Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಡೀಸ್‌ ವಿರುದ್ಧದ ಅಭ್ಯಾಸ ಪಂದ್ಯ, ಚೇತೇಶ್ವರ್‌ ಪೂಜಾರ ಶತಕ ವೈಭವ

Cheteswhar Pujara 2019

ಹೊಸದಿಲ್ಲಿ, ಆಗಸ್ಟ್‌ 18: ಟಿ20 ಮತ್ತು ಏಕದಿನ ಕ್ರಿಕೆಟ್‌ ಸರಣಿ ಗೆದ್ದು ವಿಂಡೀಸ್‌ ಪ್ರವಾಸದಲ್ಲಿ ಯಶಸ್ಸಿನ ಅಲೆಯಲ್ಲಿರುವ ಭಾರತ ತಂಡ, ಇದೀಗ ಕೆರಿಬಿಯನ್ನರ ಎದುರು ಟೆಸ್ಟ್‌ ಸರಣಿ ಗೆದ್ದು ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲೂ ಭರ್ಜರಿ ಆರಂಭ ಕಾಣುವ ಲೆಕ್ಕಾಚಾರದಲ್ಲಿದೆ.

ಅಂತೆಯೇ ಆಂಟಿಗುವಾದಲ್ಲಿನ ಕೂಲಿಡ್ಜ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿರುವ ವೆಸ್ಟ್‌ ಇಂಡೀಸ್‌ 'ಎ' ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತೀಯರ ತಂಡ ಭರ್ಜರಿ ಬ್ಯಾಟಿಂಗ್‌ ನಡೆಸಿದ್ದು, ಮೊದಲ ದಿನವಾದ ಶನಿವಾರ 5 ವಿಕೆಟ್‌ ನಷ್ಟದಲ್ಲಿ297 ರನ್‌ಗಳನ್ನು ದಾಖಲಿಸಿದೆ. ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ (100) ಶತಕ ಪೂರೈಸಿ ತಂಡಕ್ಕೆ ಉತ್ತಮ ಮೊತ್ತ ತಂದುಕೊಟ್ಟರು.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತಕ್ಕೆ ಐತಿಹಾಸಿಕ ಟೆಸ್ಟ್‌ ಸರಣಿ ಗೆದ್ದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪೂಜಾರ, ಇದೀಗ ಕೆರಿಬಿಯನ್ನರ ನಾಡಲ್ಲೂ ಟೆಸ್ಟ್‌ ಸರಣಿ ಗೆದ್ದುಕೊಡಲು ಎದುರು ನೋಡುತ್ತಿದ್ದಾರೆ. ತಾಳ್ಮೆಯ ಮೂರ್ತಿಯಂತೆ ಕ್ರೀಸ್‌ನಲ್ಲಿ ನಿಂತು ರನ್‌ ಕಲೆಹಾಕಿದ ಬಲಗೈ ಬ್ಯಾಟ್ಸ್‌ಮನ್‌, 187 ಎಸೆತಗಳಲ್ಲಿ 8 ಫೋರ್‌ ಮತ್ತು 1 ಸಿಕ್ಸರ್‌ ಸಹಿತ 100 ರನ್ ಗಳಿಸಿ ನಿವೃತ್ತಿ ಹೊಂದಿದರು.

ಮಧ್ಯಮ ಕ್ರಮಾಂಕದಲ್ಲಿ ರೋಹಿತ್‌ ಕೂಡ ಲಯ ಕಂಡುಕೊಳ್ಳುವ ಮೂಲಕ 115 ಎಸೆತಗಳಲ್ಲಿ 68 ರನ್‌ಗಳ ಕಾಣಿಕೆ ನೀಡಿದರು. ಆದರೆ, ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್‌ ರಾಹುಲ್‌ (36) ಮತ್ತು ಮಯಾಂಕ್‌ ಅಗರ್ವಾಲ್‌ (12) ಸಿಕ್ಕ ಆರಂಭವನ್ನು ಪರಿವರ್ತಿಸುವಲ್ಲಿ ವಿಫಲರಾದರು. ನಾಯಕ ಅಜಿಂಕ್ಯ ರಹಾನೆ ಕೇವಲ 1 ರನ್‌ಗಳಿಸಿ ಔಟಾದರೆ, ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ (33) ದೊಡ್ಡ ಮೊತ್ತ ಗಳಿಸುವ ಅವಕಾಶ ಕೈಚೆಲ್ಲಿದರು. ವೆಸ್ಟ್‌ ಇಂಡೀಸ್‌ ಪರ ಜೊನಾಥನ್‌ ಕಾರ್ಟರ್‌ 39ಕ್ಕೆ 3 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು.

ಭಾರತ ಮತ್ತು ವೆಸ್ಟ್ ಇಂಡೀಸ್‌ ನಡುವಣ ಮೊದಲ ಟೆಸ್ಟ್‌ ಪಂದ್ಯ ಆಗಸ್ಟ್‌ 22ರಂದು (ಗುರುವಾರ) ನಾರ್ತ್‌ಸೌಂಡ್‌ನಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌
ಭಾರತೀಯರ ತಂಡ: ಮೊದಲ ಇನಿಂಗ್ಸ್‌ 88.5 ಓವರ್‌ಗಳಲ್ಲಿ 297/5 (ಕೆ.ಎಲ್‌ ರಾಹುಲ್‌ 36, ಪೂಜಾರ 100, ರೋಹಿತ್‌ ಶರ್ಮಾ 68, ಹನುಮ ವಿಹಾರಿ ಔಟಾಗದೆ 37, ರಿಷಭ್‌ ಪಂತ್‌ 33; ಕಾರ್ಟರ್‌ 39ಕ್ಕೆ 3).

Story first published: Sunday, August 18, 2019, 15:30 [IST]
Other articles published on Aug 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+