ಭಾರತ ಹಾಗೂ ವೆಸ್ಟ್ ಇಂಡೀಸ್ ಸರಣಿ ವೇಳಾಪಟ್ಟಿ ಪ್ರಕಟ

ಬೆಂಗಳೂರು, ಸೆಪ್ಟೆಂಬರ್ 04: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ (ಡಬ್ಲ್ಯೂಐಸಿಬಿ) ಯು ಮಂಗಳವಾರ(ಸೆಪ್ಟೆಂಬರ್ 04)ದಂದ ಮುಂಬರುವ ಕ್ರಿಕೆಟ್ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿವೆ.
ಸೆಪ್ಟೆಂಬರ್ 26ರಂದು ಭಾರತಕ್ಕೆ ಬರಲಿರುವ ವೆಸ್ಟ್ ಇಂಡೀಸ್ ತಂಡವು, ಎರಡು ಟೆಸ್ಟ್ ಪಂದ್ಯಗಳಲ್ಲದೆ, ಭಾರತ ಹಾಗೂ ವೆಸ್ಟ್ ಇಂಡೀಸ್ ಗಳು ಐದು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳನ್ನು ಆಡಲಿವೆ. ಅಕ್ಟೋಬರ್ 04ರಿಂದ ನವೆಂಬರ್ 11 ರ ತನಕ ಸರಣಿ ನಡೆಯಲಿದೆ.
ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್ 4-8 ತನಕ ರಾಜಕೋಟ್ ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 12 -16 ರವರೆಗೂ ಹೈದರಾಬಾದ್ನಲ್ಲಿ ಆಯೋಜನೆಗೊಂಡಿದೆ.
ಸೆಪ್ಟೆಂಬರ್ 15ರಿಂದ ಯುಎಇಯಲ್ಲಿ ಆರಂಭವಾಗಲಿರುವ ಏಷ್ಯಾಕಪ್ 2018ರಲ್ಲಿ ಆಡಲಿರುವ ಭಾರತ ತಂಡವು ಬಳಿಕ, ವೆಸ್ಟ್ ಇಂಡೀಸ್ ಜತೆ ಸರಣಿ ಆಡಲಿದೆ. ನಂತರ ಆಸ್ಟ್ರೇಲಿಯಾಕ್ಕೆ ತೆರಳಲಿದ್ದು, ನಂತರ ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ಟೂರ್ನಮೆಂಟ್ ಗೆ ಅಣಿಯಾಗಲಿದೆ.
ವೇಳಾಪಟ್ಟಿ ಇಂತಿದೆ
ಟೆಸ್ಟ್ ಸರಣಿ:
* ಮೊದಲ ಟೆಸ್ಟ್ ಪಂದ್ಯ: ಅಕ್ಟೋಬರ್ 4-8: ಸೌರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್, ರಾಜ್ಕೋಟ್
* ಎರಡನೇ ಟೆಸ್ಟ್ ಪಂದ್ಯ: ಅಕ್ಟೋಬರ್ 12-16: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನ, ಹೈದರಾಬಾದ್
ಏಕದಿನ ಕ್ರಿಕೆಟ್ :
* ಮೊದಲ ಏಕದಿನ ಪಂದ್ಯ, ಅಕ್ಟೋಬರ್ 21: ಗುವಾಹಟಿ
* ಎರಡನೇ ಏಕದಿನ ಪಂದ್ಯ, ಅಕ್ಟೋಬರ್ 24 : ಇಂದೋರ್
* ಮೂರನೇ ಏಕದಿನ ಪಂದ್ಯ, ಅಕ್ಟೋಬರ್ 27: ಪುಣೆ
* ನಾಲ್ಕನೇ ಏಕದಿನ ಪಂದ್ಯ, ಅಕ್ಟೋಬರ್ 29: ಮುಂಬೈ
* ಐದನೇ ಏಕದಿನ ಪಂದ್ಯ, ನವೆಂಬರ್ 1: ತಿರುವನಂತಪುರಂ
ಟಿ20 ಸರಣಿ:
* ಮೊದಲ ಟಿ20 ಪಂದ್ಯ, ನವೆಂಬರ್ 4 : ಕೋಲ್ಕತಾ
* ಎರಡನೇ ಟಿ20 ಪಂದ್ಯ, ನವೆಂಬರ್ 6 : ಲಕ್ನೋ
* ಮೂರನೇ ಟಿ20 ಪಂದ್ಯ, ನವೆಂಬರ್ 11 : ಚೆನ್ನೈ
1948ರಿಂದ ಭಾರತ ಹಾಗೂ ವೆಸ್ಟ್ ಇಂಡೀಸ್ 94 ಟೆಸ್ಟ್ ಪಂದ್ಯಗಳನ್ನಾಡಿದ್ದು, ವೆಸ್ಟ್ ಇಂಡೀಸ್ 30ರಲ್ಲಿ ಗೆಲುವು, 28ರಲ್ಲಿ ಸೋಲು ಹಾಗೂ 48ರಲ್ಲಿ ಡ್ರಾ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications