Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2022ರ ಅಕ್ಟೋಬರ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ವೇಳಾಪಟ್ಟಿ: ಸಮಯ ಮತ್ತು ಲೈವ್ ಸ್ಟ್ರೀಮಿಂಗ್ ವಿವರ

Indian Cricket Team Full Schedule In October 2022: Timings and Live Streaming Details

ಭಾರತೀಯ ಕ್ರಿಕೆಟ್ ತಂಡ ಆಟದ ಟಿ20 ಮತ್ತು ಏಕದಿನ ಎರಡು ಸ್ವರೂಪಗಳಲ್ಲಿ ಐದು ವಿಭಿನ್ನ ಎದುರಾಳಿಗಳನ್ನು ಎದುರಿಸುವುದರಿಂದ ಭಾರತೀಯ ಕ್ರಿಕೆಟ್ ತಂಡದ ತೀವ್ರವಾದ ವೇಳಾಪಟ್ಟಿಯು 2022ರ ಅಕ್ಟೋಬರ್‌ನಲ್ಲಿಯೂ ಮುಂದುವರಿಯುತ್ತದೆ.

ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಸರಣಿಯು ಈ ತಿಂಗಳಿನಲ್ಲಿ ಎರಡು ಟಿ20 ಮತ್ತು ಮೂರು ಏಕದಿನ ಪಂದ್ಯಗಳೊಂದಿಗೆ ಭಾರತ ಕ್ರಿಕೆಟ್ ತಂಡದ ಪಯಣ ಮುಂದುವರಿಯುತ್ತದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಸರಣಿಯ ನಂತರ, ಭಾರತೀಯ ಕ್ರಿಕೆಟ್ ತಂಡವು ಆಸ್ಟ್ರೇಲಿಯಾಕ್ಕೆ ವಿಮಾನ ಹತ್ತಲಿದೆ. ಐಸಿಸಿ ಟಿ20 ವಿಶ್ವಕಪ್ 2022 ಪ್ರಾರಂಭವಾಗುವ ಮೊದಲು ಅವರು ಒಂದೆರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್ 2022ರ ಭಾರತೀಯ ಕ್ರಿಕೆಟ್ ತಂಡದ ಸಂಪೂರ್ಣ ವೇಳಾಪಟ್ಟಿಯ ನೋಟ ಇಲ್ಲಿದೆ.

ಅಕ್ಟೋಬರ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಪಂದ್ಯಗಳ ಸಂಪೂರ್ಣ ಪಟ್ಟಿ

ಅಕ್ಟೋಬರ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಪಂದ್ಯಗಳ ಸಂಪೂರ್ಣ ಪಟ್ಟಿ

ಮೊದಲೇ ಹೇಳಿದಂತೆ, ಅಕ್ಟೋಬರ್ 2022ರಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾದ ವಿದೇಶ ಸರಣಿ ಮುಂದುವರಿಯುತ್ತದೆ. ಕಳೆದ ಬುಧವಾರ ತಿರುವನಂತಪುರದಿಂದ ಸರಣಿ ಪ್ರಾರಂಭವಾಗಿದೆ. ಮೊದಲ ಪಂದ್ಯದಲ್ಲಿ ಮೆನ್ ಇನ್ ಬ್ಲೂ ಎಂಟು ವಿಕೆಟ್‌ಗಳ ಜಯವನ್ನು ದಾಖಲಿಸಿತು. ಈ ಪ್ರವಾಸದ ಐದು ಪಂದ್ಯಗಳು ಬಾಕಿ ಇವೆ.

ಈ ಪ್ರವಾಸದಲ್ಲಿ ಉಳಿದಿರುವ ಪಂದ್ಯಗಳ ಸಂಪೂರ್ಣ ಪಟ್ಟಿ ಮತ್ತು ಈ ತಿಂಗಳ ಟಿ20 ವಿಶ್ವಕಪ್ ಅಭ್ಯಾಸಗಳು ಮತ್ತು ಸೂಪರ್ 12ರಲ್ಲಿ ಭಾರತ ಆಡುವ ಪಂದ್ಯಗಳು ಇಲ್ಲಿವೆ.

ಅಕ್ಟೋಬರ್ 2022ರ ಭಾರತೀಯ ತಂಡದ ಸಂಪೂರ್ಣ ವೇಳಾಪಟ್ಟಿ

ಅಕ್ಟೋಬರ್ 2022ರ ಭಾರತೀಯ ತಂಡದ ಸಂಪೂರ್ಣ ವೇಳಾಪಟ್ಟಿ

ಅಕ್ಟೋಬರ್ 2: ಭಾರತ vs ದಕ್ಷಿಣ ಆಫ್ರಿಕಾ, 2ನೇ ಟಿ20I, 7:00 PM IST, ಗುವಾಹಟಿ

ಅಕ್ಟೋಬರ್ 4: ಭಾರತ vs ದಕ್ಷಿಣ ಆಫ್ರಿಕಾ, 3ನೇ ಟಿ20I, 7:00 PM IST, ಇಂದೋರ್

ಅಕ್ಟೋಬರ್ 6: ಭಾರತ vs ದಕ್ಷಿಣ ಆಫ್ರಿಕಾ, 1ನೇ ಏಕದಿನ, 1:30 PM IST, ಲಕ್ನೋ

ಅಕ್ಟೋಬರ್ 9: ಭಾರತ vs ದಕ್ಷಿಣ ಆಫ್ರಿಕಾ, 2 ನೇ ಏಕದಿನ, 1:30 PM IST, ರಾಂಚಿ

ಅಕ್ಟೋಬರ್ 11: ಭಾರತ vs ದಕ್ಷಿಣ ಆಫ್ರಿಕಾ, 3ನೇ ಏಕದಿನ, 1:30 PM IST, ದೆಹಲಿ

ಭಾರತ vs ಪಾಕಿಸ್ತಾನ, ಸೂಪರ್ 12 ಪಂದ್ಯ

ಭಾರತ vs ಪಾಕಿಸ್ತಾನ, ಸೂಪರ್ 12 ಪಂದ್ಯ

ಅಕ್ಟೋಬರ್ 17: ಆಸ್ಟ್ರೇಲಿಯಾ vs ಭಾರತ, ಟಿ20 ಅಭ್ಯಾಸ ಪಂದ್ಯ, 9:30 AM IST, ಬ್ರಿಸ್ಬೇನ್

ಅಕ್ಟೋಬರ್ 19: ನ್ಯೂಜಿಲೆಂಡ್ vs ಭಾರತ, ಟಿ20 ಅಭ್ಯಾಸ ಪಂದ್ಯ, ಮಧ್ಯಾಹ್ನ 1:30 IST, ಬ್ರಿಸ್ಬೇನ್

ಅಕ್ಟೋಬರ್ 23: ಭಾರತ vs ಪಾಕಿಸ್ತಾನ, ಸೂಪರ್ 12 ಪಂದ್ಯ, ಟಿ20, 1:30 PM IST, ಮೆಲ್ಬೋರ್ನ್

ಅಕ್ಟೋಬರ್ 27: ಭಾರತ vs A2 (ಕ್ವಾಲಿಫೈಯರ್), ಸೂಪರ್ 12 ಪಂದ್ಯ, 12:30 PM IST, ಸಿಡ್ನಿ

ಅಕ್ಟೋಬರ್ 30: ಭಾರತ vs ದಕ್ಷಿಣ ಆಫ್ರಿಕಾ, ಸೂಪರ್ 12 ಪಂದ್ಯ, 4:30 PM IST, ಪರ್ತ್

ಭಾರತ ಕ್ರಿಕೆಟ್ ತಂಡದ ಪಂದ್ಯಗಳನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಕ್ರಿಕೆಟ್ ತಂಡದ ಪಂದ್ಯಗಳನ್ನು ಎಲ್ಲಿ ವೀಕ್ಷಿಸಬಹುದು?

ಈ ಮೇಲಿನಂತೆ ಪಟ್ಟಿ ಮಾಡಲಾದ ಎಲ್ಲಾ ಭಾರತೀಯ ಕ್ರಿಕೆಟ್ ತಂಡದ ಪಂದ್ಯಗಳನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ (ಇಂಗ್ಲಿಷ್), ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಎಚ್‌ಡಿಯಲ್ಲಿ ಲೈವ್ ಟೆಲಿಕಾಸ್ಟ್ ಲಭ್ಯವಿರುತ್ತದೆ. ಡಿಸ್ನಿ+ ಹಾಟ್‌ಸ್ಟಾರ್ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡುತ್ತದೆ.

Story first published: Saturday, October 1, 2022, 20:52 [IST]
Other articles published on Oct 1, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+