Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಹುಕಾಲದ ಗೆಳತಿ ಜೊತೆಗೆ, ಟೀಂ ಇಂಡಿಯಾ ಬೌಲರ್ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ

Shardul Thakur engagement

ಮುಂಬೈ ಮೂಲಕ ಆಲ್‌ರೌಂಡರ್, ಟೀಂ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ಮೈದಾನದಿಂದ ಹೊರಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಮುಂಬೈನ ಪಾಲ್ಘರ್‌ನ ನಿವಾಸಿ ಶಾರ್ದೂಲ್ ಸೋಮವಾರ ತಮ್ಮ ಗೆಳತಿ ಮಿತ್ತಾಲಿ ಪಾರುಲ್ಕರ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಾಲ್ಕು ಟೆಸ್ಟ್‌ಗಳು, 15 ಏಕದಿನ ಪಂದ್ಯಗಳು ಮತ್ತು 24 ಟಿ20 ಪಂದ್ಯಗಳನ್ನು ಆಡಿರುವ 30 ವರ್ಷದ ವೇಗದ ಬೌಲಿಂಗ್ ಆಲ್‌ರೌಂಡರ್, ಪ್ರಸ್ತುತ ವಿರಾಮದಲ್ಲಿದ್ದಾರೆ , T20 ವಿಶ್ವಕಪ್‌ನಿಂದ ಹಿಂದಿರುಗಿದ ನಂತರ ನ್ಯೂಜಿಲೆಂಡ್ ವಿರುದ್ಧದ ಸ್ವದೇಶಿ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ.

"ಸೋಮವಾರ ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ ಸೌಲಭ್ಯದಲ್ಲಿ ಒಂದು ಸಣ್ಣ ನಿಶ್ಚಿತಾರ್ಥದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕಾಗಿ ಅವರು 75 ಅತಿಥಿಗಳನ್ನು, ಅದ್ರಲ್ಲೂ ಹೆಚ್ಚಾಗಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಆಹ್ವಾನಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮುಂದಿನ ಟಿ20 ವಿಶ್ವಕಪ್ ನಂತರ ಮದುವೆ ನಡೆಯುವ ಸಾಧ್ಯತೆಯಿದೆ'' ಎಂದು ಶಾರ್ದೂ್ಲ್‌ಗೆ ಹತ್ತಿರವಿರುವ ಮೂಲವೊಂದು ತಿಳಿಸಿದೆ.

ಈ ಮೂಲಕ ಶಾರ್ದೂಲ್‌ ಕಾಂಗರೂ ನಾಡಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಆಡಿದ್ದ ಶಾರ್ದೂಲ್ ಠಾಕೂರ್
ಶಾರ್ದೂಲ್ ಠಾಕೂರ್ ಕೊನೆಯ ಬಾರಿಗೆ 2021 ರ ಟಿ 20 ವಿಶ್ವಕಪ್‌ನಲ್ಲಿ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಬಲಗೈ ವೇಗಿ ಟೂರ್ನಮೆಂಟ್‌ನಲ್ಲಿ 2 ಪಂದ್ಯಗಳನ್ನು ಆಡಿದ್ದರು, ಆದರೆ ಒಂದೇ ಒಂದು ವಿಕೆಟ್ ಪಡೆಯಲು ವಿಫಲರಾದರು. ಟಿ20 ವಿಶ್ವಕಪ್ ನಂತರ, ಠಾಕೂರ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿರಾಮ ನೀಡಿತು ಮತ್ತು ಪ್ರಸ್ತುತ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡುತ್ತಿರುವ ಭಾರತೀಯ ತಂಡದ ಭಾಗವಾಗಿಲ್ಲ.

ಅಂತರಾಷ್ಟ್ರೀಯ ಪಂದ್ಯಗಳಷ್ಟೇ ಅಲ್ಲದೆ ಠಾಕೂರ್ ಐಪಿಎಲ್‌ನಲ್ಲಿ 61 ಪಂದ್ಯಗಳನ್ನು ಆಡಿದ್ದಾರೆ ಮತ್ತು 27.87 ರ ಸರಾಸರಿಯಲ್ಲಿ 67 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Monday, November 29, 2021, 16:59 [IST]
Other articles published on Nov 29, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+