ಕಳೆದ ಐಪಿಎಲ್ ಫೈನಲ್ ಪಂದ್ಯ ಮತ್ತೆ ಮರುಕಳಿಸುವುದೆ?
ಪುಣೆ, ಏ. 18: ಕಳೆದ ಐಪಿಎಲ್ ಫೈನಲ್ ಆಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆಲ್ ಪಂಜಾಬ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಬೆಂಗಳೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೆಕೆಆರ್ ವಿಜಯಿಯಾಗಿ ಹೊರಹೊಮ್ಮಿತ್ತು. 200ಕ್ಕೂ ಅಧಿಕ ಮೊತ್ತವನ್ನು ಶಾರುಖ್ ಹುಡುಗರು ಅನಾಯಾಸವಾಗಿ ಚೇಸ್ ಮಾಡಿದ್ದರು.
ಈ ಬಾರಿಯ ಐಪಿಎಲ್ ತಂಡದಲ್ಲಿ ಅನೇಕ ಬದಲಾವಣೆಗಳಾಗಿವೆ. ಮೊದಲಿನಿಂದಲೂ ಸಂಘಟಿತ ಪ್ರದರ್ಶನ ನೀಡುತ್ತಾ ಬಂದಿರುವ ಕೋಲ್ಕತ್ತಾಕ್ಕೆ ಪಂಜಾಬ್ ತಂಡ ಸವಾಲು ನೀಡಬಹುದೇ? ಎಂಬ ಪ್ರಶ್ನೆ ಕಾಡುತ್ತಿದೆ. ವಿದೇಶಿ ಆಟಗಾರರನ್ನು ನೆಚ್ಚಿಕೊಂಡಿರುವ ಪಂಜಾಬ್ ಮತ್ತು ದೇಶಿ ಆಟಗಾರರ ಪಡೆ ಹೊಂದಿರುವ ಕೋಲ್ಕತ್ತಾ ನಡುವೆ ಪಂದ್ಯ ನಡೆಯಲಿದ್ದು ಅಭಿಮಾನಿಗಳಿಗೆ ತುರುಸಿನ ಆಟ ನೋಡಲು ಅಡ್ಡಿಯಿಲ್ಲ.[ಬ್ಯಾಟಿಂಗ್ ಮರೆತು ಸೋತ್ರಾ ಪ್ರೀತಿ ಹುಡುಗರು!]

ಪಂದ್ಯದ ಇತರ ಮಾಹಿತಿಯನ್ನು ನೋಡೋಣ
ಪಂಜಾಬ್ ಮತ್ತು ಕೋಲ್ಕತ್ತಾ ನಡುವೆ ಪಂದ್ಯ
ಎಂಸಿಎ ಕ್ರೀಡಾಂಗಣ ಪುಣೆ
ಏಪ್ರಿಲ್ 18, ಶನಿವಾರ, ರಾತ್ರಿ 8 ಗಂಟೆಗೆ
ಯಾವ ವಾಹಿನಿಯಲ್ಲಿ ವೀಕ್ಷಣೆ ಮಾಡಬಹುದು
* ಸೋನಿ ಮಾಕ್ಸ್(ಹಿಂದಿ)
* ಸೋನಿ ಪಿಕ್ಸ್(ಇಂಗ್ಲಿಷ್)
* ಸೋಣಿ ಆಥ್ (ಬೆಂಗಾಳಿ)
* ಸೋನಿ ಕಿಕ್ಸ್(ತಮಿಳು, ತೆಲಗು)
ಪ್ರಮುಖ ಆಟಗಾರರು
* ಪಂಜಾಬ್: ವಿರೇಂದ್ರ ಸೆಹ್ವಾಗ್, ಗ್ಲೇನ್ ಮಾಕ್ಸ್ ವೆಲ್, ಮಿಚಲ್ ಜಾನ್ಸನ್
* ಕೋಲ್ಕತ್ತಾ: ಗೌತಮ್ ಗಂಭೀರ, ರಾಬಿನ್ ಉತ್ತಪ್ಪ, ಸುನೀಲ್ ನಾರಾಯಣ್[ವಿಶ್ವಕಪ್ 2015 ಹಿಂದಕ್ಕೆ ದೂಡಿದ ಐಪಿಎಲ್ ಹಬ್ಬ]
ಮುಖಾಮುಖಿ
ಪಂಜಾಬ್: 9, ಕೆಕೆಆರ್: 6
ಕಳೆದ ಬಾರಿಯ ಅಂದರೆ 2014 ರ ಫೈನಲ್ ನಲ್ಲಿ ಕೆಕೆಆರ್ ಪಂಜಾಬ್ ನ್ನು ಸೋಲಿಸಿತ್ತು.
ಈ ಬಾರಿ ಅಂಕಪಟ್ಟಿಯಲ್ಲಿ ಸ್ಥಾನ
ಕೆಕೆಆರ್: 3( 1 ಜಯ, 1 ಸೋಲು)
ಪಂಜಾಬ್: 5 (1 ಜಯ, 2 ಸೋಲು)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications