Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Independence Day Special: 2019ರ ಸ್ವಾತಂತ್ರ್ಯ ದಿನದಂದು ಇತಿಹಾಸ ನಿರ್ಮಿಸಿದ್ದ ಭಾರತ ಕ್ರಿಕೆಟ್ ತಂಡ

ಭಾರತೀಯ ಕ್ರಿಕೆಟ್ ತಂಡವು ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ಆಗಸ್ಟ್ 15 ಪ್ರತಿಯೊಬ್ಬ ಭಾರತೀಯನಿಗೂ ವಿಶೇಷವಾಗಿಗಿರುತ್ತದೆ. ಈ ದಿನದಂದು ದೇಶಕ್ಕೆ ದೊಡ್ಡ ಉಡುಗೊರೆಯನ್ನು ನೀಡುವ ಮೂಲಕ ಭಾರತೀಯ ಕ್ರಿಕೆಟ್ ತಂಡವು ಈ ಸಂಭ್ರಮವನ್ನು ದುಪ್ಪಟ್ಟುಗೊಳಿಸಿತ್ತು.

ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಲಾಗಿದ್ದು, ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನದಂದು ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ಗೆಲುವಿನ ಸಾಧನೆ ಮಾಡಿತ್ತು.

Indian Cricket Team Made History On Independence Day 2019

ಆಗಸ್ಟ್ 2019ರಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು. ಇದರ ಕೊನೆಯ ಪಂದ್ಯವನ್ನು ಆಗಸ್ಟ್ 14ರಂದು ಆಡಲಾಯಿತು, ಆದರೂ ಅದು ಆಗಸ್ಟ್ 15ರ ಬೆಳಿಗ್ಗೆ ಕೊನೆಗೊಂಡಿತು.

ಇದರ ಫಲವಾಗಿ ಭಾರತ ಕ್ರಿಕೆಟ್ ತಂಡ ಈ ಪಂದ್ಯವನ್ನು ಗೆಲ್ಲುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದಿನದಂದು ಬಹುದೊಡ್ಡ ಉಡುಗೊರೆ ನೀಡಿದೆ. ಈ ದಿನದಂದು ಭಾರತ ಪಂದ್ಯವನ್ನು ಗೆದ್ದಿದ್ದಲ್ಲದೆ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು.

ಆಗಸ್ಟ್ 15, 2019ರ ಹಿಂದಿನ ಇತಿಹಾಸ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 72 ವರ್ಷಗಳ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡವು ಈ ನಿರ್ದಿಷ್ಟ ದಿನದಂದು ಯಾವುದೇ ಗೆಲುವನ್ನು ಸಾಧಿಸಿರಲಿಲ್ಲ. ಆಗಸ್ಟ್ 15ರಂದು ಅಥವಾ ಆಸುಪಾಸಿನಲ್ಲಿ ಭಾರತ ತಂಡ ಆಡಿದ ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿತ್ತು ಮತ್ತು ಪಂದ್ಯ ರದ್ದುಗೊಂಡಿತ್ತು.

ಆಗಸ್ಟ್ 15 ಭಾರತಕ್ಕೆ ಏಕೆ ವಿಶೇಷ?

ಆಗಸ್ಟ್ 15 ಭಾರತಕ್ಕೆ ರಾಷ್ಟ್ರೀಯ ಹಬ್ಬದ ದಿನವಾಗಿದೆ. ಈ ದಿನ ಭಾರತವು 200 ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷರ ಗುಲಾಮಗಿರಿಯಿಂದ ಸ್ವಾತಂತ್ರ್ಯವನ್ನು ಪಡೆಯಿತು.

ಇದಕ್ಕಾಗಿ ಲೆಕ್ಕವಿಲ್ಲದಷ್ಟು ಹೋರಾಟಗಾರರು ತಮ್ಮ ಜೀವವನ್ನು ತ್ಯಾಗ ಮಾಡಿದರು. ಭಾರತವು 1947ರ ಆಗಸ್ಟ್ 15ರಂದು ಸ್ವತಂತ್ರವಾಯಿತು ಮತ್ತು ನಂತರ ಈ ದಿನವನ್ನು ಪ್ರತಿ ವರ್ಷ ಭಾರತದ ಸ್ವಾತಂತ್ರ್ಯ ದಿನವಾಗಿ ಆಚರಿಸಲಾಗುತ್ತದೆ.

Story first published: Wednesday, August 9, 2023, 21:52 [IST]
Other articles published on Aug 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+