For Quick Alerts
ALLOW NOTIFICATIONS  
For Daily Alerts
 

ಫೇಸ್ಬುಕ್‌ನಲ್ಲೇ ಭಾರತ vs ಶ್ರೀಲಂಕಾ ಸರಣಿ ವೀಕ್ಷಿಸೋದು ಹೇಗೆ?

India vs Sri Lanka Series on Facebook; Here is how to watch

ನವದೆಹಲಿ: ಸೀಮಿತ ಓವರ್‌ಗಳ ಸರಣಿಗಾಗಿ (ಏಕದಿನ, ಟಿ20ಐ) ಭಾರತೀಯ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸದಲ್ಲಿದೆ. ಜುಲೈ 18ರಿಂದ ಈ ಸರಣಿ ಶುರುವಾಗಲಿದೆ. ಅಸಲಿಗೆ ಈ ಸರಣಿ ಜುಲೈ 13ರಂದು ಆರಂಭಗೊಳ್ಳುವುದರಲ್ಲಿತ್ತು. ಆದರೆ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ಶ್ರೀಲಂಕಾ ತಂಡದಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಸರಣಿ ಆರಂಭ ಕೊಂಚ ಮುಂದೂಡಲ್ಪಟ್ಟಿತ್ತು.

ಭಾರತ-ಶ್ರೀಲಂಕಾ ಸರಣಿಗಳ ಪಂದ್ಯಗಳು ಸೋನಿ ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದೆ. ಆದರೆ ಸೋನಿ ಚಾನೆಲ್‌ ಫೇಸ್ಬುಕ್ ಜೊತೆಗೆ ಒಂದು ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಭಾರತ-ಶ್ರೀಲಂಕಾ ಪಂದ್ಯಗಳನ್ನು ನೀವು ಫೇಸ್ಬುಕ್‌ನಲ್ಲೂ ನೋಡಬಹುದಾಗಿದೆ.

ಭಾರತ-ಶ್ರೀಲಂಕಾ ಪ್ರವಾಸ ಸರಣಿಗೆ ಸಂಬಂಧಿಸಿ ಭಾರತ ಫೇಸ್ಬುಕ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆದ್ದರಿಂದ ಭಾರತ-ಶ್ರೀಲಂಕಾ ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳ ಹೈಲೈಟ್ಸ್‌, ವಿಡಿಯೋಗಳು ಫೇಸ್ಬುಕ್‌ನಲ್ಲಿ ಸಿಗಲಿವೆ. ಈ ಒಪ್ಪಂದದ ಮೂಲಕ ಸೋಷಿಯಲ್ ವೀಡಿಯೊಗಳಲ್ಲಿ ತನ್ನ ಪಾಲನ್ನು ಎಫ್‌ಬಿ ಇನ್ನಷ್ಟು ಹೆಚ್ಚಿಸಲಿದೆ ಎಂದು ಫೇಸ್‌ಬುಕ್ ಬಹಿರಂಗಪಡಿಸಿದೆ.

ಅಂದರೆ, ನೀವು ಫೇಸ್ಬುಕ್ ಬಳಕೆದಾರರಾಗಿದ್ದರೆ ಸಾಕು; ಪಂದ್ಯದ ವೀಡಿಯೋಗಳೂ, ಅಪ್‌ಡೇಟ್ಸ್‌ ಸಿಗಲಿದೆ. ಶ್ರೀಲಂಕಾದಲ್ಲಿರುವ ಭಾರತೀಯ ತಂಡಕ್ಕೆ ಶಿಖರ್ ಧವನ್ ನಾಯಕ, ಭುವನೇಶ್ವರ್ ಕುಮಾರ್ ಉಪನಾಯಕರಾಗಿದ್ದು, ಜುಲೈ 18ಕ್ಕೆ ಭಾರತೀಯ ಕಾಲಮಾನ 3 PMನಂತೆ ಕೊಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿ ಮೊದಲ ಏಕದಿನ ಪಂದ್ಯ ಆರಂಭಗೊಳ್ಳಲಿದೆ.

Story first published: Saturday, July 17, 2021, 21:05 [IST]
Other articles published on Jul 17, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+