ಮಳೆ ಜೊತೆಯಲಿ ಐಪಿಎಲ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ
ಕೋಲ್ಕತ್ತಾ, ಏ.8: ಸಿಟಿ ಆಫ್ ಜಾಯ್ ಕೋಲ್ಕತ್ತಾದಲ್ಲಿ ಕ್ರಿಕೆಟ್ ಹಬ್ಬಕ್ಕೆ ಚಾಲನೆ ನೀಡಲಾಗಿದೆ. ಬಾಲಿವುಡ್ ಸ್ಸ್ಟೈಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಪಿಎಲ್ 8ರಲ್ಲಿ ಆಡುವ ತಂಡದ ಆಟಗಾರರು, ನಾಯಕರು ಪಾಲ್ಗೊಂಡು ಅಭಿಮಾನಿಗಳಿಗೆ ಕಿಕ್ ಏರಿಸಿದರು.
ನಿರೀಕ್ಷೆಯಂತೆ ಎಲ್ಲವೂ ನಡೆದರೂ ಕಳೆದ ಹಲವು ಸೀಸನ್ ಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಲಿಸಿದರೆ ಈ ಬಾರಿ ಯಾಕೋ ಡಲ್ ಎನಿಸಿತು. ಡ್ಯಾನ್ಸಿಂಗ್ ಐಕಾನ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ತಮ್ಮ ಟ್ರೇಡ್ ಮಾರ್ಕ್ ಸ್ಟೆಪ್ ಗಳ ಮೂಲಕ ರಂಜಿಸಿದ್ದು ಬಿಟ್ಟರೆ ಪ್ರೇಕ್ಷಕರಿಗೆ ಹೆಚ್ಚಿನ ಮನರಂಜನೆ ಸಿಗಲಿಲ್ಲ. [ಗ್ಯಾಲರಿ: ಐಪಿಎಲ್ 8 ವರ್ಣ ರಂಜಿತ ಆರಂಭ]
ಎಲ್ಲವೂ ಬಾಲಿವುಡ್ ಸ್ಟೈಲಿನಲ್ಲಿ ನಡೆದರೆ ಸೈಫ್ ಅಲಿ ಖಾನ್ ನಿರೂಪಣೆ ಆಯೋಜಕರಿಗೆ ಪ್ರೀತಿಯಾಗಬೇಕು. ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಹೆಚ್ಚಿನ ಶಿಳ್ಳೆ, ಚಪ್ಪಾಳೆ ಬಂದಿದ್ದು ಮಾತ್ರ ಕ್ರಿಕೆಟರ್ಸ್ ಎಂಟ್ರಿ ಕೊಟ್ಟಾಗ.. ಅದರಲ್ಲೂ ವಿರಾಟ್ ಕೊಹ್ಲಿ, ಎಂಎಸ್ ಧೋನಿ ಹಾಗೂ ಗೌತಮ್ ಗಂಭೀರ್ ಬಂದಾಗ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತು. [ಐಪಿಎಲ್ 8: 47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್]
ಅನುಷ್ಕಾ ಶರ್ಮ, ಫರ್ಹಾನ್ ಅಖ್ತರ್ ಹಾಗೂ ಶಾಹೀದ್ ಕಪೂರ್ ಡ್ಯಾನ್ಸ್, ಸಂಗೀತ ಅಷ್ಟಾಗಿ ಮೆಚ್ಚುಗೆ ಪಡೆಯಲಿಲ್ಲ. ಕಾರ್ಯಕ್ರಮಕ್ಕೆ ಮಳೆಯ ಅಡ್ಡಿ, ನಿಧಾನಗತಿಯಲ್ಲಿ ಸಾಗಿದ ಶೋ ಎಲ್ಲವೂ ಪ್ರೇಕ್ಷಕರಿಗೆ ಹಿಂಸೆಯಾಯಿತು.

ಹೌದು ಐಪಿಎಲ್ ಶೋ ಬಾಲಿವುಡ್ ಶೋ ಏಕೆ?
ಹೌದು ಐಪಿಎಲ್ ಶೋ ಬಾಲಿವುಡ್ ಶೋ ಏಕೆ? ಎಂಬ ಪ್ರಶ್ನೆ ಎದ್ದಿದೆ. ದೇಶದ ವಿವಿಧ ಭಾಗಗಳ ತಂಡಗಳು ಇರುವಾಗ ಬೆಂಗಾಲಿ, ಕನ್ನಡ, ತೆಲುಗು, ತಮಿಳು, ಮರಾಠಿ ಚಿತ್ರಗಳ ಇಲ್ಲವೇ ಸಂಸ್ಕೃತಿ ಝಲಕ್ ಕೂಡಾ ಇಲ್ಲದ ಐಪಿಎಲ್ ಬಗ್ಗೆ ಟ್ವಿಟ್ಟರ್ ನಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಫರ್ಹಾನ್ ಅಖ್ತರ್ ರಾಕ್ ಬಾಂಡ್
ಫರ್ಹಾನ್ ಅಖ್ತರ್ ರಾಕ್ ಬಾಂಡ್ ರಾಕ್ ಆನ್ ಚಿತ್ರದ ಸಂಗೀತ ಧಾರೆ ಹರಿಸಿತು.

ಸ್ಟೇಡಿಯಂನಲ್ಲಿ ಪಟಾಕಿ ಬಾಣ ಬಿರಿಸು
ಕೋಲ್ಕತ್ತಾದ ಸ್ಟಾಲ್ ಲೇಕ್ ಸ್ಟೇಡಿಯಂನಲ್ಲಿ ಪಟಾಕಿ, ಬಾಣ ಬಿರಿಸುಗಳ ಅಬ್ಬರ ಕಣ್ಮನ ಸೆಳೆಯಿತು.
ಅನುಷ್ಕಾ ಶರ್ಮ ಡ್ಯಾನ್ಸ್
ಬೆಂಗಳೂರು ಬೆಡಗಿ ಅನುಷ್ಕಾ ಶರ್ಮ ಡ್ಯಾನ್ಸ್ ಸಾಧಾರಣವಾಗಿತ್ತು. ಅನುಷ್ಕಾ ಕಾಸ್ಟೂಮ್ ಆಗಲಿ, ಡ್ಯಾನ್ಸ್ ಸ್ಟೆಪ್ ಆಗಲಿ ಆಕರ್ಷಕವಾಗಿರಲಿಲ್ಲ.
ಪೆಪ್ಸಿ ಐಪಿಎಲ್ ನಾಯಕರುಗಳು
ಪೆಪ್ಸಿ ಐಪಿಎಲ್ 8 ತಂಡಗಳ ನಾಯಕರುಗಳು ಒಟ್ಟಿಗೆ ಪೋಸ್
ಎಲ್ಲರ ಮನಗೆದ್ದ ಹೃತಿಕ್ ರೋಷನ್
ಎಲ್ಲರ ಮನಗೆದ್ದ ಹೃತಿಕ್ ರೋಷನ್ ಬ್ಯಾಂಗ್ ಬ್ಯಾಂಗ್ ಚಿತ್ರ, ಧೂಮ್ 2 ಚಿತ್ರದ ಸ್ಟೆಪ್ ಹಾಕಿದರು.
ಟ್ರೇಡ್ ಮಾರ್ಕ್ ಸ್ಟೆಪ್ಸ್ ಹಾಕಿದ ಹೃತಿಕ್
ಪ್ರೇಕ್ಷಕರ ಒತ್ತಾಯದ ಮೇರೆಗೆ ಕಹೋನಾ ಪ್ಯಾರ್ ಹೇ ಚಿತ್ರದ ಟ್ರೇಡ್ ಮಾರ್ಕ್ ಸ್ಟೆಪ್ಸ್ ಹಾಕಿದ ಹೃತಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications