Sachin Tendulkar Statue: ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪ್ರತಿಮೆ ಸ್ಥಾಪನೆ!

ಭಾರತೀಯ ಕ್ರಿಕೆಟ್‌ನ ಅಪ್ರತಿಮ ಆಟಗಾರ, ವಿಶ್ವ ದಾಖಲೆಗಳ ಸರದಾರ, ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ, ಕ್ರಿಕೆಟ್ ದೇವರು ಎಂದೇ ಕರೆಯಿಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿ ಒಂದು ದಶಕ ಕಳೆದಿದ್ದು, ಇದೀಗ ಅವರಿಗಾಗಿ ದೊಡ್ಡ ಗೌರವ ನೀಡಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಮುಂದಾಗಿದೆ.
ಭಾರತ ಮತ್ತು ಮುಂಬೈ ಕ್ರಿಕೆಟ್‌ಗೆ ಸಚಿನ್ ತೆಂಡೂಲ್ಕರ್ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಗಾತ್ರದ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ. ಈ ರೀತಿ ಮುಂಬೈನಲ್ಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ದಿಗ್ಗಜನನ್ನು ಶೀಘ್ರದಲ್ಲೇ ಅದ್ಧೂರಿಯಾಗಿ ಗೌರವಿಸಲಾಗುತ್ತದೆ ಎಂದು ವರದಿಯಾಗಿದೆ.
ಸಚಿನ್ ತೆಂಡೂಲ್ಕರ್ ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಆಡಿದ್ದರು. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಸಚಿನ್ ಅವರ ಪ್ರತಿಮೆಯನ್ನು ಮುಂಬರುವ 50ನೇ ಜನ್ಮದಿನದಂದು (ಏಪ್ರಿಲ್ 24) ಅನಾವರಣಗೊಳಿಸಲಾಗುವುದು ಅಥವಾ ವರ್ಷಾಂತ್ಯದಲ್ಲಿ ನಡೆಯುವ 50 ಓವರ್‌ಗಳ ವಿಶ್ವಕಪ್ ಸಮಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.

ಐತಿಹಾಸಿಕ ಸ್ಥಳದಲ್ಲಿ ಸ್ಥಾಪಿಸಲಾಗುವ ಮೊದಲ ಪ್ರತಿಮೆ
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಂತೆ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಅಧ್ಯಕ್ಷ ಅಮೋಲ್ ಕಾಳೆ ಅವರು ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಮತ್ತು ಪ್ರತಿಮೆ ರೂಪುಗೊಂಡ ನಂತರ, ಐತಿಹಾಸಿಕ ಸ್ಥಳದಲ್ಲಿ ಸ್ಥಾಪಿಸಲಾಗುವ ಮೊದಲ ಪ್ರತಿಮೆಯಾಗಲಿದೆ.
"ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲ ಪ್ರತಿಮೆಯಾಗಲಿದೆ, ಅದನ್ನು ಎಲ್ಲಿ ಸ್ಥಾಪಿಸಲಾಗುವುದು ಎಂಬುದನ್ನು ನಾವು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತೇವೆ," ಎಂದು ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಹೇಳಿದ್ದಾರೆ.
"ಸಚಿನ್ ತೆಂಡೂಲ್ಕರ್ ಭಾರತ ರತ್ನ ಮತ್ತು ಅವರು ಕ್ರಿಕೆಟ್‌ಗಾಗಿ ಏನು ಕೊಡುಗೆ ನೀಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರು 50 ವರ್ಷಕ್ಕೆ ಕಾಲಿಡುತ್ತಿದ್ದಂತೆ, ಎಂಸಿಎ ಕಡೆಯಿಂದ ಸಣ್ಣ ಉಡುಗೊರೆ ನೀಡಲಾಗುತ್ತದೆ. ನಾನು ಮೂರು ವಾರಗಳ ಹಿಂದೆ ಸಚಿನ್‌ರೊಂದಿಗೆ ಮಾತನಾಡಿದ್ದೇನೆ ಮತ್ತು ಪ್ರತಿಮೆ ಸ್ಥಾಪನೆಗೆ ಅವರ ಒಪ್ಪಿಗೆಯನ್ನು ಸ್ವೀಕರಿಸಲಾಗಿದೆ," ಎಂದು ಅಮೋಲ್ ಕಾಳೆ ತಿಳಿಸಿದರು.

ವಿಶ್ವಕಪ್ ವಿಜೇತ ಸಚಿನ್ ತೆಂಡೂಲ್ಕರ್ ಹೆಸರಿನ ಸ್ಟ್ಯಾಂಡ್
ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ತನ್ನ ಕ್ರಿಕೆಟಿಗರಿಗೆ ಸೂಕ್ತ ಗೌರವ ಸಲ್ಲಿಸಲು ಹೆಸರುವಾಸಿಯಾಗಿದ್ದು, ಅದೇ ಸ್ಥಳದಲ್ಲಿ ಈಗಾಗಲೇ 2011ರ ಏಕದಿನ ವಿಶ್ವಕಪ್ ವಿಜೇತ ಸಚಿನ್ ತೆಂಡೂಲ್ಕರ್ ಹೆಸರಿನ ಸ್ಟ್ಯಾಂಡ್ ಇದೆ. ಇದರ ಜೊತೆಗೆ ದಿಲೀಪ್ ವೆಂಗ್‌ಸರ್ಕರ್ ಹೆಸರಿನ ಸ್ಟ್ಯಾಂಡ್ ಮತ್ತು ಸುನಿಲ್ ಗವಾಸ್ಕರ್ ಹೆಸರಿನ ಕಾರ್ಪೊರೇಟ್ ಬಾಕ್ಸ್ ಸಹ ಹೊಂದಿದೆ.
ಸಚಿನ್ ತೆಂಡೂಲ್ಕರ್ ನವೆಂಬರ್ 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಾಂಖೆಡೆಯಲ್ಲಿ ವೃತ್ತಿಜೀವನ್ ಕೊನೆಗೊಳಿಸುವ ಮೊದಲು ಬರೋಬ್ಬರಿ ಎರಡು ದಶಕಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ಈ ವೇಳೆ ಅನೇಕ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಲು ಸಾಧ್ಯವಾಗಿದೆ.

ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಕಿಅಂಶ
ಸಚಿನ್ ತೆಂಡೂಲ್ಕರ್ ಭಾರತ ತಂಡದ ಪರ 200 ಟೆಸ್ಟ್ ಪಂದ್ಯಗಳನ್ನಾಡಿದ್ದು, 15921 ರನ್ ಗಳಿಸಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದಾರೆ. ಇದೆ ವೇಳೆ 463 ಏಕದಿನ ಪಂದ್ಯಗಳನ್ನು ಆಡಿ 18426 ರನ್ ಬಾರಿಸಿದ್ದಾರೆ. ಏಕೈಕ ಟಿ20 ಪಂದ್ಯವನ್ನು ಆಡಿದ್ದು, ಒಟ್ಟಾರೆ 34,357 ರನ್ ಕಲೆ ಹಾಕಿದ್ದಾರೆ. ವಿಶ್ವದಾಖಲೆಯ 100 ಅಂತಾರಾಷ್ಟ್ರೀಯ ಶತಕಗಳು ಅವರ ಹೆಸರಿನಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications