IND vs ZIM 3rd ODI: ಭಾರತದ ಸಂಭಾವ್ಯ ಆಡುವ 11ರ ಬಳಗ; ಚೊಚ್ಚಲ ಪಂದ್ಯವಾಡ್ತಾರಾ ರಾಹುಲ್ ತ್ರಿಪಾಠಿ?

ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿದ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಜಿಂಬಾಬ್ವೆ ವಿರುದ್ಧ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶನಿವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು ಮತ್ತು ಜಿಂಬಾಬ್ವೆಯನ್ನು 161 ರನ್‌ಗಳಿಗೆ ಅಲೌಟ್ ಮಾಡಿತು.
ಸಾಧಾರಣ ಮೊತ್ತ ಬೆನ್ನಟ್ಟಿದ ಪ್ರವಾಸಿ ತಂಡ ಭಾರತ, ಶಿಖರ್ ಧವನ್ ಅವರೊಂದಿಗೆ ಆರಂಭಿಕರಾಗಿ ಬಂದ ನಾಯಕ ಕೆಎಲ್ ರಾಹುಲ್ ಅವರ ಆರಂಭಿಕ ವಿಕೆಟ್ ಅನ್ನು ಆತಿಥೇಯರು ಉರುಳಿಸಿದರು. ಆದರೆ ಧವನ್, ಶುಭ್‌ಮನ್ ಗಿಲ್ ಮತ್ತು ಸಂಜು ಸ್ಯಾಮ್ಸನ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನವು ಟೀಮ್ ಇಂಡಿಯಾದ ಐದು ವಿಕೆಟ್‌ಗಳ ಗೆಲುವಿಗೆ ಕಾರಣವಾಯಿತು.
ಎರಡೂ ತಂಡಗಳು ಸೋಮವಾರ (ಆಗಸ್ಟ್ 22) ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯಕ್ಕಾಗಿ ಹಣಾಹಣಿ ನಡೆಸಲಿವೆ. ಪ್ರವಾಸಿ ತಂಡ ಭಾರತ ಮತ್ತೊಂದು ಕ್ಲೀನ್ ಸ್ವೀಪ್ ಎದುರು ನೋಡುತ್ತಿದ್ದು, ಔಪಚಾರಿಕ ಮೂರನೇ ಪಂದ್ಯದಲ್ಲಿ ಭಾರತ ತಂಡದಲ್ಲಿ ಕೆಲವು ಬದಲಾವಣೆ ಕಾಣಬಹುದು. ಬ್ಯಾಟರ್ ರಾಹುಲ್ ತ್ರಿಪಾಠಿ ರಾಷ್ಟ್ರೀಯ ತಂಡಕ್ಕಾಗಿ ಚೊಚ್ಚಲ ಪಂದ್ಯದಲ್ಲಿ ಕ್ಯಾಪ್ ತೋಡುತ್ತಾರಾ ಎಂಬುದು ಕುತೂಹಲಕಾರಿಯಾಗಿದೆ.

ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಸಂಭಾವ್ಯ ಆಡುವ 11ರ ಬಳಗ
ಶಿಖರ್ ಧವನ್: ಜಿಂಬಾಬ್ವೆ ವಿರುದ್ಧದ ಎರಡೂ ಏಕದಿನ ಪಂದ್ಯಗಳಲ್ಲಿ ಉಪನಾಯಕ, ಎಡಗೈ ಬ್ಯಾಟ್ಸ್‌ಮನ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಮೊದಲ ಪಂದ್ಯದಲ್ಲಿ ಅಜೇಯರಾಗಿ 113 ಎಸೆತಗಳಲ್ಲಿ 81 ರನ್ ಗಳಿಸಿದರೆ, ಎರಡನೇ ಪಂದ್ಯದಲ್ಲಿ ಅಗತ್ಯ 33 ರನ್ ಗಳಿಸಿ ಮಿಂಚಿದರು.
ಕೆಎಲ್ ರಾಹುಲ್ (ನಾಯಕ): ಹಂಗಾಮಿ ನಾಯಕ ಕೆಎಲ್ ರಾಹುಲ್ ಎರಡನೇ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಕಂಬ್ಯಾಕ್ ಮಾಡಲು ಬಂದರು, ಆದರೆ ಕೇವಲ ಒಂದು ರನ್ ಗಳಿಸಿ ವಿಫಲರಾದರು. ಮೂರನೇ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಸ್ಕೋರ್ ಮಾಡಿ ಏಷ್ಯಾ ಕಪ್‌ಗೂ ಮುನ್ನ ಮಿಂಚುವ ತವಕದಲ್ಲಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಬಂದಿರುವ ರಾಹುಲ್ ತನ್ನ ಸಾಮರ್ಥ್ಯ ಸಾಬೀತುಪಡಿಸಬೇಕಿದೆ.

ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್ 81 ರನ್
ಶುಭಮನ್ ಗಿಲ್: ಯುವ ಬ್ಯಾಟರ್ ಶುಭ್‌ಮನ್ ಗಿಲ್ ಎರಡೂ ಪಂದ್ಯಗಳಲ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು ಮತ್ತು ಭಾರತೀಯ ಅಭಿಮಾನಗಳ ನಿರೀಕ್ಷೆಯನ್ನು ಪೂರೈಸಿದರು. ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್ ಅವರ 81 ರನ್‌ಗಳ ನೆರವಿನಿಂದ ಭಾರತವು ಆರಾಮದಾಯಕ ಗೆಲುವಿಗೆ ಕಾರಣವಾಯಿತು. ಅದೇ ರೀತಿ ನಂತರ ಏರಡನೇ ಪಂದ್ಯದಲ್ಲಿ 34 ರನ್ ಗಳಿಸಿದರು.
ಇಶಾನ್ ಕಿಶನ್: ಎರಡನೇ ಏಕದಿನ ಪಂದ್ಯದಲ್ಲಿ ದೊಡ್ಡ ಸ್ಕೋರ್ ಗಳಿಸಲು ವಿಫಲರಾಗಿದ್ದರೂ, ಇಶಾನ್ ಕಿಶನ್ ಎರಡನೇ ಪಂದ್ಯದಲ್ಲಿ ಮಿಂಚುವ ನಿರೀಕ್ಷೆಯಲ್ಲಿದ್ದಾರೆ. ಇದುವರೆಗಿನ ಐದು ಏಕದಿನ ಪಂದ್ಯಗಳಲ್ಲಿ ಎಡಗೈ ಬ್ಯಾಟರ್ ಒಂದು ಅರ್ಧಶತಕದೊಂದಿಗೆ 94 ರನ್ ಗಳಿಸಿದ್ದಾರೆ.

ಐರ್ಲೆಂಡ್ ವಿರುದ್ಧ ಶತಕ ಗಳಿಸಿದ್ದ ದೀಪಕ್ ಹೂಡಾ
ದೀಪಕ್ ಹೂಡಾ: ಐರ್ಲೆಂಡ್ ವಿರುದ್ಧ ಶತಕ ಗಳಿಸಿದ ನಂತರ ದೀಪಕ್ ಹೂಡಾ ತಮ್ಮ ಸಾಮರ್ಥ್ಯ ತೋರಿಸಿದರು. ಅಂದಿನಿಂದ, ಅವರು ದೊಡ್ಡ ಸ್ಕೋರ್‌ಗಳನ್ನು ಹೊಡೆದಿಲ್ಲ, ಆದರೆ ಸಣ್ಣ ಕೊಡುಗೆಗಳು ತಂಡದ ಗೆಲುವಿಗೆ ಮೌಲ್ಯಯುತವಾಗಿವೆ. ದೀಪಕ್ ಹೂಡಾಗೆ ವಿಶ್ರಾಂತಿ ನೀಡಿ ರಾಹುಲ್ ತ್ರಿಪಾಠಿಗೆ ಚೊಚ್ಚಲ ಅವಕಾಶ ನೀಡಲು ಟೀಮ್ ಮ್ಯಾನೇಜ್‌ಮೆಂಟ್ ನಿರ್ಧರಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
ಸಂಜು ಸ್ಯಾಮ್ಸನ್: ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ 43 ರನ್ ಗಳಿಸಿ, ಭಾರತ ಎರಡನೇ ಏಕದಿನ ಪಂದ್ಯವನ್ನು ಗೆಲ್ಲಲು ನೆರವಾದರು ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮೂರನೇ ಏಕದಿನ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ತಮ್ಮ ಫಾರ್ಮ್ ಅನ್ನು ಮುಂದುವರಿಸಲಿದ್ದಾರೆ.

2 ಏಕದಿನ ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಅಕ್ಷರ್ ಪಟೇಲ್
ಅಕ್ಷರ್ ಪಟೇಲ್: ಜಿಂಬಾಬ್ವೆ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಬೌಲಿಂಗ್ ಆಲ್‌ರೌಂಡರ್ ಒಟ್ಟು ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಅವರು ಎರಡನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಬಂದರು, ಆದರೆ ಅವರು ಕೇವಲ 7 ಎಸೆತಗಳನ್ನು ಎದುರಿಸಿದರು. ಎರಡನೇ ಪಂದ್ಯದಲ್ಲ ಅಕ್ಷರ್ ಒಂದು ಬೌಂಡರಿಯೊಂದಿಗೆ 6 ರನ್ ಗಳಿಸಿದರು. ಮೂರನೇ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಲು ಎದುರು ನೋಡುತ್ತಾರೆ.
ಶಾರ್ದೂಲ್ ಠಾಕೂರ್: ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಶಾರ್ದೂಲ್ ಠಾಕೂರ್ ಪ್ರಮುಖ ಕಾರಣ. ಆಲ್‌ರೌಂಡರ್ ತನ್ನ ಏಳು ಓವರ್‌ಗಳ ಸ್ಪೆಲ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದರು ಮತ್ತು 38 ರನ್‌ಗಳನ್ನು ಬಿಟ್ಟುಕೊಟ್ಟರು.

ಮೊದಲ ಪಂದ್ಯದಲ್ಲಿ 8 ಓವರ್‌ಗಳಲ್ಲಿ 3 ವಿಕೆಟ್ ಗಳಿಸಿದ್ದ ಪ್ರಸಿದ್ಧ್ ಕೃಷ್ಣ
ಕುಲದೀಪ್ ಯಾದವ್: ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ ನಂತರ, ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಎರಡನೇ ಪಂದ್ಯದಲ್ಲಿ 8 ಓವರ್‌ಗಳಲ್ಲಿ 49 ರನ್‌ಗಳನ್ನು ಬಿಟ್ಟುಕೊಟ್ಟರು, ಆದರೆ ವಿಕೆಟ್ ಪಡೆಯದ ಕಾರಣ ಸ್ವಲ್ಪ ದುಬಾರಿಯಾದರು.
ಪ್ರಸಿದ್ಧ್ ಕೃಷ್ಣ: ಬಲಗೈ ವೇಗಿ ಮೊದಲ ಪಂದ್ಯದಲ್ಲಿ 8 ಓವರ್‌ಗಳಲ್ಲಿ 50 ರನ್‌ಗಳಿಗೆ 3 ವಿಕೆಟ್‌ಗಳನ್ನು ದಾಖಲಿಸಿದರು, ಆದರೆ ಅವರು ಎರಡನೇ ಪಂದ್ಯದಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಪಡೆಯುವಲ್ಲಿ ಯಶಸ್ವಿಯಾದರು. ಆದರೂ ಮೂರನೇ ಪಂದ್ಯದಲ್ಲಿ ಆಡುವ ತಂಡದ ಭಾಗವಾಗಲಿದ್ದಾರೆ.
ಮೊಹಮ್ಮದ್ ಸಿರಾಜ್: ಅನುಭವಿ ವೇಗಿ ಎರಡನೇ ಪಂದ್ಯದಲ್ಲಿ 8 ಓವರ್‌ನಲ್ಲಿ 2 ಮೇಡನ್ ಓವರ್ ಬೌಲ್ ಮಾಡಿದರು ಮತ್ತು ಕೇವಲ 16 ರನ್ ನೀಡಿ ಒಂದು ವಿಕೆಟ್ ಪಡೆದು ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications