
ಪೋರ್ಟ್ ಆಫ್ ಸ್ಪೇನ್, ಆಗಸ್ಟ್ 14: ಭಾರತ ತಂಡದಲ್ಲಿ 50 ಓವರ್‌ಗಳ ಕ್ರಿಕೆಟ್ ಮಾದರಿಯಲ್ಲಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಮತ್ತು ಎಡಗೈ ರಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ ಬೌಲಿಂಗ್ ಬಲವಾಗಿರುವವರು. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಏಕದಿನ ತಂಡದಲ್ಲಿ ಆಡುತ್ತಿರುವ ಕುಲದೀಪ್‌ಗೆ ಅಪರೂಪದ ದಾಖಲೆ ನಿರ್ಮಿಸುವ ಅವಕಾಶವಿದೆ.
ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಬುಧವಾರ (ಆಗಸ್ಟ್ 14) ನಡೆಯಲಿರುವ ಭಾರತ vs ವೆಸ್ಟ್ ಇಂಡೀಸ್ 3ನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಚೈನಾಮನ್ ಕುಲದೀಪ್ ಏನಾದರೂ 4 ವಿಕೆಟ್‌ಗಳನ್ನು ಪಡೆದರೆ, ಏಕದಿನದಲ್ಲಿ 100 ವಿಕೆಟ್‌ಗಳ ಹಿರಿಮೆ ಅವರದ್ದಾಗಲಿದೆ.
ಸದ್ಯ ಕುಲದೀಪ್ ಒಟ್ಟು 53 ಏಕದಿನ ಪಂದ್ಯಗಳಲ್ಲಿ 96 ವಿಕೆಟ್ ಸಾಧನೆ ಹೊಂದಿದ್ದಾರೆ. ಬುಧವಾರದ ಪಂದ್ಯದಲ್ಲಿ 4 ವಿಕೆಟ್‌ಗಳು ಲಭಿಸಿದರೆ, ಏಕದಿನದಲ್ಲಿ ಅತಿ ವೇಗದಲ್ಲಿ 100 ವಿಕೆಟ್ ಪಡೆದ ಭಾರತದ ಬೌಲರ್ ದಾಖಲೆಗೆ ಯಾದವ್ ಕಾರಣರಾಗಲಿದ್ದಾರೆ.
2019ರ ವಿಶ್ವಕಪ್ ವೇಳೆ ಕುಲದೀಪ್ ಯಾದವ್ ಈ ಮೈಲಿಗಲ್ಲು ಸ್ಥಾಪಿಸುವ ಅವಕಾಶವಿತ್ತು. ಆ ಟೂರ್ನಿಯಲ್ಲಿ ಕುಲದೀಪ್ 7 ಪಂದ್ಯಗಳಲ್ಲಿ ಕೇವಲ 6 ವಿಕೆಟ್ ಪಡೆದು ದಾಖಲೆಯ ಅವಕಾಶ ಕಳೆದುಕೊಂಡಿದ್ದರು. ಈಗಲೂ ಕುಲದೀಪ್‌ಗೆ ಮೊಹಮ್ಮದ್ ಶಮಿ ಅವರನ್ನು ಮೀರಿಸುವ ಅವಕಾಶವಿದೆ.
ಶಮಿ ಒಟ್ಟು 56 ಪಂದ್ಯಗಳಲ್ಲಿ 100 ವಿಕೆಟ್‌ಗಳ ಮೂಲಕ ಏಕದಿನದಲ್ಲಿ ವೇಗದಲ್ಲಿ 100 ವಿಕೆಟ್ ಪಡೆದ ಭಾರತದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೆರಡು ಪಂದ್ಯಗಳಲ್ಲಿ ಕುಲದೀಪ್ 4 ವಿಕೆಟ್ ಪಡೆದರೂ ಶಮಿ ಸಾಧನೆಯನ್ನು ಹಿಂದಿಕ್ಕಬಲ್ಲರು. ಇತ್ತಂಡಗಳು 3ನೇ ಏಕದಿನ ಪಂದ್ಯ 7 pmಗೆ ಆರಂಭವಾಗಲಿದೆ.