ಭಾರತ - ವೆಸ್ಟ್ ಇಂಡೀಸ್: 3ನೇ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ XI ಹೀಗಿದೆ

ಬೆಂಗಳೂರು, ಅಕ್ಟೋಬರ್ 26: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನಕ್ಕೆ ಟೀಂ ಇಂಡಿಯಾದ ಸಂಭಾವ್ಯ ಆಡುವ ಹನ್ನೊಂದು ಮಂದಿಗಳ ಪಟ್ಟಿ ಇಲ್ಲಿದೆ. ಮೊದಲ ಏಕದಿನ ಪಂದ್ಯವನ್ನು ಭಾರತ ಗೆದ್ದರೆ, ಎರಡನೇ ಏಕದಿನ ಪಂದ್ಯ ರೋಚಕ ಟೈ ನಲ್ಲಿ ಅಂತ್ಯ ಕಂಡಿತ್ತು. ಹೀಗಾಗಿ, ಮೂರನೆ ಪಂದ್ಯ ಕುತೂಹಲ ಕೆರಳಿಸಿದೆ.
ಮೂರನೇ ಪಂದ್ಯಕ್ಕೆ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ನಿರೀಕ್ಷಿತವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ಭಾರತದ ಸದ್ಯಕ್ಕೆ 1-0ರಲ್ಲಿ ಮುನ್ನಡೆ ಪಡೆದುಕೊಂಡಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಉಳಿದ ಮೂರು ಪಂದ್ಯಗಳಿಗೆ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದ್ದು, ಪ್ರಮುಖ ವೇಗಿಗಳಾದ ಜಸ್ ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ತಂಡಕ್ಕೆ ಮರಳಿದ್ದಾರೆ. ಮೊಹಮ್ಮದ್ ಶಮಿ ಅವರು ಅವಕಾಶ ವಂಚಿತರಾಗಿದ್ದಾರೆ. ಹೀಗಾಗಿ, ಪ್ರಮುಖ ವೇಗಿಗಳನ್ನು ಕಣಕ್ಕಿಳಿಸಿ, ಬೌಲಿಂಗ್ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು ಕೊಹ್ಲಿ ಮುಂದಿರುವ ಆಯ್ಕೆಯಾಗಿದೆ.
ಪುಣೆ ಒಡಿಐನಲ್ಲಿ ಆಡಲಿರುವ ಭಾರತದ ಸಂಭಾವ್ಯ XI
ಆರಂಭಿಕರು
ರೋಹಿತ್ ಶರ್ಮ ಹಾಗೂ ಶಿಖರ್ ಧವನ್
ಮಧ್ಯಮ ಕ್ರಮಾಂಕ
ವಿರಾಟ್ ಕೊಹ್ಲಿ, ಅಂಬಟಿ ರಾಯುಡು, ರಿಷಬ್ ಪಂತ್
ವಿಕೆಟ್ ಕೀಪರ್
ಎಂಎಸ್ ಧೋನಿ
ಆಲ್ ರೌಂಡರ್
ರವೀಂದ್ರ ಜಡೇಜ
ಬೌಲರ್ಸ್
ಭುವನೇಶ್ವರ್ ಕುಮಾರ್, ಯಜುವೇಂದ್ರ ಚಾಹಲ್, ಜಸ್ ಪ್ರೀತ್ ಬೂಮ್ರಾ, ಕುಲದೀಪ್ ಯಾದವ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications