ಭಾರತ vs ವಿಂಡೀಸ್: ಚೊಚ್ಚಲ ಟೆಸ್ಟ್ ನಲ್ಲೇ ಅರ್ಧ ಶತಕ ಚಚ್ಚಿದ ಪೃಥ್ವಿ ಶಾ


ರಾಜ್ ಕೋಟ್, ಅಕ್ಟೋಬರ್ 4: ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ vs ಭಾರತ ಟೆಸ್ಟ್ ಸರಣಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿರುವ ಪೃಥ್ವಿ ಶಾ, ಚೊಚ್ಚಲ ಪಂದ್ಯದಲ್ಲೇ ಅರ್ಧ ಶತಕ ಚಚ್ಚಿ ಗಮನ ಸೆಳೆದಿದ್ದಾರೆ.
ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಭಾರತಕ್ಕೆ ಆರಂಭಿಕ ಆಟಗಾರ ಕೆಎಲ್ ರಾಹುಲ್ ಸೊನ್ನೆಗೆ ಔಟಾಗುವ ಮೂಲಕ ಆಘಾತ ನೀಡಿದರೆ, ಮತ್ತೊಬ್ಬ ಆರಂಭಿಕ ಆಟಗಾರ ಪೃಥ್ವಿ ಶಾ ಕೇವಲ 56 ಎಸೆತಗಳಿಗೆ ಅರ್ಧ ಶತಕ ಪೂರೈಸಿ ಭಾರತೀಯರ ಮನ ಗೆದ್ದರು.
ಸದ್ಯ ಕೇವಲ 18ರ ಹರೆಯದವರಾಗಿರುವ ಮಹಾರಾಷ್ಟ್ರದ ಆಟಗಾರ ಪೃಥ್ವಿ ವಿಶ್ವದ ಅತೀ ಕಿರಿಯ ಬ್ಯಾಟ್ಸ್ಮನ್ ಕೀರ್ತಿಗೂ ಪಾತ್ರರಾಗಿದ್ದಾರೆ. 18ನೇ ಹರೆಯದವರಾಗಿ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಆಡಿದ ಭಾರತದ ಐದನೇ ಬ್ಯಾಟ್ಸ್ಮನ್ ಆಗಿ ಪೃಥ್ವಿ ಗುರುತಿಸಿಕೊಂಡಿದ್ದಾರೆ.
18ನೇ ಹರೆಯದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ ಭಾರತೀಯರ ಸಾಲಿನಲ್ಲಿ ಮಿಲ್ಖಾ ಸಿಂಗ್ (1960), ಬಿಎಸ್ ಚಂದ್ರಶೇಖರ್ (1964), ಇಶಾಂತ್ ಶರ್ಮಾ (2007), ರವಿ ಶಾಸ್ತ್ರಿ (1981), ಚೇತನ್ ಶರ್ಮಾ (1984) ಮತ್ತು ಪೃಥ್ವಿ ಶಾ ಇದ್ದಾರೆ. ಕಳೆದ ಹತ್ತು ವರ್ಷಗಳ ನಂತರ ಪೃಥ್ವಿ ಭಾರತದ ಮೊದಲ ಕಿರಿಯ ಬ್ಯಾಟ್ಸ್ಮನ್ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications