Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

World cup: ಎಲ್ಲರೂ ಕಾಯುತ್ತಿರುವ ಭಾರತ vs ಪಾಕ್ ಪಂದ್ಯಕ್ಕೆ ಮಳೆರಾಯನ ಅಡ್ಡಿ??

ವಿಶ್ವಕಪ್ ಟೂರ್ನಿಯ ಬಹುನಿರೀಕ್ಷಿತ ಪಂದ್ಯ ಎನಿಸಿಕೊಂಡಿರುವ ಭಾರತ vs ಪಾಕಿಸ್ತಾನ ತಂಡಗಳ ನಡುವಿನ ಸೆಣೆಸಾಟ ಶನಿವಾರ ನಡೆಯಲಿದ್ದು ಇತ್ತಂಡಗಳು ಭಾರೀ ಪೈಪೊಟಿಯ ಪ್ರದರ್ಶನ ನೀಡಲು ಸಜ್ಜಾಗಿದೆ. ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ನರೇಮದ್ರ ಮೋದಿ ಕ್ರೀಡಾಂಗಣ ಈ ಮೆಗಾ ಪಂದ್ಯಕ್ಕೆ ಸಕರ ರೀತಿಯಲ್ಲಿಯೂ ಸಜ್ಜಾಗಿದೆ.

ವಿಶ್ವದ ಅತ್ಯಂತ ದೊಡ್ಡ ಗಾತ್ರದ ಕ್ರೀಡಾಂಗಣ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1,30,000ದಷ್ಟು ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಕ್ರೀಡಾಂಗಣವಾಗಿದೆ. ಈ ಬೃಹತ್ ಕ್ರೀಡಾಂಗಣ ಈ ಪಂದ್ಯಕ್ಕೆ ಭರ್ತಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಅಲ್ಲದೆ ಈ ಸಾಂಪ್ರದಾಯಿಕ ತಂಡಗಳಿಬ್ಬರ ಮುಖಾಮುಖಿಗೂ ಮುನ್ನ ಸಂಗೀತ ಕಾರ್ಯಕ್ರವನ್ನು ಕೂಡ ಆಯೋಜಿಸಲು ಸಿದ್ಧತೆಗಳು ಆಗಿದೆ.

India vs Pakistan World cup match: Rain could play spoilsport in mega battle of the tournament

ಇಂಥಾ ಹೈವೋಲ್ಟೇಜ್ ಪಂದ್ಯವನ್ನು ನೇರವಾಗಿ ವೀಕ್ಷಿಸಲು ಮಾತ್ರವಲ್ಲದೆ ಮನೆಯಲ್ಲಿಯೇ ಟಿವಿಗಳಲ್ಲಿ ಕೋಟ್ಯಂತರ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ಈ ಪಂದ್ಯಕ್ಕೆ ಮಳೆಯ ಆತಂಕವೂ ಇದೆಯಾ ಎನ್ನುವುದು ಸಹಜವಾದ ಕುತೂಹಲ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಮುಂದೆ ಓದಿ..

ಸಾಧಾರಣ ಮಳೆಯ ಮುನ್ಸೂಚನೆ

ಅಕ್ಟೋಬರ್ 14ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಖ ನಡುವಿನ ಮಹು ನಿರೀಕ್ಷಿತ ಪಂದ್ಯಕ್ಕೆ ಸಣ್ಣ ಪ್ರಮಾಣದಲ್ಲಿ ಮಳೆ ಅಡ್ಡಿಯುಂಟು ಮಾಡಿದರೆ ಅಚ್ಚರಿಯಿಲ್ಲ ಎನ್ನುತ್ತಿವೆ ಹವಾಮಾನ ಇಲಾಖೆಯ ಮುನ್ಸೂಚನೆಗಳು. ಇಂಡಿಯಾ ಮೆಟರಲಾಜಿಕಲ್ ಡಿಪಾರ್ಟ್‌ಮೆಂಟ್ ವರದಿಯ ಪ್ರಕಾರ ಪಂದ್ಯದ ದಿನವಾದ ಶನಿವಾರ ಅಹ್ಮದಾಬಾದ್ ನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆಯಿದೆ.

ನ್ಯೂಸ್ ಏಜೆನ್ಸಿ ಪಿಟಿಐ ಅಹ್ಮದಾಬಾದ್ ಹವಾಮಾನದ ವಿಚಾರವಾಗಿ ಐಎಂಡಿ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. "ವಾತಾವರಣ ಮೋಡ ಕವಿದಿರಲಿದೆ. ಅಹ್ಮದಾಬಾದ್ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಮುಂದಿನ ದಿನ ಸಾಧಾರಣವಾಗಿ ಮಳೆಯಾಗುವ ಸಾಧ್ಯತೆಯಿದೆ ಎಂದು ಅಹ್ಮದಾಬಾದ್‌ನ ಹವಾಮಾನ ಇಲಾಖೆಯ ನಿರ್ದೇಶಕಿ ಮನೋರಮಾ ಮೊಹಂತಿ ಹೇಳಿಕೆ ಉಲ್ಲೇಖಿಸಿ ವರದಿ ಮಾಡಲಾಗಿದೆ.

ಐಪಿಎಲ್ ಫೈನಲ್ ಪಂದ್ಯಕ್ಕೂ ಕಾಡಿತ್ತು ಮಳೆ

ಇನ್ನು ಕಳೆದ ಐಪಿಎಲ್ ಫೈನಲ್ ಪಂದ್ಯಕ್ಕೂ ಇಲ್ಲಿ ಮಳೆ ಅಡ್ಡಿಯುಂಟು ಮಾಡಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಫೈನಲ್ಸ್‌ಗಾಗಿ ಈ ಮೈದಾನದಲ್ಲಿ ಮುಖಾಮುಖಿಯಾದಾಗಲೂ ನಿಗದಿತ ದಿನಾಂಕದಂದು ಮಳೆಯಾದ ಕಾರಣ ಪಂದ್ಯಕ್ಕೆ ಅವಕಾಶ ದೊರೆತಿರಲಿಲ್ಲ. ಮೀಸಲು ದಿನದಂದು ಈ ಫೈನಲ್ ಪಂದ್ಯ ನಡೆದಿದ್ದು ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಡೆದುಕೊಂಡಿದ್ದಾರೆ.

Story first published: Friday, October 13, 2023, 15:48 [IST]
Other articles published on Oct 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+