Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಡೀಸ್ ಪ್ರವಾಸಕ್ಕೆ 'ಗಬ್ಬರ್' ಧವನ್-'ಹಿಟ್‌ಮ್ಯಾನ್' ರೋಹಿತ್ ಜೋಡಿ ರೆಡಿ

India vs West Indies: Shikhar Dhawan united with opening partner Rohit Sharma

ನವದೆಹಲಿ, ಜುಲೈ 30: ಐಸಿಸಿ ವಿಶ್ವಕಪ್ 2019ರಲ್ಲಿ ಭಾರತದ ಆರಂಭಿಕರಾಗಿ ಮೈದಾನಕ್ಕಿಳಿದಿದ್ದ ಶಿಖರ್ ಧವನ್-ರೋಹಿತ್ ಶರ್ಮಾ ಜೋಡಿ ವೆಸ್ಟ್‌ ಇಂಡೀಸ್ ಪ್ರವಾಸ ಸರಣಿಯಲ್ಲಿ ಮತ್ತೆ ಜೊತೆಯಾಗಲಿದೆ. ವಿಶ್ವಕಪ್ ವೇಳೆ ಗಾಯಕ್ಕೀಡಾಗಿದ್ದ ಧವನ್ ಟೂರ್ನಿಯ ಮಧ್ಯದಲ್ಲಿ ತಂಡದಿಂದ ಹೊರ ಬಿದ್ದಿದ್ದರು. ಸದ್ಯ ಗಬ್ಬರ್ ಧವನ್ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.

ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಎಸೆತದ ವೇಳೆ ಧವನ್ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಶಿಖರ್ ಈಗ ಗುಣಮುಖರಾಗಿದ್ದು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಜ್ಜಾಗಿ ನಿಂತಿದ್ದಾರೆ. ವಿಂಡೀಸ್ ಸರಣಿಯಲ್ಲಿ ಏಕದಿನ ಮತ್ತು ಟಿ20ಯಲ್ಲಿ ರೋಹಿತ್-ಧವನ್ ಜೊತೆಯಾಗಿ ಆಡಲಿರುವುದರಿಂದ ಇಬ್ಬರ ಫೋಟೋವನ್ನು ಧವನ್ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ 2013ರಿಂದಲೂ ಧವನ್-ರೋಹಿತ್ ಜೋಡಿ ಭರ್ಜರಿ ಫಾರ್ಮ್ ಪ್ರದರ್ಶಿಸುತ್ತಿದೆ. ಏಕದಿನ ಕ್ರಿಕೆಟ್‌ನಲ್ಲಿ ಈ ಜೋಡಿ 105 ಇನ್ನಿಂಗ್ಸ್‌ಗಳಲ್ಲಿ 45.44ರ ಸರಾಸರಿಯಂತೆ 4726 ರನ್ ಮಾಡಿದೆ. ಇದರಲ್ಲಿ 16 ಶತಕ, 13 ಅರ್ಧ ಶತಕಗಳೂ ಸೇರಿವೆ.

ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಬಳಿಕ ಏಕದಿನದಲ್ಲಿ ಅತೀ ಅಯಶಸ್ವಿ ಜೋಡಿಯಾಗಿ ಧವನ್-ರೋಹಿತ್ ಗುರುತಿಸಿಕೊಂಡಿದ್ದಾರೆ. 45 ಅಂತಾರಾಷ್ಟ್ರೀಯ ಟಿ20 ಇನ್ನಿಂಗ್ಸ್‌ಗಳಲ್ಲಿ ಧವನ್-ರೋಹಿತ್ 1486 ರನ್ ಗಳಿಸಿದ್ದು, ಟಿ20ಐ ಮಾದರಿಯಲ್ಲಿ ಜೊತೆಯಾಟಕ್ಕಾಗಿ ಈ ಜೋಡಿ ಅತ್ಯಧಿಕ ರನ್‌ಗಾಗಿ ನಂ.1 ಸ್ಥಾನದಲ್ಲಿದೆ.

ಆಗಸ್ಟ್ 3ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಪ್ರವಾಸ ಸರಣಿ 3 ಪಂದ್ಯಗಳ ಟಿ20ಯಿಂದ ಚಾಲನೆಗೊಳ್ಳಲಿದೆ. ಟ್ವಿಟರ್‌ನಲ್ಲಿ ರೋಹಿತ್ ಜೊತೆಗಿರುವ ಫೋಟೋ ಶೇರ್‌ ಮಾಡಿಕೊಂಡಿರುವ ಧವನ್, 'ನನ್ನ ಜೊತೆಗಾರ ಹಿಟ್‌ಮ್ಯಾನ್ ರೋಹಿತ್ ನೊಂದಿಗೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಂಪೂರ್ಣ ಸಜ್ಜಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

Story first published: Tuesday, July 30, 2019, 16:20 [IST]
Other articles published on Jul 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+