
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಭಾರತ ಅದ್ಭುತ ಪ್ರದರ್ಶನ ನೀಡಿದ್ದು ಭರ್ಜರಿ ಗೆಲುವು ಸಾಧಿಸಿ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಆದರೆ ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಮೊದಲ ಎರಡು ಪಂದ್ಯದಲ್ಲಿಯೂ ವೈಫಲ್ಯವನ್ನು ಅನುಭವಿಸಿದ್ದಾರೆ. ಆದರೆ ಮಾಜಿ ಕ್ರಕೆಟಿಗ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಕಳವಳಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಕೊಹ್ಲಿ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿಲ್ಲ ಎಂದಿದ್ದಾರೆ ಸುನಿಲ್ ಗವಾಸ್ಕರ್.
ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಉತ್ತಮ ಮೊತ್ತವನ್ನು ಗಳಿಸಲು ವಿಫಲವಾಗಿದ್ದಾರೆ. ಮೊದಲ ಪಂದ್ಯದಲ್ಲಿ 4 ಎಸೆತಗಳಲ್ಲಿ 8 ರನ್ ಗಳಿಸಿ ಬೌನ್ಸರ್‌ಗೆ ಬಾರಿಸಲು ಹೋಗಿ ವಿಕೆಟ್ ಕಳೆದುಕೊಂಡಿದ್ದರು. ಎರಡನೇ ಪಂದ್ಯದಲ್ಲಿಯೂ ಕೊಹ್ಲಿ 18 ರನ್‌ಗಳಿಸಿದ್ದಾಗ ವಿಕೆಟ್ ಕಳೆದುಕೊಂಡಿ ನಿರಾಸೆ ಮೂಡಿಸಿದರು. ಈ ಪಂದ್ಯದಲ್ಲಿ ಭಾರತ 237 ರನ್‌ಗಳನ್ನು ಗಳಿಸಿದ್ದು ಇದನ್ನು ರಕ್ಷಣೆ ಮಾಡುವಲ್ಲಿ ಭಾರತ ತಂಡದ ಬೌಲರ್‌ಗಳು ಯಶಸ್ವಿಯಾಗಿದ್ದರು. ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಅಲ್ಜಾರಿ ಜೋಸೆಫ್ ಎಸೆತದಲ್ಲಿ ವಿಕೆಟ್ ಕಳೆದುಕೊಂಡಿದ್ದರೆ ಎರಡನೇ ಪಂದ್ಯದಲ್ಲಿ ಓಡಿಯೆನ್ ಸ್ಮಿತ್ ಎಸೆತದಲ್ಲಿ ವಿಕೆಟ್ ಕಳೆದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದ ಪರವಾಗಿ ಕೊಹ್ಲಿ ಮೂರು ಪಂದ್ಯಗಳಲ್ಲಿ 142 ರನ್‌ಗಳಿಸಿದ್ದರು. ಇದರಲ್ಲಿ ಎರಡು ಅರ್ಧ ಶತಕ ಕೂಡ ಸೇರಿತ್ತು. ಆದರೆ ವಿರಾಟ್ ಕೊಹ್ಲಿ 2019ರಿಂದ ಶತಕವನ್ನು ಗಳಿಸಲು ವಿಫಲವಾಗಿದ್ದಾರೆ. ವಿರಾಟ್ ಕೊಹ್ಲಿ ಸುದೀರ್ಘ ಕಾಲದಿಂದ ಮೂರಂಕಿ ದಾಟಲು ಸಾಧ್ಯವಾಗದಿರುವುದಕ್ಕೆ ಕೊಹ್ಲಿ ಅದೃಷ್ಟದ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ.
ಕೊಹ್ಲಿ ಅನುಭವಿಸುತ್ತಿರುವ ಕೊರತೆ ಯಾವುದು?: ದೊಡ್ಡ ಮೊತ್ತವನ್ನು ಗಳಿಸಲು ಮಾಜಿ ನಾಯಕ ವಿರಾಟ್ ಕೊಹ್ಲಿ ಪದೇ ಪದೇ ವಿಫಲವಾಗುತ್ತಿರುವುದಕ್ಕೆ ಕಾರಣವೇನು ಎಂಬ ಅಂಶವನ್ನು ಸುನಿಲ್ ಗವಾಸ್ಕರ್ ಮುಂದಿಡಲಾಯಿತು. ಅದಕ್ಕೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಒಂದು ಅಂಶವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ವಿರಾಟ್ ಕೊಹ್ಲಿ ಅದೃಷ್ಟದ ಕೊರತೆಯನ್ನು ಎದುರಿಸುತ್ತಿದ್ದಾರೆ. ಆ ಕಾರಣದಿಂದಾಗಿಯೇ ಅವರಿಗೆ ಶತಕವನ್ನು ಗಳಿಸಲು ಸಾಧ್ಯವಾಗುತ್ತಿಲ್ಲ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
"ಪ್ರತಿ ಬ್ಯಾಟರ್ ಕೂಡ ಸ್ವಲ್ಪ ಅದೃಷ್ಟವನ್ನು ಕೂಡ ಹೊಂದಿರಬೇಕಾಗುತ್ತದೆ. ಆಟಗಾರ ಬ್ಯಾಟಿಂಗ್ ಮಾಡುವಾಗ ಎಡ್ಜ್ ಆಡುವುದರಿಂದ ತಪ್ಪಿಸಿಕೊಳ್ಳುವಂತಾ ಅದೃಷ್ಟ ಬೇಕಾಗುತ್ತದೆ. ಅಥವಾ ಪ್ರತಿ ಬ್ಯಾಟರ್ ಎಡ್ಜ್ ಆದಾಗ ಕ್ಯಾಚ್ ಡ್ರಾಪ್ ಆಗುವುದು, ಅಥವಾ ಫಿಲ್ಡರ್ ಇಲ್ಲದ ಜಾಗದಲ್ಲಿ ಚೆಂಡು ಬೀಳುವಂತಾ ಅದೃಷ್ಟಗಳು ಬೇಕಾಗುತ್ತದೆ" ಎಂದು ಸುನಿಲ್ ಗವಾಸ್ಕರ್ ವಿವರಿಸಿದ್ದಾರೆ.
ಭಾರತ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಶಾರುಖ್ ಖಾನ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಹಾಲ್, ದೀಪಕ್ ಚಹಾರ್ , ಇಶಾನ್ ಕಿಶನ್, ಅವೇಶ್ ಖಾನ್, ಕುಲದೀಪ್ ಯಾದವ್
ವೆಸ್ಟ್ ಇಂಡೀಸ್ ತಂಡ: ಶಾಯ್ ಹೋಪ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್, ಬ್ರಾಂಡನ್ ಕಿಂಗ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಫ್ಯಾಬಿಯನ್ ಅಲೆನ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ರೊಮಾರಿಯೋ ಶೆಫರ್ಡ್, ಎನ್ಕ್ರುಮ್ ಬೊನ್ನರ್, ಹೇಡನ್ ವಾಲ್ಷ್, ಕೀರಾನ್ ಪೊಲಾರ್ಡ್(ನಾಯಕ)