ಭಾರತ Vs ದಕ್ಷಿಣ ಆಫ್ರಿಕಾ ಮೊದಲ ಟಿ20: ಸಂಭಾವ್ಯ ತಂಡ
ಧರ್ಮಶಾಲಾ, ಸೆಪ್ಟೆಂಬರ್ 14: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೂರು ಟಿ20 ಮತ್ತು ಮೂರು ಟೆಸ್ಟ್ ಪಂದ್ಯಗಳ ಪೈಪೋಟಿಗೆ ಭಾನುವಾರ (ಸೆ. 15) ಚಾಲನೆ ದೊರಕಲಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಮೊದಲ ಟಿ20 ಪಂದ್ಯ ಆರಂಭವಾಗಲಿದೆ. 2019ರ ಐಸಿಸಿ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ ಬಳಿಕ ಭಾರತ ಮೊದಲ ಬಾರಿಗೆ ತವರಿನಲ್ಲಿ ಪಂದ್ಯ ಆಡುತ್ತಿದೆ.
ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಭಾರತ ತಂಡ, ಅಲ್ಲಿ ಟಿ20, ಏಕದಿನ ಮತ್ತು ಟೆಸ್ಟ್ ಮೂರೂ ಸರಣಿಗಳನ್ನು ವಶಪಡಿಸಿಕೊಂಡು ಬೀಗಿತ್ತು. ಅಷ್ಟೇನೂ ಪ್ರಬಲವಲ್ಲದ ವೆಸ್ಟ್ ಇಂಡೀಸ್ ತಂಡವನ್ನು ಅದರ ನೆಲದಲ್ಲಿಯೇ ಮಣಿಸಿರುವ ಭಾರತ, ಅದೇ ಹುಮ್ಮಸ್ಸಿನೊಂದಿಗೆ ಹರಿಣಗಳನ್ನು ಎದುರಿಸುತ್ತಿದೆ.
ಐಸಿಸಿ ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ ನೀಡಿರುವ ದಕ್ಷಿಣ ಆಫ್ರಿಕಾ ಕೂಡ ಹಳೆಯ ಬಲಿಷ್ಠ ತಂಡವಾಗಿ ಉಳಿದಿಲ್ಲ. ಹೀಗಾಗಿ ತಂಡವನ್ನು ಪುಟಿದೇಳುವಂತೆ ಮಾಡಲು ಅವರಿಗೆ ಇದು ಮಹತ್ವದ ಪ್ರವಾಸವಾಗಿದೆ. ಭಾರತದ ನೆಲದಲ್ಲಿ ಮುಖ್ಯವಾಗಿ ಸ್ಪಿನ್ನರ್‌ಗಳನ್ನು ಎದುರಿಸುವುದು ದಕ್ಷಿಣ ಆಫ್ರಿಕಾಕ್ಕೆ ಸುಲಭವಲ್ಲ. ವಿಕೆಟ್ ಕೀಪರ್ ಕ್ವಿಂಟ್ ಡಿ ಕಾಕ್ ನೇತೃತ್ವದ ತಂಡದಲ್ಲಿ ಡೇವಿಡ್ ಮಿಲ್ಲರ್ ಮತ್ತು ಕಗಿಸೋ ರಬಾಡ ಹೊರತುಪಡಿಸಿ ಬಹುತೇಕ ಹೊಸ ಆಟಗಾರರೇ ಇದ್ದಾರೆ.

ಬೌಲಿಂಗ್‌ನಲ್ಲಿ ಹೊಸ ಪಡೆ
ಭಾರತದ ಬೌಲಿಂಗ್ ಮತ್ತು ಬ್ಯಾಟಿಂಗ್ ಸಮತೂಕದಿಂದ ಕೂಡಿದ್ದರೂ, ಬೌಲಿಂಗ್ ವಿಭಾಗದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಆಡುವ ಸಾಧ್ಯತೆ ಇದೆ. ನಾಲ್ಕನೆಯ ಕ್ರಮಾಂಕದಲ್ಲಿ ನಾಯಕ ಕೊಹ್ಲಿ ಬ್ಯಾಟ್ ಬೀಸಲಿದ್ದಾರೆ. ವೆಸ್ಟ್ ಇಂಡೀಸ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಮನೀಶ್ ಪಾಂಡೆ ಬದಲು ಶ್ರೇಯಸ್ ಅಯ್ಯರ್‌ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು. ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತು ಆಲ್‌ರೌಂಡರ್ ಹಾರ್ದಿಇಕ್ ಪಾಂಡ್ಯ ನಂತರದ ಸ್ಥಾನಗಳಲ್ಲಿದ್ದಾರೆ. ಇನ್ನು ಸ್ಪಿನ್ ವಿಭಾಗದಲ್ಲಿ ಭಾರಿ ಪೈಪೋಟಿ ಇದೆ. ಅನುಭವಿ ರವೀಂದ್ರ ಜಡೇಜಾ ಜತೆ ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್ ಮತ್ತು ರಾಹುಲ್ ಚಾಹರ್ ಇದ್ದಾರೆ. ವೇಗದ ಬೌಲಿಂಗ್ ಹೊಣೆ ನವದೀಪ್ ಸೈನಿ, ಖಲೀಲ್ ಅಹ್ಮದ್ ಮತ್ತು ದೀಪಕ್ ಚಾಹರ್ ಅವರ ಮೇಲಿದೆ.
ಶಿಖರ್ ಧವನ್ ಪ್ರಶ್ನೆಗೆ ಹಲ್ಲು ಕಿಸಿದ ವಿರಾಟ್ ಕೊಹ್ಲಿ: ಗಮ್ಮತ್ತಿನ ವಿಡಿಯೋ!

ಭಾರತದ ಸಂಭಾವ್ಯ ತಂಡ
ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್/ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ/ಕೃಣಾಲ್ ಪಾಂಡ್ಯ, ಖಲೀಲ್ ಅಹ್ಮದ್, ದೀಪಕ್ ಚಾಹರ್, ನವದೀಪ್ ಸೈನಿ
ಕೊಹ್ಲಿ ಪ್ರಾರಂಭಿಸಿದ ರೂಮರ್‌ಗೆ ಸಾಕ್ಷಿ ಸಿಂಗ್ ಧೋನಿ ಹಾಡಿದರು ಅಂತ್ಯ

ದಕ್ಷಿಣ ಆಫ್ರಿಕಾ ಸಂಭಾವ್ಯ ತಂಡ
ಕ್ವಿಂಟನ್ ಡಿಕಾಕ್ (ನಾಯಕ), ರಾಸಿ ವಾನ್ ಡರ್ ಡುಸೆನ್, ಗಾರ್ಜ್ ಲಿಂಡೆ, ಬೊರ್ನ್ ಫೋರ್ಟುನ್, ರೀಜಾ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಆನ್ರಿಚ್ ನೊರ್ಟ್ಜೆ/ಬೀರನ್ ಹೆಂಡ್ರಿಕ್ಸ್, ಆಂಡಿಲೆ ಪೆಹ್ಲುಕ್ವಾಯೋ, ಕಗೀಸೋ ರಬಾಡ, ಜೂನಿಯರ್ ದಾಲಾ, ತಬ್ರಿಯಾಜ್ ಶಮ್ಸಿ.

ಟಿ20ಯಲ್ಲಿ ಮುಖಾಮುಖಿ
vಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟಿ20ಯಲ್ಲಿ ಪರಸ್ಪರ ಇದುವರೆಗೂ 13 ಪಂದ್ಯಗಳನ್ನು ಆಡಿವೆ. ಇವುಗಳಲ್ಲಿ ಭಾರತ 8 ಪಂದ್ಯಗಳಲ್ಲಿ ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ ಉಳಿದ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತದ ಗೆಲುವಿನ ಸರಾಸರಿ ಶೇ 61.53ರಷ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications