ಸ್ಪಾಟ್ ಫಿಕ್ಸಿಂಗ್, 4 ಚೆನ್ನೈ ಕ್ರಿಕೆಟರ್ಸ್ ಶಾಮೀಲು: ಮೋದಿ
ಬೆಂಗಳೂರು, ಮೇ.11: ಇಂಡಿಯನ್ ಪ್ರಿಮಿಯರ್ ಲೀಗ್ ಮಾಜಿ ಆಯುಕ್ತ ಲಲಿತ್ ಮೋದಿ ಅವರು ಸೋಮವಾರ ಮಟ ಮಟ ಮಧ್ಯಾಹ್ನ ಹೊಸ ಬಾಂಬ್ ಎತ್ತಿ ಹಾಕಿದ್ದಾರೆ. ಸರಣಿ ಟ್ವೀಟ್ಸ್ ಮೂಲಕ ಸ್ಪಾಟ್ ಫಿಕ್ಸಿಂಗ್, ಕಳ್ಳಾಟದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಚೆನ್ನೈ ತಂಡದ ನಾಲ್ವರು ಆಟಗಾರರು ಸಾವಿರಾರು ಕೋಟಿ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂದಿದ್ದಾರೆ.
BREAKING STORY ಎಂದು ಟ್ವೀಟ್ ಮಾಡಲಾರಂಭಿಸಿದ ಲಲಿತ್ ಮೋದಿ, ಕಳ್ಳಾಟದ ಬಗ್ಗೆ ಸುಪ್ರೀಂಕೋರ್ಟ್ ಆದೇಶ ನೀಡುವಾಗ ನಾಲ್ವರು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಹೆಸರಿತ್ತು ಎಂದಿದ್ದಾರೆ. [ಮ್ಯಾಚ್ ಫಿಕ್ಸಿಂಗ್ ಬಗ್ಗೆ ಸಚಿನ್ ಏನು ಬರೆದಿದ್ದಾರೆ?]

ಇಂಡಿಯನ್ ಪ್ರಿಮಿಯರ್ ಲೀಗ್ ನ ಪ್ರತಿ ಪಂದ್ಯದ ಮೇಲೆ ಸುಮಾರು 9,000 ರಿಂದ 10,000 ಕೋಟಿ ರು ಬೆಟ್ಟಿಂಗ್ ನಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. [ಐಪಿಎಲ್ 2015ಗೂ ತಟ್ಟಿದ ಫಿಕ್ಸಿಂಗ್ ಭೂತದ ಕಾಟ]
ಆಟಗಾರರು, ಅಧಿಕಾರಿಗಳು, ರಾಜಕಾರಣಿಗಳು ಸಕ್ರಿಯವಾಗಿ ಈ ಕಳ್ಳ ದಂಧೆಯಲ್ಲಿ ತೊಡಗಿದ್ದಾರೆ. ಬೆಟ್ಟಿಂಗ್ ನಿಷೇಧವಿದ್ದರೂ ಎಗ್ಗಿಲ್ಲದೆ ನಡೆಯುತ್ತಿದೆ.
ಕಳ್ಳಾಟದಲ್ಲಿ ಆಟಗಾರರು ತೊಡಗಿದ್ದರೂ ಬಿಸಿಸಿಐ, ಐಸಿಸಿ ಜೋಕರ್ ಗಳು ಸುಮ್ಮನಿದ್ದಾರೆ ಎಂದು ಕಟು ಶಬ್ದಗಳಿಂದ ಐಪಿಎಲ್ ನ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಬರೆದುಕೊಂಡಿದ್ದಾರೆ. [ಸ್ಪಾಟ್ ಫಿಕ್ಸಿಂಗ್ : ವಿಜಯ್ ಮಲ್ಯ, ಪವಾರ್ ಕೂಡಾ ಭಾಗಿ]
ಐಪಿಎಲ್ ಫಿಕ್ಸಿಂಗ್ ನಲ್ಲಿ ಈಗಾಗಲೇ ಬಹಿರಂಗ ಗೊಂಡಿರುವ ಹೆಸರುಗಳು ಕೇವಲ ಕೆಳಮಟ್ಟದ ಹೆಸರುಗಳಾಗಿವೆ. ಎತ್ತರದಲ್ಲಿ ಈ ಎಲ್ಲಾ ದಂಧೆಯ ಬಾಸ್ ಇದ್ದಾನೆ. [ಕ್ರಿಕೆಟರ್ ಶ್ರೀಶಾಂತ್ ಮೇಲೆ ಕೊಲೆ ಯತ್ನ!]
ಈ ಹಿಂದೆ ನಾನು ಒಂದು ಹೆಸರು ಹೇಳಿ ಭಾರಿ ಮೊತ್ತದ ದಂಡ ತೆತ್ತಿದ್ದೇನೆ. ಬಿಸಿಸಿಐ, ಐಸಿಸಿ, ಇಸಿಬಿ, ಕ್ರಿಕೆಟ್ ಆಸ್ಟ್ರೇಲಿಯಾ ಒಗ್ಗೂಡಿ ನನ್ನ ಮೇಲೆ ಷಡ್ಯಂತ್ರ ಹೂಡಿ ದಂಡ ತೆರುವಂತೆ ಮಾಡಿವೆ ಎಂದಿದ್ದಾರೆ.
ಲಲಿತ್ ಮೋದಿ ಸರಣಿ ಟ್ವೀಟ್ಸ್
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications