For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 4-0 ಅಂತರದಲ್ಲಿ ಗೆಲುವು ಸಾಧಿಸುವುದು ಖಚಿತ ಎಂದ ಮಾಜಿ ಕ್ರಿಕೆಟಿಗ

 India will beat England 4-0 says Sunil Gavaskar

ಜೂನ್ 18ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಆಗಸ್ಟ್ 4ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಟೀಮ್ ಇಂಡಿಯಾ ಈಗಾಗಲೇ ಸೌತಂಪ್ಟನ್ ತಲುಪಿದೆ.

ವಿರಾಟ್ ಕೊಹ್ಲಿ, ಧೋನಿ ಮತ್ತು ಬಾಬರ್ ಅಜಮ್ ಬಗ್ಗೆ ರಶೀದ್ ಖಾನ್ ಒಂದೇ ಪದದಲ್ಲಿ ವಿವರಿಸಿದ್ದು ಹೀಗೆ

ಜೂನ್ 18-22ರವರೆಗೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣಸಾಡಲಿದೆ, ಈ ಪಂದ್ಯ ಮುಗಿದ ಬಳಿಕ ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಸದ್ಯ ಭಾರತ ಕೈಗೊಂಡಿರುವ ಇಂಗ್ಲೆಂಡ್ ಪ್ರವಾಸದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು ಟೀಮ್ ಇಂಡಿಯಾ ಯಾವ ರೀತಿಯ ಪ್ರದರ್ಶನವನ್ನು ನೀಡಲಿದೆ ಎಂಬುದರ ಕುರಿತು ಲೆಕ್ಕಾಚಾರಗಳು ಜೋರಾಗಿವೆ.

ಧೋನಿ ಯಶಸ್ವಿ ನಾಯಕತ್ವದ ಹಿಂದೆ ಇದೆ ಆ ಆಟಗಾರನ ನಿರಂತರ ಸಲಹೆ; ಸತ್ಯಾಂಶ ಬಿಚ್ಚಿಟ್ಟ ರುತುರಾಜ್ ಗಾಯಕ್ವಾಡ್

ಇದೀಗ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ 5 ಪಂದ್ಯಗಳ ಟೆಸ್ಟ್ ಸರಣಿ ಕುರಿತು ಮಾತನಾಡಿದ್ದು ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 4-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 'ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಮುಗಿದ ನಂತರ ಟೀಮ್ ಇಂಡಿಯಾಗೆ 6 ವಾರಗಳ ಕಾಲಾವಕಾಶ ಸಿಗಲಿದ್ದು, ನಂತರ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 4-0 ಅಂತರದಲ್ಲಿ ಗೆಲುವು ಸಾಧಿಸಲಿದೆ. ಆ ಸಮಯದಲ್ಲಿ ಇಂಗ್ಲೆಂಡ್‌ನಲ್ಲಿ ಬೇಸಿಗೆ ಇರಲಿದ್ದು ಭಾರತ ತಂಡಕ್ಕೆ ಅದು ಸಕಾರಾತ್ಮಕ ಅಂಶವಾಗಲಿದೆ' ಎಂದು ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ.

Story first published: Saturday, June 5, 2021, 9:07 [IST]
Other articles published on Jun 5, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+