ಭಾರತ vs ವೆಸ್ಟ್ ಇಂಡೀಸ್: 3ನೇ ಏಕದಿನ ಪಂದ್ಯ ಸ್ಥಗಿತ; ಧವನ್, ಗಿಲ್ ಅರ್ಧಶತಕ

ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, 24 ಓವರ್ ಮುಕ್ತಾಯದ ವೇಳೆ ವರುಣನ ಸಿಂಚನದಿಂದ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಮಳೆ ಅಡ್ಡಿಪಡಿಸುವ ಮೊದಲು ಭಾರತ 24 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತ್ತು. ನಾಯಕ ಶಿಖರ್ ಧವನ್ ಮತ್ತು ಶುಭ್‌ಮನ್ ಗಿಲ್ ವೈಯಕ್ತಿಕವಾಗಿ ಅರ್ಧಶತಕಗಳನ್ನು ಬಾರಿಸಿ ಭಾರತವನ್ನು 100 ರನ್ ಗಡಿ ದಾಟಿಸಿದರು. ಅಲ್ಲದೇ ಮೊದಲ ವಿಕೆಟ್‌ಗೆ 113 ರನ್‌ಗಳ ಜೊತೆಯಾಟ ನೀಡಿದರು.

ಧವನ್-ಗಿಲ್ ಜೊತೆಯಾಟವನ್ನು ಕೊನೆಗೊಳಿಸಿದ ಹೇಡನ್ ವಾಲ್ಷ್
ಆದಾಗ್ಯೂ, ಹೇಡನ್ ವಾಲ್ಷ್ ಜೂನಿಯರ್ ಧವನ್-ಗಿಲ್ ಜೊತೆಯಾಟವನ್ನು ಕೊನೆಗೊಳಿಸಿದರು. ಶಿಖರ್ ಧವನ್ ಅವರು 58 ರನ್ ಗಳಿಸಿದ್ದಾಗ ಔಟ್ ಮಾಡಿದರು. ಇದಕ್ಕೂ ಮೊದಲು ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿ ಅವೇಶ್ ಖಾನ್ ಬದಲಿಗೆ ಪ್ರಸಿದ್ಧ್ ಕೃಷ್ಣ ವಾಪಸ್ ಬಂದಿದ್ದು, ಪ್ರವಾಸಿ ತಂಡ ಇದೊಂದು ಬದಲಾವಣೆ ಮಾಡಿದೆ.
ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 2-0 ಅಂತರದಲ್ಲಿ ಅಜೇಯ ಜಯ ಸಾಧಿಸಿರುವ ಭಾರತ, ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು ಎದುರಿಸುತ್ತಿದೆ.

ವೆಸ್ಟ್ ಇಂಡೀಸ್ ವಿರುದ್ಧ ಮತ್ತೊಂದು ಕ್ಲೀನ್ ಸ್ವೀಪ್ ಗುರಿ
ಬುಧವಾರ ವೆಸ್ಟ್ ಇಂಡೀಸ್ ವಿರುದ್ಧ ಮತ್ತೊಂದು ಕ್ಲೀನ್ ಸ್ವೀಪ್ ಮೂಲಕ ವಿಶ್ವದಾಖಲೆ-ಗೆಲುವಿನ ಸಾಧನೆಯನ್ನು ಅಗ್ರಸ್ಥಾನಕ್ಕೇರಿಸುವ ಗುರಿಯನ್ನು ಹೊಂದಿದ್ದು, ಭಾರತೀಯ ತಂಡವು ಗೆಲುವಿನ ಲಯವನ್ನು ಮುಂದುವರೆಸುವ ಸಾಧ್ಯತೆ ಇದೆ.
ಇತ್ತಂಡಗಳ ನಡುವೆ ನಡೆಯುವ ಮೂರನೇ ಏಕದಿನ ಪಂದ್ಯವು ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತ ತಂಡದ ನಾಯಕ ಶಿಖರ್ ಧವನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ನಿಕೋಲಸ್ ಪೂರನ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡ ಮೊದಲು ಬೌಲಿಂಗ್ ಮಾಡುತ್ತಿದೆ.

ಏಕದಿನ ಮಾದರಿಯಲ್ಲಿ ಸತತ 12ನೇ ಸರಣಿ ಜಯ
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮಾದರಿಯಲ್ಲಿ ಸತತ 12ನೇ ಸರಣಿ ಜಯವನ್ನು ದಾಖಲಿಸುವ ಮೂಲಕ ಭಾರತ ಭಾನುವಾರದಂದು ವಿಶ್ವದಾಖಲೆಯನ್ನು ನಿರ್ಮಿಸಿದೆ. ತಂಡವೊಂದರ ವಿರುದ್ಧ ಅತಿ ಹೆಚ್ಚು ಜಯ ಗಳಿಸಿದ ಕೀರ್ತಿ ಭಾರತದ್ದಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಕೆಲವು ಮೀಸಲು ಆಟಗಾರರನ್ನು ಕಣಕ್ಕಿಳಿಸಲು ಬಯಸಲಿಲ್ಲ. ಭಾರತ ತಂಡದ ಬೆಂಚ್ ಬಲವನ್ನು ಪರೀಕ್ಷಿಸುವ ನಡುವೆ ಉತ್ತಮ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ.
ಅದೇ ರೀತಿ ವೆಸ್ಟ್ ಇಂಡೀಸ್‌ನ ನಾಯಕ ನಿಕೋಲಸ್ ಪೂರನ್ ಟಾಸ್ ವೇಳೆ ಮಾತನಾಡಿ, ಸತತ ಎರಡು ಸೋಲುಗಳ ಹೊರತಾಗಿಯೂ ಈ ಪಂದ್ಯದಲ್ಲಿ ಗೆಲುವನ್ನು ಪಡೆಯಲು ಸಾಕಷ್ಟು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ತಂಡದಲ್ಲಿ ಅವರು ಮೂರು ಬದಲಾವಣೆಗಳನ್ನು ಮಾಡಿದ್ದಾರೆ ಎಂದು ತಿಳಿಸಿದ್ದು, ಜೇಸನ್ ಹೋಲ್ಡರ್, ಕೀಮೊ ಪಾಲ್ ಮತ್ತು ಕೀಸಿ ಕಾರ್ಟಿ ಆಡಲಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ ಆಡುವ 11ರ ಬಳಗ
ಭಾರತ ಆಡುವ 11ರ ಬಳಗ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ.
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11ರ ಬಳಗ: ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಕೀಸ್ ಕಾರ್ಟಿ, ನಿಕೋಲಸ್ ಪೂರನ್ (ನಾಯಕ), ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ಕೀಮೋ ಪಾಲ್, ಜೇಸನ್ ಹೋಲ್ಡರ್, ಅಕೇಲ್ ಹೋಸೇನ್, ಹೇಡನ್ ವಾಲ್ಷ್, ಜೇಡನ್ ಸೀಲ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications