Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶತಕ ಶೂರ ಪೃಥ್ವಿ ಶಾ ಫಸ್ಟ್ 'ಶೋ' ಗೆ ಟ್ವೀಟ್ ಸಲಾಂ

Twitterati laud Prithvi Shaw for his maiden Test ton on debut

ಬೆಂಗಳೂರು, ಅಕ್ಟೋಬರ್ 04: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ಎರಡನೇ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದಿರುವ ಪೃಥ್ವಿ ಶಾ ಅವರ ಸಾಹಸಕೆ ಮೆಚ್ಚುಗೆ ವ್ಯಕ್ತಪಡಿಸಿ,ಅನೇಕ ಮಂದಿ ಟ್ವೀಟ್ ಮೂಲಕ ತಮ್ಮ ಸಂತಸ, ಶುಭಹಾರೈಕೆ ತಿಳಿಸಿದ್ದಾರೆ.

ಶಾಲಾ ದಿನಗಳಲ್ಲಿ 546 ರನ್ ಗಳಿಸಿ ದಾಖಲೆ, ದುಲೀಪ್ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿದ್ದು, ರಣಜಿ ಚೊಚ್ಚಲ ಪಂದ್ಯದಲ್ಲಿ ಶತಕ, ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದು, ಹೀಗೆ ಪೃಥ್ವಿ ಶಾ ದಾಖಲೆಗಳ ಪಟ್ಟಿ ಬೆಳೆಯುತ್ತದೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು 99 ಎಸೆತಗಳಲ್ಲಿ ಶತಕ ಗಳಿಸಿದ ಪೃಥ್ವಿ ಶಾ ಅವರು ಹತ್ತು ಹಲವು ದಾಖಲೆಗಳನ್ನು ಮುರಿದಿದ್ದಲ್ಲದೆ, ತಮ್ಮ ಆಕರ್ಷಕ ಬ್ಯಾಟಿಂಗ್ ಮೂಲಕ ಮತ್ತೊಮ್ಮೆ ಟೆಸ್ಟ್ ಕ್ರಿಕೆಟ್ ಗೂ ಥ್ರಿಲ್ಲಿಂಗ್ ಸ್ಪರ್ಶ ನೀಡಿದರು.

ಪೃಥ್ವಿ ಶಾ ಅವರಿಗೂ ಮುನ್ನ ಸಚಿನ್ ಅವರು 17 ವರ್ಷ 107 ದಿನಗಳಾಗಿದ್ದಾಗ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿ, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಪೃಥ್ವಿ ಶಾ ಬರೆದ ದಾಖಲೆಗಳು

ಪೃಥ್ವಿ ಶಾ ಮೊದಲ ಎಸೆತ ಎದುರಿಸುತ್ತಿದ್ದಂತೆ ದಾಖಲೆಗಳ ಪುಟ ಆರಂಭವಾಯಿತು. ಅರ್ಧ ಶತಕ, ಶತಕ ಗಳಿಸುತ್ತಿದ್ದಂತೆ ದಾಖಲೆಗಳ ಗ್ರಂಥವಾಯಿತು.

ಆಕಾಶ್ ಛೋಪ್ರಾರಿಂದ ಟ್ವೀಟ್

ಇದು ಪೃಥ್ವಿ ಆಡುತ್ತಿರುವ ಮೊದಲ ಟೆಸ್ಟ್ ಪಂದ್ಯವೋ ಅಥವಾ 100ನೇ ಪಂದ್ಯವೋ ಎಂದು ಮಾಜಿ ಕ್ರಿಕೆಟರ್ ಆಕಾಶ್ ಛೋಪ್ರಾ ಅವರು ಪೃಥ್ವಿ ಶಾ ಅವರ ಶತಕದ ಬಗ್ಗೆ ಬರೆದಿದ್ದು ಹೀಗೆ...

ಭಾರತ vs ವಿಂಡೀಸ್: ಚೊಚ್ಚಲ ಟೆಸ್ಟ್ ನಲ್ಲೇ ಅರ್ಧ ಶತಕ ಚಚ್ಚಿದ ಪೃಥ್ವಿ ಶಾ

ವೀರೇಂದ್ರ ಸೆಹ್ವಾಗ್ ಟ್ವೀಟ್

ಸೆಹ್ವಾಗ್ ಟ್ವೀಟ್ ಮಾಡಿ, ಶಾ ಶೋ ನೋಡಿದ್ರಾ, ಇದು ಇನ್ನೂ ಈಗಷ್ಟೇ ಶುರುವಾಗಿದೆ. ಇನ್ನು ತುಂಬಾ ಧಮ್ ಇದೆ ಎಂದಿದ್ದಾರೆ.

ನಟ ರಿತೇಶ್ ದೇಶ್ ಮುಖ್ ರಿಂದ ಟ್ವೀಟ್

ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಟ್ವೀಟ್ ಮಾಡಿ, ಸಕತ್ ಪಂಚಿಂಗ್ ಡೈಲಾಗ್ ಹೇಳಿದ್ದಾರೆ.

ಪೃಥ್ವಿ ಶಾ ಚೊಚ್ಚಲ ಪಂದ್ಯದಲ್ಲೇ ಶತಕ, ದಾಖಲೆಗಳು ಧ್ವಂಸ!

ಶುಭಹಾರೈಸಿದ ಕಿಡಾಂಬಿ ಶ್ರೀಕಾಂತ್

ಭಾರತದ ಬಾಡ್ಮಿಂಟನ್ ತಾರೆ ಕಿಡಾಂಬಿ ಶ್ರೀಕಾಂತ್ ಅವರು ಪೃಥ್ವಿ ಶಾ ಅವರಿಗೆ ಶುಭಹಾರೈಸಿದ್ದಾರೆ.

ಸಂಜಯ್ ಮಂಜೇಕ್ರರ್ ಟ್ವೀಟ್

ಮಾಜಿ ಕ್ರಿಕೆಟರ್ ಸಂಜಯ್ ಮಂಜೇಕರ್ ಅವರು ಟ್ವೀಟ್ ಮಾಡಿ, ಪೃಥ್ವಿ ಶಾ ಅವರ ಸ್ಟ್ರೈಕ್ ರೇಟ್ 100 ರ ಮೇಲಿದ್ದು, ಸುಲಭವಾಗಿ ಸಹಜವಾಗಿ ಆಡಿದ ರೀತಿ ಚೆನ್ನಾಗಿತ್ತು ಎಂದಿದ್ದಾರೆ.

Story first published: Friday, October 5, 2018, 8:08 [IST]
Other articles published on Oct 5, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+