ಭಾರತ vs ಡರ್ಬಿಶೈರ್ ಪಂದ್ಯದ ಟಾಸ್ ವರದಿ; ದಿನೇಶ್ ಕಾರ್ತಿಕ್ ನಾಯಕತ್ವದ ತಂಡದ ಆಡುವ ಬಳಗ ಹೀಗಿದೆ

ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದು, ಜಸ್ ಪ್ರೀತ್ ಬುಮ್ರಾ ನಾಯಕತ್ವದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣಸಾಟವನ್ನು ನಡೆಸುತ್ತಿದೆ.
ಹೌದು, ಕಳೆದ ವರ್ಷ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಇದೀಗ ಮರು ಆಯೋಜನೆಯಾಗಿದ್ದು, ಇಂದಿನಿಂದ ( ಜುಲೈ 1 ) ಪ್ರಾರಂಭಗೊಂಡಿದೆ. ಈ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದ ಟೀಮ್ ಇಂಡಿಯಾಗೆ ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಆಸರೆಯಾಗಿದ್ದು, ಟೀಮ್ ಇಂಡಿಯಾ ಅಲ್ಪ ಮೊತ್ತಕ್ಕೆ ಕುಸಿಯುವ ಮುಖಭಂಗದಿಂದ ಪಾರಾಗಿ ಸದ್ಯ ಉತ್ತಮ ಹಂತದಲ್ಲಿದೆ.
ಇತ್ತ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ನಿರತವಾಗಿದ್ದರೆ, ಮತ್ತೊಂದೆಡೆ ಮುಂಬರುವ ಟಿ ಟ್ವೆಂಟಿ ಸರಣಿಗಾಗಿ ದಿನೇಶ್ ಕಾರ್ತಿಕ್ ನಾಯಕತ್ವದ ಯುವ ಆಟಗಾರರನ್ನೊಳಗೊಂಡ ಟೀಂ ಇಂಡಿಯಾ ಡರ್ಬಿಶೈರ್ ಕ್ರಿಕೆಟ್ ತಂಡದ ವಿರುದ್ಧ ಅಭ್ಯಾಸ ಪಂದ್ಯವೊಂದರಲ್ಲಿ ಕಣಕ್ಕಿಳಿದಿದೆ. ಈ ಪಂದ್ಯ ಇಂದು ( ಜುಲೈ 1 ) ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11.30ಕ್ಕೆ ಆರಂಭಗೊಂಡಿದ್ದು, ಡರ್ಬಿಯ ಕೌಂಟಿ ಗ್ರೌಂಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಹಾಗೂ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ದಿನೇಶ್ ಕಾರ್ತಿಕ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಎದುರಾಳಿ ಡರ್ಬಿಶೈರ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ.

ಭಾರತ ಆಡುವ ಬಳಗ
ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ವೆಂಕಟೇಶ್ ಅಯ್ಯರ್, ದಿನೇಶ್ ಕಾರ್ತಿಕ್(ನಾಯಕ/ ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್

ಡರ್ಬಿಶೈರ್ ಆಡುವ ಬಳಗ
ಶಾನ್ ಮಸೂದ್(ನಾಯಕ), ಲೂಯಿಸ್ ರೀಸ್, ವೇಯ್ನ್ ಮ್ಯಾಡ್ಸೆನ್, ಲೆಯುಸ್ ಡು ಪ್ಲೂಯ್, ಬ್ರೂಕ್ ಅತಿಥಿ(ವಿಕೆಟ್ ಕೀಪರ್), ಮ್ಯಾಟಿ ಮೆಕಿರ್ನಾನ್, ಅಲೆಕ್ಸ್ ಹ್ಯೂಸ್, ಬೆನ್ ಐಚಿಸನ್, ಮಾರ್ಕ್ ವ್ಯಾಟ್, ಜಾರ್ಜ್ ಸ್ಕ್ರಿಮ್‌ಶಾ, ಹಿಲ್ಟನ್ ಕಾರ್ಟ್‌ರೈಟ್

ಪಂದ್ಯದ ನೇರ ಪ್ರಸಾರ ವೀಕ್ಷಿಸುವುದು ಹೇಗೆ?
ಇನ್ನು ಭಾರತ ಮತ್ತು ಡರ್ಬಿಶೈರ್ ತಂಡಗಳ ನಡುವಿನ ಈ ಟಿ ಟ್ವೆಂಟಿ ಅಭ್ಯಾಸ ಪಂದ್ಯದ ನೇರ ಪ್ರಸಾರವನ್ನು ಡರ್ಬಿಶೈರ್ ಕೌಂಟಿ ಕ್ರಿಕೆಟ್ ಕ್ಲಬ್‌ನ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ಪ್ರಸಾರ ಮಾಡಲಾಗುತ್ತಿದೆ. ಕ್ರಿಕೆಟ್ ಪ್ರೇಮಿಗಳು ಈ ಯೂಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications