವುದು ಮತ್ತೆ ಸಾಬೀತಾಯಿತು. ಜಯದ ಸನಿಹಕ್ಕೆ ಬಂದಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಮಳೆ ಶತೃವಾಗಿ ಪರಿಣಮಿಸಿತು. ಪಂದ್ಯದಲ್ಲಿ ನಡೆದ ಇನ್ನೊಂದು ಘಟನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಮಾಡಿದ ತಪ್ಪಿಗಾಗಿ ಜಿಂಬಾಬ್ವೆ ತಂಡ ಹೆಚ್ಚುವರಿ 5 ರನ್ ಗಳನ್ನು ಪಡೆದುಕೊಂಡಿತು. ಮಳೆಯಿಂದಾಗಿ ಪಂದ್ಯವನ್ನು 9 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡಿತು. ಜಿಂಬಾಬ್ವೆ ಇನಿಂಗ್ಸ್‌ನ ಒಂಬತ್ತನೇ ಓವರ್‌ನ ಮೂರನೇ ಎಸೆತದಲ್ಲಿ ಈ ಘಟನೆ ನಡೆಯಿತು.
ದಕ್ಷಿಣ ಆಫ್ರಿಕಾದ ಅನ್ರಿಚ್ ನೋಕಿಯಾ ಜಿಂಬಾಬ್ವೆಯ ಮಿಲ್ಟನ್ ಶುಂಬಾಗೆ ಬ್ಯಾಕ್ ಆಫ್ ಎ ಲೆಂಗ್ತ್ ಎಸೆತವನ್ನು ಬೌಲ್ ಮಾಡಿದರು. ಬ್ಯಾಟರ್ ರಿವರ್ಸ್-ಸ್ಕೂಪ್ ಹೊಡೆಯಲು ಯತ್ನಿಸಿ ವಿಫಲರಾದರು. ಚೆಂಡು ಫೈನ್ ಲೆಗ್ ಫೀಲ್ಡರ್ ಲುಂಗಿ ಎನ್‌ಗಿಡಿ ಕಡೆಗೆ ಹೋಯಿತು, ಅವರು ಚೆಂಡನ್ನು ವಿಕೆಟ್‌ಕೀಪರ್ ಕ್ವಿಂಟನ್ ಡಿ ಕಾಕ್‌ಗೆ ಎಸೆದರು. ಬಾಲ್ ಹಿಡಿದು ಎಸೆಯುವ ಪ್ರಯತ್ನದಲ್ಲಿ ಕೀಪರ್ ತನ್ನ ಕೈಗವಸುಗಳಲ್ಲಿ ಒಂದನ್ನು ಗ್ರೌಂಡ್ ಮೇಲೆ ಎಸೆದರು, ಆದರೆ ಚೆಂಡು ಎಸೆದ ಕೈಗವಸುಗಳ ಮೇಲೆ ಬಿದ್ದಿತು, ಕ್ರಿಕೆಟ್ ನಿಯಮಗಳ ಪ್ರಕಾರ, ಜಿಂಬಾಬ್ವೆಗೆ ಐದು ಹೆಚ್ಚುವರಿ ರನ್‌ಗಳನ್ನು ನೀಡಲಾಯಿತು. ಆಟದ ಮೈದಾನದಲ್ಲಿ ಉದ್ದೇಶಪೂರ್ವಕವಾಗಿ ಇರಿಸಲಾದ ವಸ್ತುವನ್ನು ಚೆಂಡು ಹೊಡೆದಿದ್ದಕ್ಕಾಗಿ ಪೆನಾಲ್ಟಿ ಆಗಿತ್ತು.

ತಬ್ಬಿಬ್ಬಾದ ದಕ್ಷಿಣ ಆಫ್ರಿಕಾ ಆಟಗಾರರು
ಅಂಪೈರ್ 5 ಹೆಚ್ಚುವರಿ ರನ್ ನೀಡುತ್ತಿದ್ದಂತೆ ಕ್ವಿಂಟನ್ ಡಿ ಕಾಕ್, ಬೌಲರ್ ಅನ್ರಿಚ್ ನೋಕಿಯಾ ಸೇರಿದಂತೆ ದಕ್ಷಿಣ ಆಫ್ರಿಕಾದ ಆಟಗಾರರು ಒಂದು ಕ್ಷಣ ತಬ್ಬಿಬ್ಬಾದರು. ಆದರೂ, ಅಂಪೈರ್ ದಕ್ಷಿಣ ಆಫ್ರಿಕಾಕ್ಕೆ ಏಕೆ ದಂಡ ವಿಧಿಸಿದರು ಎಂಬುದರ ಕುರಿತು ಶೀಘ್ರದಲ್ಲೇ ಸ್ಪಷ್ಟವಾಯಿತು.
ಆಟದ ಮೈದಾನದಲ್ಲಿ ಬೌಲಿಂಗ್ ಮಾಡುವ ತಂಡ ಉದ್ದೇಶಪೂರ್ವಕವಾಗಿ ಯಾವುದೇ ವಸ್ತುವನ್ನು ನೆಲದ ಮೇಲಿರಿಸಿದರೆ, ಅದಕ್ಕೆ ಏನಾದರೂ ಬಾಲ್ ತಾಗಿದರೆ, ರನ್‌ಗಳನ್ನು ಪೆನಾಲ್ಟಿ ಎಂದು ನೀಡಲಾಗುತ್ತದೆ.
ಭವಿಷ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲು ಈತನೇ ಸೂಕ್ತ ಎಂದ ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ

ದಕ್ಷಿಣ ಆಫ್ರಿಕಾ ತಂಡಕ್ಕೆ ಕೈಕೊಟ್ಟ ಅದೃಷ್ಟ
ಮಳೆಯಿಂದಾಗಿ ಪಂದ್ಯವನ್ನು 9 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು. ಜಿಂಬಾಬ್ವೆ 5 ವಿಕೆಟ್‌ಗೆ 79 ರನ್ ಗಳಿಸಿತು, ವೆಸ್ಲಿ ಮಾಧೆವೆರೆ 18 ಎಸೆತಗಳಲ್ಲಿ ಔಟಾಗದೆ 35 ಮತ್ತು ಶುಂಬಾ 18 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಎನ್‌ಗಿಡಿ ಎರಡು ವಿಕೆಟ್ ಪಡೆದರು, ವೇಯ್ನ್ ಪಾರ್ನೆಲ್ ಮತ್ತು ನಾರ್ಟ್ಜೆ ತಲಾ ಒಂದು ವಿಕೆಟ್ ಪಡೆದರು.
ಪ್ರತ್ಯುತ್ತರವಾಗಿ, ಡಿ ಕಾಕ್ 18 ಎಸೆತಗಳಲ್ಲಿ 47 ರನ್ ಗಳಿಸಿ ಅಜೇಯರಾಗುಳಿದರು, ದಕ್ಷಿಣ ಆಫ್ರಿಕಾ ಮೊದಲ ಮೂರು ಓವರ್‌ಗಳಲ್ಲಿ 51 ರನ್ ಗಳಿಸಿತು, ಆದರೆ ನಂತರ ಮಳೆ ಸುರಿದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಸುಲಭವಾಗಿ ಗೆಲ್ಲುವ ಪಂದ್ಯ ರದ್ದಾಗಿದ್ದು ದಕ್ಷಿಣ ಆಫ್ರಿಕಾ ತಂಡಕ್ಕೆ ನಿರಾಸೆ ಮೂಡಿಸಿತು. ಇದು ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸುವ ಹಂತದಲ್ಲಿ ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಕ್ಟೋಬರ್ 27ರಂದು ಎರಡನೇ ಪಂದ್ಯ
ಜಿಂಬಾಬ್ವೆ ವಿರುದ್ಧ ಗೆಲ್ಲುವ ಪಂದ್ಯ ಮಳೆಯಿಂದ ರದ್ದಾದ ನಂತರ ದಕ್ಷಿಣ ಆಫ್ರಿಕಾ ತನ್ನ ಎರಡನೇ ಪಂದ್ಯವನ್ನು ಬಾಂಗ್ಲಾ ವಿರುದ್ಧ ಆಡಲಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಗುರುವಾರ ಬೆಳಿಗ್ಗೆ 8.30ರಿಂದ ಈ ಪಂದ್ಯ ಆರಂಭವಾಗಲಿದೆ.
ದಕ್ಷಿಣ ಆಫ್ರಿಕಾ ಸಂಭಾವ್ಯ ಆಡುವ ಬಳಗ: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನೋಕಿಯಾ, ಲುಂಗಿ ಎನ್‌ಗಿಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications