ನಮ್ಮ ಜೊತೆ ಕ್ರಿಕೆಟ್ ಆಡಿ ಅಂತ ನಾವು ಭಾರತವನ್ನು ಬೇಡಲ್ಲ: ಪಾಕ್

ಇಸ್ಲಮಾಬಾದ್, ಜೂನ್ 14: ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಡಲು ಇನ್ನೆರಡೇ ದಿನಗಳು (ಜೂನ್ 16ರಂದು ಪಂದ್ಯ) ಬಾಕಿ ಉಳಿದಿವೆ. ಈ ನಡುವೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಮುಖ್ಯಸ್ಥ ಎಹ್ಸಾನ್ ಮನಿ ಅವರು ದ್ವಿಪಕ್ಷೀಯ ಸರಣಿಯಲ್ಲಿ ನಮ್ಮೊಂದಿಗೆ ಪಾಲ್ಗೊಳ್ಳಿ ಎಂದು ನಾವು ಭಾರತವನ್ನು ಬೇಡಲ್ಲ ಎಂದಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
'ನಾವು ಭಾರತ ಅಥವಾ ಯಾವುದೇ ರಾಷ್ಟ್ರಗಳ ಜೊತೆ ನಮ್ಮೊಂದಿಗೆ ಕ್ರಿಕೆಟ್ ಆಡುವಂತೆ ಬೇಡಲಾರೆವು. ಆದರೆ ಭಾರತ-ಪಾಕ್ ದ್ವಿಪಕ್ಷೀಯ ಸರಣಿ ಯೋಗ್ಯ ಮತ್ತು ಘನತೆ ರೀತಿಯಲ್ಲಿ ನಡೆಯೋದನ್ನು ನಾವು ಬಯಸಿದ್ದೇವೆ' ಎಂದು ಎಹ್ಸಾನ್ ಮನಿ ಗುರುವಾರ (ಜೂನ್ 13) ಹೇಳಿದ್ದಾರೆ.
2013ರಿಂದಲೂ ಅಂದರೆ ಸುಮಾರು 6 ವರ್ಷಗಳಿಂದಲೂ ಪುರುಷರ ವಿಭಾಗದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಯಾವುದೇ ದ್ವಿಪಕ್ಷೀಯ ಸರಣಿಗಳಲ್ಲಿ ಪಾಲ್ಗೊಂಡಿಲ್ಲ. ಆದರೆ ಬಹುಪಕ್ಷೀಯ ಸರಣಿಗಳಲ್ಲಿ ಎರಡೂ ತಂಡಗಳು ಪಂದ್ಯಗಳನ್ನಾಡುತ್ತಿವೆಯಷ್ಟೆ.
ಬೇಡುವುದರ ಬದಲು ಎರಡೂ ದೇಶಗಳು ಸೌಹಾರ್ದ ನೆಲೆಯಲ್ಲಿ ಪಂದ್ಯಗಳನ್ನು ನಡೆಸಲು ಅವಕಾಶ ಮಾಡಿಕೊಡಬೇಕು ಎಂಬರ್ಥದಲ್ಲಿ ಮಾತನಾಡಿದ ಮನಿ, ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ನವೆಂಬರ್‌ನಲ್ಲಿ ಭಾರತದಲ್ಲಿ ಐಸಿಸಿ ಮಹಿಳಾ ಚಾಂಪಿಯನ್‌ಷಿಪ್ ಪಂದ್ಯಗಳನ್ನಾಡಲಿದೆ ಎಂದೂ ಖಾತರಿಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications