1546 ರನ್!: ಸಚಿನ್, ಕೊಹ್ಲಿ ಅಲ್ಲ, ಇಂಗ್ಲೆಂಡ್ ವಿರುದ್ಧ ಅತಿಹೆಚ್ಚು ಏಕದಿನ ರನ್ ಚಚ್ಚಿರುವ ಭಾರತೀಯ ಈತ!

ಸದ್ಯ ಇಂಗ್ಲೆಂಡ್ ನೆಲದಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಆಂಗ್ಲರ ವಿರುದ್ಧ ಸೀಮಿತ ಓವರ್ ಸರಣಿಗಳಲ್ಲಿ ಪಾಲ್ಗೊಳ್ಳುತ್ತಿದೆ. ಇತ್ತಂಡಗಳ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಈಗಾಗಲೇ ಮುಕ್ತಾಯಗೊಂಡಿದ್ದು, ರೋಹಿತ್ ಶರ್ಮಾ ಬಳಗ 2-1 ಅಂತರದಿಂದ ಟಿ ಟ್ವೆಂಟಿ ಸರಣಿಯನ್ನು ವಶಪಡಿಸಿಕೊಂಡಿದೆ ಹಾಗೂ ನಂತರ ಆರಂಭಗೊಳ್ಳುತ್ತಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೂಡ ಜಯ ಸಾಧಿಸಿ ತವರಿಗೆ ಮರಳುವ ಯೋಜನೆಯಲ್ಲಿದೆ.
ಅತ್ತ ತವರಿನಲ್ಲಿಯೇ ಪ್ರವಾಸಿ ಭಾರತದ ವಿರುದ್ಧ ಟಿ ಟ್ವೆಂಟಿ ಸರಣಿಯನ್ನು ಸೋತು ಭಾರೀ ಮುಖಭಂಗಕ್ಕೆ ಒಳಗಾಗಿರುವ ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ಜಯ ಸಾಧಿಸಿ ಕಮ್ ಬ್ಯಾಕ್ ಮಾಡುವತ್ತ ಚಿತ್ತ ನೆಟ್ಟಿದ್ದು, ಇತ್ತಂಡಗಳ ನಡುವಿನ ಪ್ರಥಮ ಏಕದಿನ ಪಂದ್ಯ ಇಂದು ( ಜುಲೈ 12 ) ಕೆನ್ನಿಂಗ್ಟನ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇನ್ನು ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ಕ್ರಿಕೆಟ್ ಇತಿಹಾಸವನ್ನು ಗಮನಿಸಿದರೆ ಒಟ್ಟು 103 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಟೀಮ್ ಇಂಡಿಯಾ 55 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಇಂಗ್ಲೆಂಡ್ 43 ಪಂದ್ಯಗಳಲ್ಲಿ ಗೆಲುವನ್ನು ಕಂಡಿದೆ. ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದಿರುವ ಒಟ್ಟಾರೆ ಏಕದಿನ ಪಂದ್ಯಗಳಲ್ಲಿ ಎರಡೂ ತಂಡಗಳ ಆಟಗಾರರ ಪೈಕಿ ಅತ್ಯಧಿಕ ರನ್ ಬಾರಿಸಿರುವ ಆಟಗಾರರ ಪಟ್ಟಿ ಮುಂದೆ ಇದೆ ಓದಿ.

ಅತಿ ಹೆಚ್ಚು ರನ್ ಕಲೆಹಾಕಿದವರು
ಭಾರತ ಮತ್ತು ಇಂಗ್ಲೆಂಡ್ ನಡುವಿನ ಒಟ್ಟಾರೆ ಏಕದಿನ ಮುಖಾಮುಖಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿರುವ ಆಟಗಾರರ ಟಾಪ್ 6 ಪಟ್ಟಿ ಈ ಕೆಳಕಂಡಂತಿದೆ
1. ಎಂಎಸ್ ಧೋನಿ - 1546 ರನ್
2. ಯುವರಾಜ್ ಸಿಂಗ್ - 1523 ರನ್
3. ಸಚಿನ್ ತೆಂಡೂಲ್ಕರ್ - 1455 ರನ್
4. ವಿರಾಟ್ ಕೊಹ್ಲಿ - 1307 ರನ್
5. ಸುರೇಶ್ ರೈನಾ - 1207 ರನ್
6. ಇಯಾನ್ ಬೆಲ್ - 1163 ರನ್

ಎಂಎಸ್ ಧೋನಿ ಹೆಸರಿನಲ್ಲಿದೆ ದಾಖಲೆ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಒಟ್ಟಾರೆ ಏಕದಿನ ಪಂದ್ಯಗಳ ಮುಖಾಮುಖಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ ಎಂಬ ದಾಖಲೆಯನ್ನು ಎಂಎಸ್ ಧೋನಿ ನಿರ್ಮಿಸಿದ್ದಾರೆ. ಎಂಎಸ್ ಧೋನಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಒಟ್ಟು 1546 ರನ್ ಚಚ್ಚಿದ್ದಾರೆ ಹಾಗೂ ಇಷ್ಟು ಮೊತ್ತವನ್ನು ಟೀಮ್ ಇಂಡಿಯಾದ ಹಾಗೂ ಇಂಗ್ಲೆಂಡ್ ತಂಡದ ಇತರೆ ಯಾವುದೇ ಆಟಗಾರರೂ ಸಹ ಬಾರಿಸಿಲ್ಲ.

ಟಾಪ್ 5 ಪಟ್ಟಿಯಲ್ಲಿಲ್ಲ ಇಂಗ್ಲೆಂಡ್ ಆಟಗಾರರು
ಭಾರತ ಮತ್ತು ಇಂಗ್ಲೆಂಡ್ ನಡುವಿನ ಒಟ್ಟಾರೆ ಏಕದಿನ ಮುಖಾಮುಖಿ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಆಟಗಾರರ ಟಾಪ್ 5 ಪಟ್ಟಿಯನ್ನು ಟೀಮ್ ಇಂಡಿಯಾ ಆಟಗಾರರು ಅಲಂಕರಿಸಿದ್ದು, ಇಂಗ್ಲೆಂಡ್ ಆಟಗಾರರು ಯಾರೂ ಸಹ ಟಾಪ್ 5ರಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಟೀಮ್ ಇಂಡಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ 1163 ರನ್ ಕಲೆಹಾಕಿರುವ ಇಯಾನ್ ಬೆಲ್ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದು, ಆರನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications