ಐಪಿಎಲ್ ಹರಾಜು: 70 ಸ್ಥಾನಕ್ಕೆ ಸಾವಿರ ಆಟಗಾರರ ಪೈಪೋಟಿ!


ಬೆಂಗಳೂರು, ಡಿಸೆಂಬರ್ 6: ಈ ಬಾರಿಯ ಐಪಿಎಲ್ 12ನೇ ಆವೃತ್ತಿ ಕುತೂಹಲದ ಜೊತೆಗೆ, ಗೊಂದಲಮಯವೂ ಆಗಿದೆ.
ಮೇ ಅಂತ್ಯದಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟ್ ನಡೆಯುವುದರಿಂದ ಆಟಗಾರರ ಮೇಲೆ ಒತ್ತಡ ಹೆಚ್ಚಾಗಲಿದೆ. ಅಲ್ಲದೆ, ದೇಶದಲ್ಲಿ ಸಾರ್ವತ್ರಿಕ ಚುನಾವಣೆಯೂ ಅದೇ ಸಂದರ್ಭದಲ್ಲಿ ನಡೆಯುವುದರಿಂದ ಐಪಿಎಲ್ ಟೂರ್ನಿಯನ್ನು ಬೇರೆ ದೇಶದಲ್ಲಿ ಆಡಿಸುವುದು ಅನಿವಾರ್ಯವಾಗಲಿದೆ.
70 ಆಟಗಾರರ ಸ್ಥಾನಗಳನ್ನು ತುಂಬಿಸಬೇಕಿದ್ದು, 1,003 ಆಟಗಾರರು ಹರಾಜಿಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 232 ವಿದೇಶಿ ಆಟಗಾರರಿದ್ದಾರೆ. 800 ಹೊಸ ಆಟಗಾರರು ಈ ಪಟ್ಟಿಯಲ್ಲಿದ್ದು, 746 ಭಾರತೀಯರಾಗಿದ್ದಾರೆ.
ಹಾಂಕಾಂಗ್, ಐರ್ಲೆಂಡ್, ನೆದರ್‌ಲ್ಯಾಂಡ್ಸ್ ಮತ್ತು ಯುಎಸ್‌ಎ ಇಂದಲೂ ತಲಾ ಒಬ್ಬ ಆಟಗಾರರು ನೋಂದಾಯಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಅತಿ ಹೆಚ್ಚು (59) ಆಟಗಾರರು ಇದ್ದು, ಆಸ್ಟ್ರೇಲಿಯಾ (35), ವೆಸ್ಟ್ ಇಂಡೀಸ್ (33) ಮತ್ತು ಅಫ್ಘಾನಿಸ್ತಾನದ (27) ಆಟಗಾರರು ಐಪಿಎಲ್ ಆಡಲು ಉತ್ಸುಕರಾಗಿದ್ದಾರೆ.
ಶ್ರೀಲಂಕಾ (28), ನ್ಯೂಜಿಲೆಂಡ್ (17), ಇಂಗ್ಲೆಂಡ್ (14), ಬಾಂಗ್ಲಾದೇಶ (10) ಮತ್ತು ಜಿಂಬಾಬ್ವೆಯ (5) ಆಟಗಾರರು ಪೈಪೋಟಿಯಲ್ಲಿದ್ದಾರೆ.
ಡಿಸೆಂಬರ್ 10ರಂದು ಜೈಪುರದಲ್ಲಿ ಐಪಿಎಲ್ ಹರಾಜು ನಡೆಯಲಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಹರಾಜು ನಡೆಯುತ್ತಿಲ್ಲ. ಅಲ್ಲದೆ 12 ಆವೃತ್ತಿಗಳಲ್ಲಿ ಮೊದಲ ಬಾರಿಗೆ ರಿಚರ್ಡ್ ಮ್ಯಾಡ್ಲಿ ಹರಾಜುದಾರರಾಗಿ ಭಾಗವಹಿಸುತ್ತಿಲ್ಲ.
ಅವರ ಬದಲು ಕಲೆ, ಕ್ಲಾಸಿಕ್ ಕಾರುಗಳು ಮತ್ತು ದತ್ತಿ ಹರಾಜುದಾರ ಹೂಜ್ ಎಡ್ಮೀಡ್ಸ್ ಹರಾಜು ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications