ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಜ್ ಕುಂದ್ರಾ, ಮೇಯಪ್ಪನ್ ಗೆ ಕ್ರಿಕೆಟ್ ನಿಂದ ಆಜೀವ ನಿಷೇಧ

By Mahesh

ನವದೆಹಲಿ, ಜುಲೈ 14: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ತ್ರಿಸದಸ್ಯ ಪೀಠ ಮಂಗಳವಾರ ತನ್ನ ತೀರ್ಪು ನೀಡಿದೆ.

ಪ್ರಮುಖ ತಂಡಗಳಾದ ಚೆನೈ ಸೂಪರ್ ಕಿಂಗ್ಸ್ , ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಐಪಿಎಲ್ ನಿಂದ 2 ವರ್ಷ ನಿಷೇಧ ಹೇರಲಾಗಿದೆ. [ಸ್ಪಾಟ್ ಫಿಕ್ಸಿಂಗ್, 4 ಚೆನ್ನೈ ಕ್ರಿಕೆಟರ್ಸ್ ಶಾಮೀಲು: ಮೋದಿ]

ಐಪಿಎಲ್ 2013ರ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಹಾಗೂ ಗುರುನಾಥ್ ಮೇಯಪ್ಪನ್ ಅವರಿಗೆ ಅಜೀವ ನಿಷೇಧ ಹೇರಲಾಗಿದೆ. ಇಬ್ಬರು ಯಾವುದೇ ರೀತಿ ಕ್ರಿಕೆಟ್ ಗೆ ಸಂಬಂಧಿಸಿದ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ. [ಐಪಿಎಲ್ ಹಗರಣ 2013 ರಿಂದ 2015: ಟೈಮ್ ಲೈನ್]

ಐಪಿಎಲ್ 6 ರಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಗೆ ಸಂಬಂಧಿಸಿದಂತೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ, ಅಶೋಕ್ ಭಾನ್ ಮತ್ತು ಆರ್.ವಿ. ರವೀಂದ್ರನ್ ನೇತೃತ್ವದ ತ್ರಿಸದಸ್ಯ ಸಮಿತಿಯನ್ನು ಸುಪ್ರೀಂಕೋರ್ಟ್ ನೇಮಿಸಿತ್ತು.

Gurunath Meiyappan banned for life from cricket

2013ರ ಐಪಿಎಲ್ ಆರನೇ ವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ನ ಶ್ರೀಶಾಂತ್, ಅಜಿತ್ ಚಾಂಡೀಲಾ ಹಾಗೂ ಅಂಕಿತ್ ಚೌಹಾಣ್ ನಡೆಸಿದ ಸ್ಪಾಟ್ ಫಿಕ್ಸಿಂಗ್ ವರದಿ ಬೆಳಕಿಗೆ ಬಂದ ಬೆನ್ನಲ್ಲೇ ತನಿಖೆ ನಡೆಸಲು ಸಮಿತಿ ನೇಮಿಸಲಾಯಿತು.

ಗುರುನಾಥ್ ಮೇಯಪ್ಪನ್ ಒಡೆತನದ 2010, 2011ರಲ್ಲಿ ಚಾಂಪಿಯನ್ ಆಗಿತ್ತು. 2008, 2012, 2013 ಮತ್ತು 2015ರಲ್ಲಿ ರನ್ನರ್‍ಅಪ್ ಆಗಿತ್ತು. ರಾಜ್ ಕುಂದ್ರಾ ಹಾಗೂ ಶಿಲ್ಪಾಶೆಟ್ಟಿ ಸಹ ಮಾಲೀಕತ್ವದ ರಾಜಸ್ಥಾನ ರಾಯಲ್ಸ್ 2008ರ ಐಪಿಎಲ್ ಚಾಂಪಿಯನ್ ಆಗಿತ್ತು.[ಗುರುಬಲವಿಲ್ಲದ ಸಿಂಹ ಮತ್ತು ಕನ್ಯಾರಾಶಿಗೆ ಪರಿಹಾರವೇನು?]

ಇಂಡಿಯಾ ಸಿಮೆಂಟ್ಸ್ ಮಾಲೀಕತ್ವದ ಎಂಎಸ್ ಧೋನಿ ನಾಯಕಯ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 2 ವರ್ಷ ನಿಷೇಧ ಹೇರಲಾಗಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Read in English: CSK suspended for 2 years
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X