Ind vs WI: ಮೊದಲ ಟಿ20 ಪಂದ್ಯಕ್ಕೆ ಸಜ್ಜಾದ ತಂಡಗಳು: ಪಂದ್ಯದ ಮಾಹಿತಿ, ಸಂಭಾವ್ಯ XI, ಪಿಚ್ ರಿಪೋರ್ಟ್
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸುವ ಮೂಲಕ ಸರಣಿ ಭಾರತದ ವಶವಾಗಿದೆ. ಏಕದಿನ ಸರಣಿಕಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದುಕೊಂಡಿದ್ದು ಇದೀಗ ಟಿ20 ಸರಣಿಯಲ್ಲಿ ಸೆಣೆಸಾಡಲು ಈ ಎರಡು ತಂಡಗಳು ಸಜ್ಜಾಗಿದೆ. ಟೀಮ್ ಇಂಡಿಯಾ ಹಾಗೂ ವಿಂಡೀಸ್ ತಂಡಗಳು ಟಿ20 ಸರಣಿಯಲ್ಲಿ ಮುಖಿಮುಖಿಯಾಗಲಿದ್ದು ಐದು ಪಂದ್ಯಗಳ ಈ ಸರಣಿ ಗುರುವಾರದಿಂದಲೇ ಆರಂಭವಾಗಲಿದೆ.
ಏಕದಿನ ಸರಣಿಯ ಅಂತಿಮ ಪಂದ್ಯ ನಡೆದ ಟರೌಬಾದ ಬ್ರಿಯನ್ ಲಾರಾ ಸ್ಟೇಡಿಯಂನಲ್ಲಿಯೇ ಟಿ20 ಸರಣಿಯ ಮೊದಲ ಪಂದ್ಯ ಆಯೋಜನೆಯಾಗಲಿದೆ. ಇಲ್ಲಿ ಭಾರತೀಯ ದಾಂಡಿಗರು ಉತ್ತಮ ಪ್ರದರ್ಶನ ನಿಡಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು ಇದು ಟಿ20 ಸರಣಿಯಲ್ಲಿಯೂ ಮುಂದುವರಿಯುವ ವಿಶ್ವಾಸದಲ್ಲಿದೆ.

ಪಂದ್ಯದ ಮಾಹಿತಿ
ಭಾರತ ಹಾಗೂ ವೆಸ್ಟ್ ಇಂಡಿಸ್ ತಂಡಗಳ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಆಗಸ್ಟ್ 3 ಗುರುವಾರದಂದು ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಈ ಪಂದ್ಯ ಆರಂಬವಾಗಲಿದ್ದು 7:30ಕ್ಕೆ ಟಾಸ್ ನಡೆಯಲಿದೆ. ಟ್ರಿನಿಡಾಡ್‌ನ ಟರೌಬಾದಲ್ಲಿರುವ ಬ್ರಿಯಾನ್ ಲಾರಾ ಸ್ಟೇಡಿಯಂ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
ಪಿಚ್ ರಿಪೋರ್ಟ್
ಬ್ರಿಯಾನ್ ಲಾರಾ ಸ್ಟೇಡಿಯಂನ ಪಿಚ್ ಸಾಕಷ್ಟು ಸ್ಪರ್ಧಾತ್ಮಕವಾದ ಪಿಚ್ ಆಗಿರಲಿದ್ದು ಬ್ಯಾಟರ್‌ಗಳು, ವೇಗಿಗಳು ಹಾಗೂ ಸ್ಪಿನ್ನರ್‌ಗಳು ಮೂವರಿಗೂ ಇದು ಉತ್ತಮವಾದ ಅವಕಾಶ ನೀಡಲಿದೆ. ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಇದೇ ಪಿಚ್‌ನಲ್ಲಿ 350 ರನ್‌ಗಳನ್ನು ಗಳಿಸಿತ್ತು. ಹಾಗಾಗಿ ಗುರುವಾರ ನಡೆಯಲಿರುವ ಪಂದ್ಯ ಕೂಡ ಹೈಸ್ಕೋರಿಂಗ್ ಪಂದ್ಯವಾಗಿರುವ ನಿರೀಕ್ಷೆಯಿದೆ.
ಇತ್ತಂಡಗಳ ಆಡುವ ಬಳಗ
ವೆಸ್ಟ್ ಇಂಡೀಸ್: ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಶಾಯ್ ಹೋಪ್, ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್, ಅಕೇಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್
ಭಾರತ: ಶುಬ್ಮನ್ ಗಿಲ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications